Home Bibles ಲೂಕ 2:9 · ಕನ್ನಡ ಬೈಬಲ್
ಲೂಕ 2:9 · ಕನ್ನಡ ಬೈಬಲ್

ಇಗೋ, ಕರ್ತನ ದೂತನು ಅವರ ಬಳಿಗೆ ಬಂದನು. ಆಗ ಕರ್ತನ ಮಹಿಮೆಯು ಅವರ ಸುತ್ತಮುತ್ತಲೂ ಪ್ರಕಾಶಿ ಸಿತು; ಆದದರಿಂದ ಅವರು ಬಹಳವಾಗಿ ಹೆದರಿದರು.

Cross references

ನಿರ್ಗಮಕಾಂಡ 16:7

ಬೆಳಿಗ್ಗೆ ಕರ್ತನ ಮಹಿಮೆ ಯನ್ನು ನೋಡುವಿರಿ; ಕರ್ತನಿಗೆ ವಿರೋಧವಾಗಿ ನೀವು ಗುಣುಗುಟ್ಟಿದ್ದನ್ನು ಆತನು ಕೇಳಿದ್ದಾನೆ; ನಮಗೆ ವಿರೋಧ ವಾಗಿ ನೀವು ಗುಣುಗುಟ್ಟುವ ಹಾಗೆ ನಾವು ಯಾರು ಅಂದರು.

ನಿರ್ಗಮಕಾಂಡ 16:10

ಆರೋನನು ಇಸ್ರಾಯೇಲ್‌ ಮಕ್ಕಳ ಸಭೆಯ ಸಂಗಡ ಮಾತನಾಡುತ್ತಿದ್ದಾಗ ಅವರು ಅರಣ್ಯದ ಕಡೆಗೆ ನೋಡಿ ದರು. ಆಗ ಇಗೋ, ಕರ್ತನ ಮಹಿಮೆಯು ಮೇಘದಲ್ಲಿ ಪ್ರತ್ಯಕ್ಷವಾಯಿತು.

ನಿರ್ಗಮಕಾಂಡ 40:34

ಆಗ ಮೇಘವು ಸಭೆಯ ಡೇರೆಯನ್ನು ಮುಚ್ಚಿಕೊಂಡು ಕರ್ತನ ಮಹಿಮೆಯು ಗುಡಾರವನ್ನು ತುಂಬಿಕೊಂಡಿತು.

ನ್ಯಾಯಾಧಿಪತಿಗಳು 6:11

ಕರ್ತನ ದೂತನು ಬಂದು ಅಬೀಯೆಜೆರನಾದ ಯೋವಾಷನು ಹೊಂದಿದ ಒಫ್ರದಲ್ಲಿರುವ ಏಲಾ ಮರದ ಕೆಳಗೆ ಕುಳಿತನು. ಆಗ ಯೋವಾಷನ ಮಗ ನಾದ ಗಿದ್ಯೋನನು ಮಿದ್ಯಾನ್ಯರಿಗೆ ಮರೆಯಾಗುವ ಹಾಗೆ ದ್ರಾಕ್ಷೇ ಆಲೆಯ ಬಳಿಯಲ್ಲಿ ಗೋಧಿಯನ್ನು ಬಡಿಯುತ್ತಿದ್ದನು.

1 ಅರಸುಗಳು 8:11

ಕರ್ತನ ತೇಜಸ್ಸಿ ನಿಂದ ವ್ಯಾಪ್ತವಾಗಿದ್ದ ಮೇಘವು ಆಲಯವನ್ನು ತುಂಬಿ ಕೊಂಡದರಿಂದ ಯಾಜಕರು ಅಲ್ಲಿ ನಿಂತು ಸೇವೆಮಾಡ ಲಾರದವರಾದರು.

ಯೆಶಾಯ 6:3

ಒಬ್ಬನು ಮತ್ತೊಬ್ಬನಿಗೆ--ಸೈನ್ಯಗಳ ಕರ್ತನು ಪರಿ ಶುದ್ಧನು, ಪರಿಶುದ್ಧನು, ಪರಿಶುದ್ಧನು, ಭೂಮಂಡಲ ವೆಲ್ಲಾ ಆತನ ಮಹಿಮೆಯಿಂದ ತುಂಬಿಯದೆ ಎಂದು ಕೂಗಿ ಹೇಳಿದನು.

