ಕೇಳಿದವರೆಲ್ಲರೂ ಅವುಗಳನ್ನು ತಮ್ಮ ಹೃದಯದಲ್ಲಿ ಇಟ್ಟುಕೊಂಡು--ಈ ಕೂಸೂ ಎಂಥದ್ದಾಗುವನೊ ಎಂದು ಅಂದುಕೊಂಡರು. ಕರ್ತನ ಹಸ್ತವು ಅವನ ಸಂಗಡ ಇತ್ತು.
Cross references
ಆಗ ಅವನ ಸಹೋದರರು ಅವನ ಮೇಲೆ ಹೊಟ್ಟೆಕಿಚ್ಚು ಪಟ್ಟರು. ಆದರೆ ಅವನ ತಂದೆ ಆ ಮಾತನ್ನು ಮನಸ್ಸಿನಲ್ಲಿ ಇಟ್ಟುಕೊಂಡನು.
ಕರ್ತನು ಯೋಸೇಫನ ಸಂಗಡ ಇದದ್ದರಿಂದ ಅವನು ಏಳಿಗೆಯಾಗಿ ಐಗುಪ್ತದವನಾದ ತನ್ನ ಯಜಮಾನನ ಮನೆಯಲ್ಲಿ ಇದ್ದನು.
ಆ ಹುಡುಗನು ಬೆಳೆದನು; ಕರ್ತನು ಅವನನ್ನು ಆಶೀರ್ವದಿಸಿದನು.ಇದಲ್ಲದೆ ಚೊರ್ಗಕ್ಕೂ ಎಷ್ಟಾ ವೋಲಿಗೂ ಮಧ್ಯದಲ್ಲಿ ದಾನನ ದಂಡಿನಲ್ಲಿ ಅವನನ್ನು ಕರ್ತನ ಆತ್ಮವು ಆಗಾಗ್ಗೆ ಪ್ರೇರೇಪಿಸುವದಕ್ಕೆ ಪ್ರಾರಂಭಿಸಿತು.
ಬಾಲಕನಾದ ಸಮುವೇಲನು ನಾರುಮಡಿಯ ಏಫೋದನ್ನು ಕಟ್ಟಿಕೊಂಡು ಕರ್ತನ ಸನ್ನಿಧಿಯಲ್ಲಿ ಸೇವಿಸುತ್ತಿದ್ದನು.
ಆಗ ಸೇವಕರಲ್ಲಿ ಒಬ್ಬನು ಅವನಿಗೆ ಪ್ರತ್ಯುತ್ತರವಾಗಿ--ಇಗೋ, ಬಾರಿಸಲು ನಿಪುಣನಾ ದಂಥ ಬೇತ್ಲೆಹೇಮಿನವನಾದ ಇಷಯನ ಮಗನನ್ನು ನೋಡಿದೆನು. ಅವನು ಧೈರ್ಯಸ್ಥನೂ ಪರಾಕ್ರಮ ಶಾಲಿಯೂ ರಣಶೂರನಾಗಿಯೂ ಕಾರ್ಯಗಳಲ್ಲಿ ಬುದ್ಧಿವಂತನಾಗಿಯೂ ಚೆಲುವಿಕೆಯುಳ್ಳವನಾಗಿಯೂ ಇದ್ದಾನೆ. ಇದಲ್ಲದೆ ಕರ್ತನು ಅವನ ಸಂಗಡ ಇದ್ದಾನೆ ಅಂದನು.
ಆದರೆ ಕರ್ತನ ಕೈ ಎಲೀಯನ ಮೇಲೆ ಇದ್ದದರಿಂದ ಅವನು ತನ್ನ ನಡುವನ್ನು ಕಟ್ಟಿಕೊಂಡು ಇಜ್ರೇಲಿನ ವರೆಗೂ ಅಹಾಬನಿಗೆ ಮುಂದಾಗಿ ಓಡಿದನು.
ನಿನ್ನ ಬಲಗೈ ಮನುಷ್ಯನ ಮೇಲೆ ಹೌದು, ನೀನು ನಿನಗೆ ಬಲಪಡಿಸಿಕೊಂಡ ಮನುಷ್ಯ ಪುತ್ರನ ಮೇಲೆ ನಿನ್ನ ಕೈ ಇರಲಿ.
ಅವನ ಸಂಗಡಲೇ ನನ್ನ ಕೈ ಸ್ಥಿರವಾಗಿರುವದು; ನನ್ನ ತೋಳು ಅವನನ್ನು ಬಲಪಡಿಸು ವುದು.
ನಿನಗೆ ವಿರೋಧವಾಗಿ ಪಾಪ ಮಾಡದ ಹಾಗೆ ನನ್ನ ಹೃದಯದಲ್ಲಿ ನಿನ್ನ ವಾಕ್ಯವನ್ನು ಬಚ್ಚಿಟ್ಟಿದ್ದೇನೆ.
ಆ ಬಾಲಕನು ಬೆಳೆದು ಆತ್ಮದಲ್ಲಿ ಬಲಗೊಂಡನು. ತನ್ನನ್ನು ಇಸ್ರಾಯೇಲಿಗೆ ತೋರ್ಪಡಿಸಿಕೊಳ್ಳುವ ದಿನದವರೆಗೆ ಅರಣ್ಯದಲ್ಲಿದ್ದನು.
ಆದರೆ ಮರಿಯಳು ಈ ಎಲ್ಲಾ ವಿಷಯಗಳನ್ನು ತನ್ನ ಹೃದಯದಲ್ಲಿಟ್ಟು ಕೊಂಡು ಆಲೋಚಿಸುತ್ತಿದ್ದಳು.
ಆ ಶಿಶುವು ಬೆಳೆದು ಆತ್ಮದಲ್ಲಿ ಬಲಗೊಂಡು ಜ್ಞಾನದಿಂದ ತುಂಬಿದವ ನಾದನು; ದೇವರ ಕೃಪೆಯು ಆತನ ಮೇಲೆ ಇತ್ತು.
ಬಳಿಕ ಆತನು ಅವರ ಜೊತೆಯಲ್ಲಿ ನಜರೇತಿಗೆ ಬಂದು ಅವರಿಗೆ ಅಧೀನನಾಗಿದ್ದನು. ಆದರೆ ಆತನ ತಾಯಿಯು ಈ ಮಾತುಗಳನ್ನೆಲ್ಲಾ ತನ್ನ ಹೃದಯದಲ್ಲಿ ಇಟ್ಟುಕೊಂಡಳು.ಯೇಸು ಜ್ಞಾನದಲ್ಲಿಯೂ ದೇಹದ ಬೆಳವಣಿಗೆ ಯಲ್ಲಿಯೂ ದೇವರ ಮತ್ತು ಮನುಷ್ಯರ ದಯೆಯಲ್ಲಿಯೂ ವೃದ್ಧಿಯಾದನು.
ಈ ಮಾತುಗಳು ನಿಮ್ಮ ಕಿವಿಗಳ ಆಳಕ್ಕೆ ಇಳಿಯಲಿ; ಯಾಕಂದರೆ ಮನುಷ್ಯ ಕುಮಾರನು ಮನುಷ್ಯರ ಕೈಗಳಿಗೆ ಒಪ್ಪಿಸಲ್ಪಡುವನು ಎಂದು ಹೇಳಿದನು.
ಕರ್ತನ ಹಸ್ತವು ಅವರೊಂದಿಗಿದ್ದದ ರಿಂದ ಬಹು ಜನರು ನಂಬಿ ಕರ್ತನ ಕಡೆಗೆ ತಿರುಗಿ ಕೊಂಡರು.