Home Bibles ಲೂಕ 5:7 · ಕನ್ನಡ ಬೈಬಲ್
ಲೂಕ 5:7 · ಕನ್ನಡ ಬೈಬಲ್

ಆಗ ಬೇರೆ ದೋಣಿ ಯಲ್ಲಿದ್ದ ತಮ್ಮ ಪಾಲುಗಾರರು ಬಂದು ತಮಗೆ ಸಹಾಯ ಮಾಡಬೇಕೆಂದು ಅವರು ಸನ್ನೆ ಮಾಡಿದರು; ಮತ್ತು ಅವರು ಬಂದು ಎರಡು ದೋಣಿಗಳನ್ನು ತುಂಬಿ ಸಲಾಗಿ ಅವು ಮುಳುಗಲಾರಂಭಿಸಿದವು.

Cross references

ನಿರ್ಗಮಕಾಂಡ 23:5

ನಿನ್ನನ್ನು ಹಗೆ ಮಾಡುವವನ ಕತ್ತೆ ಹೊರೆಯ ಕೆಳಗೆ ಬಿದ್ದಿರುವದನ್ನು ನೀನು ಕಂಡಾಗ ಅವನಿಗೆ ಸಹಾಯ ಮಾಡಲು ಮನಸ್ಸಿಲ್ಲದಿದ್ದರೂ ನೀನು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು.

ಸಾಮೇತಿಗಳು 18:24

ಸ್ನೇಹಿತರಿದ್ದವನು ಸ್ನೇಹವಾಗಿ ನಡೆದುಕೊಳ್ಳಬೇಕು. ಸಹೋದರನಿಗಿಂತ ಹತ್ತಿರ ಹೊಂದಿಕೊಳ್ಳುವ ಸ್ನೇಹಿತನಿದ್ದಾನೆ.

ಅಪೋಸ್ತಲರ ಕೃತ್ಯಗಳು 11:25

ತರುವಾಯ ಬಾರ್ನಬನು ಸೌಲನನ್ನು ಹುಡುಕುವದಕ್ಕಾಗಿ ತಾರ್ಸಕ್ಕೆ ಹೊರಟುಹೊಗಿ

ರೋಮಾಪುರದವರಿಗೆ 16:2

ನೀವು ಆಕೆಯನ್ನು ಪರಿಶುದ್ಧರಿಗೆ ತಕ್ಕಂತೆ ಕರ್ತನಲ್ಲಿ ಅಂಗೀಕರಿಸಿ ಆಕೆಯ ಕೆಲಸದಲ್ಲಿ ಆಕೆಗೆ ಅವಶ್ಯವಾದ ಸಹಾಯವನ್ನು ಮಾಡಿರಿ; ಆಕೆಯು ನನಗೂ ಅನೇಕರಿಗೂ ಸಹಾಯ ಮಾಡಿದವಳಾಗಿದ್ದಾಳೆ.

ಗಲಾತ್ಯದವರಿಗೆ 6:2

ಒಬ್ಬನು ಮತ್ತೊಬ್ಬನ ಭಾರವನ್ನು ಹೊತ್ತುಕೊಳ್ಳಲಿ; ಹೀಗೆ ಕ್ರಿಸ್ತನ ನಿಯಮವನ್ನು ನೆರವೇರಿಸಿರಿ.

ಫಿಲಿಪ್ಪಿಯವರಿಗೆ 4:3

ನಿಜ ಜೊತೆಗಾರನೇ, ನೀನು ಆ ಸ್ತ್ರೀಯರಿಗೆ ಸಹಾಯಕ ನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್‌ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು. ಅವರ ಹೆಸರುಗಳು ಜೀವಗ್ರಂಥದಲ್ಲಿ ಬರೆದವೆ.

Interlinear

Choose Theme