ಯೆಶಾಯ 35:2

ಅದು ಸಮೃದ್ಧಿಯಾಗಿ ಅರಳಿ ಆನಂದ ಸ್ವರವನ್ನೆತ್ತಿ ಉಲ್ಲಾಸಿಸುವದು. ಲೆಬ ನೋನಿನ ಘನತೆಯು ಕರ್ಮೆಲ್‌ ಮತ್ತು ಶಾರೋ ನಿನ ಗೌರವವು ಅದಕ್ಕೆ ಕೊಡಲ್ಪಡುವದು, ಅವರು ಕರ್ತನ ಮಹಿಮೆಯನ್ನೂ ನಮ್ಮ ದೇವರ ಘನತೆ ಯನ್ನೂ ನೋಡುವರು.

ಯೆಶಾಯ 40:5

ಎಲ್ಲಾ ಮನುಷ್ಯರು ಒಟ್ಟಿಗೆ ಅದನ್ನು ಕಾಣುವರು ಕರ್ತನ ಬಾಯಿಯೇ ಇದನ್ನು ನುಡಿದದೆ ಎಂದು ಒಬ್ಬನು ಕೂಗುತ್ತಾನೆ.

ಯೆಶಾಯ 60:1

ಏಳು, ಪ್ರಕಾಶಿಸು; ಯಾಕಂದರೆ, ನಿನ್ನ ಬೆಳಕು ಬಂತು; ಕರ್ತನ ಮಹಿಮೆಯು ನಿನ್ನ ಮೇಲೆ ಉದಯವಾಯಿತು.

ಯೆಹೆಜ್ಕೇಲ 3:23

ಆಮೇಲೆ ನಾನು ಎದ್ದು ಬಯಲು ಸೀಮೆಯ ಕಡೆಗೆ ಹೋದೆನು; ಇಗೋ, ಕರ್ತನ ಮಹಿಮೆಯ ಅಲ್ಲಿ ನಿಂತಿದೆ. ಅದು ಕೆಬಾರ್‌ ನದಿಯ ಹತ್ತಿರ ನಾನು ನೋಡಿದ ಮಹಿಮೆಯ ಪ್ರಕಾರವಾಗಿದೆ. ಆಗ ನಾನು ಮುಖ ಕೆಳಗಾಗಿ ಬಿದ್ದೆನು.

ಮತ್ತಾಯ 1:20

ಅವನು ಇವುಗಳನ್ನು ಆಲೋಚನೆ ಮಾಡುತ್ತಿದ್ದಾಗ ಇಗೋ, ಕರ್ತನ ದೂತನು ಅವನಿಗೆ ಕನಸಿನಲ್ಲಿ ಕಾಣಿಸಿ ಕೊಂಡು-- ಯೋಸೇಫನೇ, ದಾವೀದನ ಕುಮಾರನೇ, ನಿನ್ನ ಹೆಂಡತಿಯಾದ ಮರಿಯಳನ್ನು ಸೇರಿಸಿಕೊಳ್ಳು ವದಕ್ಕೆ ಭಯಪಡಬೇಡ; ಯಾಕಂದರೆ ಆಕೆಯ ಗರ್ಭವು ಪವಿತ್ರಾತ್ಮನಿಂದಲೇ ಆಗಿದೆ.

ಲೂಕ 1:11

ಆಗ ಧೂಪ ವೇದಿಯ ಬಲಗಡೆಯಲ್ಲಿ ನಿಂತುಕೊಂಡಿದ್ದ ಕರ್ತನ ದೂತನು ಅವನಿಗೆ ಕಾಣಿಸಿಕೊಂಡನು.

ಲೂಕ 1:28

ಆ ದೂತನು ಆಕೆಗೆ--ಅಪಾರ ದಯೆ ಹೊಂದಿದವಳೇ, ನಿನಗೆ ವಂದನೆ; ಕರ್ತನು ನಿನ್ನೊಂದಿಗಿದ್ದಾನೆ; ಸ್ತ್ರೀಯರಲ್ಲಿ ನೀನು ಧನ್ಯಳೇ ಎಂದು ಹೇಳಿದನು.

