Home Bibles ಮಾರ್ಕ 1:16 · ಕನ್ನಡ ಬೈಬಲ್
ಮಾರ್ಕ 1:16 · ಕನ್ನಡ ಬೈಬಲ್

ಆತನು ಗಲಿಲಾಯ ಸಮುದ್ರದ ಬಳಿಯಲ್ಲಿ ತಿರುಗಾಡುತ್ತಿರುವಾಗ ಸೀಮೋನನೂ ಅವನ ಸಹೋ ದರನಾದ ಅಂದ್ರೆಯನೂ ಸಮುದ್ರದಲ್ಲಿ ಬಲೆ ಬೀಸುತ್ತಿರುವದನ್ನು ಆತನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.

Cross references

ಮತ್ತಾಯ 4:18

ಮತ್ತು ಯೇಸು ಗಲಿಲಾಯ ಸಮುದ್ರದ ತೀರದಲ್ಲಿ ನಡೆದುಹೋಗುತ್ತಿದ್ದಾಗ ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ ಎಂಬ ಇಬ್ಬರು ಸಹೋದರರು ಸಮುದ್ರ ದಲ್ಲಿ ಬಲೆ ಬೀಸುವದನ್ನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.

ಮತ್ತಾಯ 10:2

ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು: ಮೊದಲನೆಯವನು ಪೇತ್ರನೆಂದು ಕರೆಯಲ್ಪಟ್ಟ ಸೀಮೋನ, ಅವನ ಸಹೋದರನಾದ ಅಂದ್ರೆಯ, ಜೆಬೆದಾಯನ ಮಗನಾದ ಯಾಕೋಬ ಮತ್ತು ಅವನ ಸಹೋದರನಾದ ಯೋಹಾನ,

ಮಾರ್ಕ 1:16

ಆತನು ಗಲಿಲಾಯ ಸಮುದ್ರದ ಬಳಿಯಲ್ಲಿ ತಿರುಗಾಡುತ್ತಿರುವಾಗ ಸೀಮೋನನೂ ಅವನ ಸಹೋ ದರನಾದ ಅಂದ್ರೆಯನೂ ಸಮುದ್ರದಲ್ಲಿ ಬಲೆ ಬೀಸುತ್ತಿರುವದನ್ನು ಆತನು ಕಂಡನು; ಯಾಕಂದರೆ ಅವರು ಬೆಸ್ತರಾಗಿದ್ದರು.

ಮಾರ್ಕ 3:16

ಆತನು ಸೀಮೋನನಿಗೆ ಪೇತ್ರನೆಂದು ಹೆಸರಿಟ್ಟನು.

ಮಾರ್ಕ 3:18

ಮತ್ತು ಅಂದ್ರೆಯ, ಫಿಲಿಪ್ಪ, ಬಾರ್ತೂಲೊಮಾಯ, ಮತ್ತಾಯ, ತೋಮ, ಅಲ್ಫಾಯನ ಮಗನಾದ ಯಾಕೋಬ, ತದ್ದಾಯ, ಕಾನಾನ್ಯನಾದ ಸೀಮೋನ,

ಲೂಕ 5:1

ಇದಾದ ಮೇಲೆ ಆತನು ಗೆನೇಜರೆತ್‌ ಕೆರೆಯ ಬಳಿಯಲ್ಲಿ ನಿಂತುಕೊಂಡಿದ್ದಾಗ ಜನರು ದೇವರ ವಾಕ್ಯವನ್ನು ಕೇಳುವದಕ್ಕಾಗಿ ಆತನ ಮೇಲೆ ನೂಕಾಡುತ್ತಿದ್ದರು.

ಲೂಕ 6:14

ಅವರು (ಆತನು ಪೇತ್ರನೆಂದು ಕರೆದ) ಸೀಮೋನ, ಅವನ ಸಹೋದರನಾದ ಅಂದ್ರೆಯ, ಯಾಕೋಬ,ಯೋಹಾನ, ಫಿಲಿಪ್ಪ, ಬಾರ್ತೊಲೊಮಾಯ,

ಯೋಹಾನ 1:40

ಯೋಹಾ ನನ ಮಾತನ್ನು ಕೇಳಿ ಆತನನ್ನು ಹಿಂಬಾಲಿಸಿದ ಇಬ್ಬರಲ್ಲಿ ಸೀಮೋನ್‌ ಪೇತ್ರನ ಸಹೋದರನಾದ ಅಂದ್ರೆಯನು ಒಬ್ಬನಾಗಿದ್ದನು.

ಯೋಹಾನ 6:8

ಆಗ ಆತನ ಶಿಷ್ಯರಲ್ಲಿ ಒಬ್ಬನಾಗಿರುವ ಸೀಮೋನ್‌ ಪೇತ್ರನ ಸಹೋದರನಾದ ಅಂದ್ರೆಯನು ಆತನಿಗೆ--

ಯೋಹಾನ 12:22

ಫಿಲಿಪ್ಪನು ಬಂದು ಅಂದ್ರೆಯನಿಗೆ ಹೇಳಿ ದನು; ಅಂದ್ರೆಯನೂ ಫಿಲಿಪ್ಪನೂ ತಿರಿಗಿ ಯೇಸುವಿಗೆ ಹೇಳಿದರು.

ಅಪೋಸ್ತಲರ ಕೃತ್ಯಗಳು 1:13

ಪೇತ್ರ, ಯಾಕೋಬ, ಯೋಹಾನ, ಅಂದ್ರೆಯ, ಫಿಲಿಪ್ಪ, ತೋಮ, ಬಾರ್ತೊಲೊಮಾಯ, ಮತ್ತಾಯ, ಅಲ್ಫಾ ಯನ ಮಗನಾದ ಯಾಕೋಬ, ಜೆಲೋತನೆಂಬ ಸೀಮೋನ ಮತ್ತು ಯಾಕೋಬನ ಸಹೋದರನಾದ ಯೂದಾ ಇವರು (ಪಟ್ಟಣದ) ಒಳಕ್ಕೆ ಬಂದು ತಾವು ಇರುತ್ತಿದ್ದ ಮೇಲಂತಸ್ತಿನ ಕೊಠಡಿಯೊಳಕ್ಕೆ ಹೋದರು.

Interlinear

Choose Theme