ನಿರ್ಗಮಕಾಂಡ 23:5 · ಕನ್ನಡ ಬೈಬಲ್
ನಿನ್ನನ್ನು ಹಗೆ ಮಾಡುವವನ ಕತ್ತೆ ಹೊರೆಯ ಕೆಳಗೆ ಬಿದ್ದಿರುವದನ್ನು ನೀನು ಕಂಡಾಗ ಅವನಿಗೆ ಸಹಾಯ ಮಾಡಲು ಮನಸ್ಸಿಲ್ಲದಿದ್ದರೂ ನೀನು ಖಂಡಿತವಾಗಿ ಅವನಿಗೆ ಸಹಾಯಮಾಡಬೇಕು.
Cross references
ದ್ವಿತೀಯೋಪದೇಶಕಾಂಡ 22:4
ನೀನು ಕಾಣದವನಂತೆ ಇರಬಾರದು. ನಿನ್ನ ಸಹೋದರನ ಕತ್ತೆಯಾಗಲಿ ಎತ್ತಾಗಲಿ ಮಾರ್ಗ ದಲ್ಲಿ ಬಿದ್ದಿರುವದನ್ನು ನೋಡಿದರೆ ಅಲಕ್ಷ್ಯಮಾಡ ಬೇಡ; ಹೇಗಾದರೂ ಅವುಗಳನ್ನು ಎಬ್ಬಿಸುವದಕ್ಕೆ ಅವನಿಗೆ ಖಂಡಿತಾ ಸಹಾಯಮಾಡಬೇಕು.