ಲೂಕ 24:4

ಅವರು ಇದಕ್ಕಾಗಿ ಬಹಳವಾಗಿ ಕಳವಳಗೊಂಡರು; ಆಗ ಇಗೋ, ಹೊಳೆಯುವ ವಸ್ತ್ರಗಳನ್ನು ಧರಿಸಿದ್ದ ಇಬ್ಬರು ಪುರುಷರು ಅವರ ಬಳಿಯಲ್ಲಿ ನಿಂತಿದ್ದರು.

ಯೋಹಾನ 12:41

ಯೆಶಾಯನು ಆತನ ಮಹಿಮೆಯನ್ನು ನೋಡಿದ್ದರಿಂದ ಆತನ ವಿಷಯವಾಗಿ ಇವುಗಳನ್ನು ಹೇಳಿದನು.

ಅಪೋಸ್ತಲರ ಕೃತ್ಯಗಳು 5:19

ಆದರೆ ರಾತ್ರಿಯಲ್ಲಿ ಕರ್ತನ ದೂತನು ಸೆರೆ ಮನೆಯ ಬಾಗಿಲುಗಳನ್ನು ತೆರೆದು ಅವರನ್ನು ಹೊರಕ್ಕೆ ತಂದು--

ಅಪೋಸ್ತಲರ ಕೃತ್ಯಗಳು 12:7

ಆಗ ಇಗೋ, ಕರ್ತನ ದೂತನು ಪೇತ್ರನ ಬಳಿಗೆ ಬಂದಾಗ ಅವನಿದ್ದ ಸೆರೆಮನೆಯಲ್ಲಿ ಬೆಳಕು ಹೊಳೆಯಿತು. ಅವನು ಪೇತ್ರನನ್ನು ಪಕ್ಕೆ ತಟ್ಟಿ ಎಬ್ಬಿಸಿ--ತಟ್ಟನೆ ಏಳು ಅಂದನು. ಆಗಲೇ ಅವನ ಕೈಗಳಿಂದ ಸರಪಣಿಗಳು ಕಳಚಿಬಿದ್ದವು.

ಅಪೋಸ್ತಲರ ಕೃತ್ಯಗಳು 22:6

ತರುವಾಯ ನಾನು ಪ್ರಯಾಣಮಾಡುತ್ತಾ ಸುಮಾರು ಮಧ್ಯಾಹ್ನದ ಸಮಯದಲ್ಲಿ ದಮಸ್ಕದ ಹತ್ತಿರ ಬಂದಾಗ ಫಕ್ಕನೆ ಆಕಾಶದಿಂದ ಒಂದು ದೊಡ್ಡ ಬೆಳಕು ನನ್ನ ಸುತ್ತಲೂ ಹೊಳೆಯಿತು.

ಅಪೋಸ್ತಲರ ಕೃತ್ಯಗಳು 26:13

ಓ ರಾಜನೇ, ನಾನು ದಾರಿಯಲ್ಲಿದ್ದಾಗ ಮಧ್ಯಾಹ್ನದಲ್ಲಿ ನನ್ನ ಮತ್ತು ನನ್ನ ಜೊತೆಯಲ್ಲಿ ಪ್ರಯಾಣ ಮಾಡುತ್ತಿದ್ದವರ ಸುತ್ತಲೂ ಸೂರ್ಯನ ಪ್ರಕಾಶಕ್ಕಿಂತ ಹೆಚ್ಚಾದ ಬೆಳಕು ಪರಲೋಕ ದಿಂದ ಪ್ರಕಾಶಿಸುತ್ತಿರುವದನ್ನು ನಾನು ಕಂಡೆನು.

