Home Bibles 1 ಸಮುವೇಲ 2:18 · ಕನ್ನಡ ಬೈಬಲ್
1 ಸಮುವೇಲ 2:18 · ಕನ್ನಡ ಬೈಬಲ್

ಬಾಲಕನಾದ ಸಮುವೇಲನು ನಾರುಮಡಿಯ ಏಫೋದನ್ನು ಕಟ್ಟಿಕೊಂಡು ಕರ್ತನ ಸನ್ನಿಧಿಯಲ್ಲಿ ಸೇವಿಸುತ್ತಿದ್ದನು.

Cross references

ನಿರ್ಗಮಕಾಂಡ 28:4

ಅವರು ಮಾಡಬೇಕಾದ ವಸ್ತ್ರಗಳು ಇವೇ: ಎದೆಪದಕವು ಎಫೋದ ನಿಲುವಂಗಿ ಕಸೂತಿಯ ಕೆಲಸದ ಮೇಲಂಗಿ ಮುಂಡಾಸ ನಡುಕಟ್ಟು; ನಿನ್ನ ಸಹೋದರ ನಾದ ಆರೋನನೂ ಅವನ ಕುಮಾರರೂ ನನಗೆ ಯಾಜಕ ಸೇವೆಮಾಡುವದಕ್ಕೆ ಅವರಿಗಾಗಿ ಪರಿಶುದ್ಧ ವಸ್ತ್ರಗಳನ್ನು ಮಾಡಬೇಕು.

ಲೇವ್ಯಕಾಂಡ 8:7

ಅವನಿಗೆ ಮೇಲಂಗಿಯನ್ನು ಹೊದಿಸಿ ನಡುಕಟ್ಟಿ ನಿಂದ ಅವನ ನಡುವನ್ನು ಕಟ್ಟಿ ನಿಲುವಂಗಿಯನ್ನು ತೊಡಿಸಿ ಅವನ ಮೇಲೆ ಎಫೋದನ್ನು ಹಾಕಿ ಎಫೋದಿನ ವಿಚಿತ್ರವಾದ ನಡುಕಟ್ಟಿನಿಂದ ನಡುವನ್ನು ಕಟ್ಟಿ ಅದ ರಿಂದ ಅವನನ್ನು ಬಿಗಿದನು.

1 ಸಮುವೇಲ 2:11

ಎಲ್ಕಾನನು ರಾಮದಲ್ಲಿರುವ ತನ್ನ ಮನೆಗೆ ಹೋದನು; ಆದರೆ ಆ ಹುಡುಗನು ಯಾಜಕನಾದ ಏಲಿಯ ಸಮ್ಮುಖದಲ್ಲಿ ಕರ್ತನನ್ನು ಸೇವಿಸಿದನು.

1 ಸಮುವೇಲ 2:28

ನನ್ನ ಯಜ್ಞ ವೇದಿಯ ಮೇಲೆ ಬಲಿಯನ್ನು ಅರ್ಪಿಸುವದಕ್ಕೂ ಧೂಪವನ್ನು ಸುಡುವದಕ್ಕೂ ನನ್ನ ಮುಂದೆ ಏಫೋ ದನ್ನು ಧರಿಸಿಕೊಂಡಿರುವದಕ್ಕೂ ನಾನು ಇಸ್ರಾಯೇಲಿನ ಎಲ್ಲಾ ಗೋತ್ರಗಳಿಂದ ನನಗೆ ಯಾಜಕನಾಗಿರ ಬೇಕೆಂದು ನಾನು ಅವನನ್ನು ಆದುಕೊಳ್ಳಲಿಲ್ಲವೋ? ನಿನ್ನ ತಂದೆಯ ಮನೆಗೆ ಇಸ್ರಾಯೇಲ್‌ ಮಕ್ಕಳು ಮಾಡುವ ದಹನಬಲಿಗಳನ್ನೆಲ್ಲಾ ಕೊಡಲಿಲ್ಲವೋ?

1 ಸಮುವೇಲ 3:1

ಬಾಲಕನಾದ ಸಮುವೇಲನು ಏಲಿಯ ಮುಂದೆ ಕರ್ತನಿಗೆ ಸೇವೆ ಮಾಡಿಕೊಂಡಿ ದ್ದನು. ಆ ದಿನಗಳಲ್ಲಿ ಕರ್ತನ ವಾಕ್ಯವು ವಿರಳವಾಗಿತ್ತು; ಅಲ್ಲಿ ಪ್ರಕಟವಾದ ದೇವದರ್ಶನವಿರಲಿಲ್ಲ.

1 ಸಮುವೇಲ 14:3

ಆಗ ಏಲಿಯ ಮಗನಾಗಿರುವ ಫೀನೆ ಹಾಸನ ಮಗನಾದ ಈಕಾಬೋದನ ಸಹೋದರನಾದ ಅಹೀಟೂಬನ ಮಗನಾದ ಅಹೀಯನು ಶೀಲೋವಿ ನಲ್ಲಿ ಎಫೋದನ್ನು ಧರಿಸಿಕೊಂಡು ಕರ್ತನ ಯಾಜಕ ನಾಗಿದ್ದನು. ಆದರೆ ಯೋನಾತಾನನು ಹೋದದ್ದನ್ನು ಜನರು ಅರಿಯದೆ ಇದ್ದರು.

1 ಸಮುವೇಲ 22:18

ಅರಸನು ದೋಯೇಗನಿಗೆ--ನೀನು ತಿರುಗಿಕೊಂಡು ಯಾಜಕರ ಮೇಲೆ ಬೀಳು ಅಂದನು. ಆಗ ಎದೋಮ್ಯನಾದ ದೋಯೇಗನು ತಿರುಗಿಕೊಂಡು ಯಾಜಕರ ಮೇಲೆ ಬಿದ್ದು ನಾರುಬಟ್ಟೆಯ ಎಫೋದನ್ನು ಧರಿಸಿಕೊಳ್ಳುವವರಾದ ಎಂಭತ್ತೈದು ಜನರನ್ನು ಆ ದಿನದಲ್ಲಿ ಕೊಂದನು.

2 ಸಮುವೇಲ 6:14

ಇದಲ್ಲದೆ ದಾವೀ ದನು ನಾರಿನ ಎಫೋದನ್ನು ಧರಿಸಿಕೊಂಡು ತನ್ನ ಪೂರ್ಣ ಬಲದಿಂದ ಕರ್ತನ ಮುಂದೆ ನಾಟ್ಯವಾ ಡಿದನು.

1 ದಿನವೃತ್ತಾಂತ 15:27

ದಾವೀ ದನೂ ಮಂಜೂಷವನ್ನು ಹೊರುವ ಲೇವಿಯರೂ ಹಾಡುಗಾರರೂ ಹಾಡುಗಾರರ ಸಂಗಡ ಇರುವ ಸಂಗೀತದ ಯಜಮಾನನಾದ ಕೆನನ್ಯನೂ ನಯವಾದ ನಾರಿನ ಮೇಲಂಗಿಯನ್ನು ಧರಿಸಿಕೊಂಡಿದ್ದರು. ಇದ ಲ್ಲದೆ ದಾವೀದನ ಮೇಲೆ ನಾರಿನ ಎಫೋದು ಇತ್ತು.

Interlinear

Choose Theme