ಅಪೋಸ್ತಲರ ಕೃತ್ಯಗಳು 27:23

ನಾನು ಯಾರವನಾಗಿದ್ದೇನೋ ಯಾರನ್ನು ಸೇವಿಸುತ್ತೇನೊ ಆ ದೇವರ ದೂತನು ಈ ರಾತ್ರಿಯಲ್ಲಿ ನನ್ನ ಹತ್ತಿರ ನಿಂತು--

2 ಕೊರಿಂಥದವರಿಗೆ 3:18

ಆದರೆ ನಾವೆಲ್ಲರೂ ತೆರೆದ ಮುಖವುಳ್ಳವರಾಗಿ ದರ್ಪಣದಲ್ಲಿ ಕಾಣುವಂತೆ ಕರ್ತನ ಮಹಿಮೆಯನ್ನು ನೋಡುತ್ತಾ ಕರ್ತನ ಆತ್ಮನಿಂದಲೋ ಎಂಬಂತೆ ಅದೇ ಸಾರೂಪ್ಯಕ್ಕೆ ಮಹಿಮೆಯಿಂದ ಮಹಿಮೆಗೆ ಮಾರ್ಪಡುತ್ತೇವೆ.

2 ಕೊರಿಂಥದವರಿಗೆ 4:6

ಕತ್ತಲೆ ಯೊಳಗಿಂದ ಬೆಳಕು ಹೊಳೆಯಲಿ ಎಂದು ಆಜ್ಞಾಪಿಸಿದ ದೇವರು ತಾನೇ ಯೇಸು ಕ್ರಿಸ್ತನ ಮುಖದಲ್ಲಿ ತೋರುವ ದೇವಪ್ರಭಾವ ಜ್ಞಾನವೆಂಬ ಪ್ರಕಾಶವನ್ನು ಕೊಡುವದಕ್ಕಾಗಿ ನಮ್ಮ ಹೃದಯಗಳಲ್ಲಿ ಹೊಳೆದನು.

1 ತಿಮೋಥೆಯ 3:16

ದೇವಭಕ್ತಿಯ ಮರ್ಮವು ಮಹತ್ವವುಳ್ಳದ್ದೆಂಬದು ತರ್ಕವಿಲ್ಲದ್ದು, ಅದು ಯಾವದಂದರೆ--ದೇವರು ಶರೀರಧಾರಿಯಾಗಿ ಪ್ರತ್ಯಕ್ಷನಾದನು; ಆತ್ಮಸಂಬಂಧವಾಗಿ ನೀತಿವಂತನೆಂದು ನಿರ್ಣಯಿಸಲ್ಪಟ್ಟನು; ದೂತ ರಿಗೆ ಕಾಣಿಸಿಕೊಂಡನು; ಅನ್ಯಜನರಿಗೆ ಸಾರಲ್ಪಟ್ಟನು; ಲೋಕದಲ್ಲಿ ನಂಬಲ್ಪಟ್ಟನು; ಮಹಿಮೆಗೆ ಸೇರಿಸಲ

ಹೆಬ್ರಿಯರಿಗೆ 12:21

ಇದಲ್ಲದೆ ಅಲ್ಲಿ ತೋರಿದ್ದು ಅಷ್ಟು ಭಯಂಕರವಾಗಿದ್ದದರಿಂದ ಮೋಶೆಯು--ನನಗೆ ಬಹು ಭಯವಾಗುತ್ತದೆ, ನಡು ಗುತ್ತೇನೆ ಎಂದು ಹೇಳಿದನು).

ಪ್ರಕಟನೆ 18:1

ಇವುಗಳಾದ ಮೇಲೆ ಮಹಾ ಅಧಿಕಾರವುಳ್ಳ ಮತ್ತೊಬ್ಬ ದೂತನು ಪರಲೋಕದಿಂದ ಇಳಿಯುವದನ್ನು ಕಂಡೆನು; ಅವನ ಪ್ರಭಾವದಿಂದ ಭೂಮಿಗೆ ಪ್ರಕಾಶವುಂಟಾಯಿತು.

ಪ್ರಕಟನೆ 20:11

ಆಮೇಲೆ ಬೆಳ್ಳಗಿರುವ ಮಹಾಸಿಂಹಾಸನವನ್ನೂ ಅದರ ಮೇಲೆ ಕೂತಿದ್ದಾತನನ್ನೂ ನಾನು ಕಂಡೆನು. ಆತನೆದುರಿನಿಂದ ಭೂಮ್ಯಾಕಾಶಗಳು ಓಡಿಹೋಗಿ ಅವುಗಳಿಗೆ ಸ್ಥಳವಿಲ್ಲದಂತಾಯಿತು.

Interlinear

Choose Theme