ಇದಲ್ಲದೆ ಯಾವನಾದರೂ ಮನುಷ್ಯನ ಅಶುದ್ಧತ್ವವನ್ನಾಗಲಿ ಯಾವುದೇ ಅಶುದ್ಧ ವಾದದ್ದನ್ನಾಗಲಿ ಇಲ್ಲವೆ ಯಾವುದೇ ಹೊಲೆಯಾದ ಅಶುದ್ಧ ವಸ್ತುವನ್ನಾಗಲಿ ಯಾವುದೇ ಅಶುದ್ಧ ಪ್ರಾಣಿ ಯನ್ನಾಗಲಿ ಮುಟ್ಟಿದರೂ ಮತ್ತು ಕರ್ತನಿಗೆ ಸಂಬಂಧಿ ಸಿದ ಸಮಾಧಾನ ಬಲಿಯ ಯಜ್ಞದ ಮಾಂಸವನ್ನು ತಿಂದರೂ ಅವನು ತನ್ನ ಜನರಿಂದ ತೆಗೆದುಹಾಕಲ್ಪಡ ಬೇಕು ಅಂದನು.
Cross references
ಸುನ್ನತಿಯಾಗದ ಗಂಡಸಿಗೆ ನನ್ನ ಒಡಂಬಡಿಕೆಯನ್ನು ವಿಾರಿದ ಕಾರಣ ಅವನು ಜನರೊಳಗಿಂದ ತೆಗೆದುಹಾಕಲ್ಪಡಬೇಕು ಅಂದನು.
ಏಳು ದಿನಗಳ ವರೆಗೆ ಹುಳಿಯಿಲ್ಲದ ರೊಟ್ಟಿಗಳನ್ನು ತಿನ್ನಬೇಕು. ಮೊದಲನೆಯ ದಿನದಲ್ಲಿಯೇ ಹುಳಿಹಿಟ್ಟನ್ನು ನಿಮ್ಮ ಮನೆಯೊಳಗಿಂದ ತೆಗೆದುಹಾಕಬೇಕು; ಮೊದಲನೆಯ ದಿನದಿಂದ ಏಳ ನೆಯ ದಿನದ ವರೆಗೆ ಹುಳಿರೊಟ್ಟಿಯನ್ನು ತಿನ್ನುವವರು ಇಸ್ರಾಯೇಲಿನೊಳಗಿಂದ ತೆಗೆದು ಹಾಕಲ್ಪಡಬೇಕು.
ಏಳು ದಿನಗಳ ವರೆಗೆ ಹುಳಿಹಿಟ್ಟು ನಿಮ್ಮ ಮನೆಗಳಲ್ಲಿ ಇರಬಾರದು; ಹುಳಿಕಲಸಿದ್ದನ್ನು ಯಾರು ತಿನ್ನುವರೋ ಆ ವ್ಯಕ್ತಿಯು ಪರದೇಶದವನಾಗಲಿ ಸ್ವದೇಶದವ ನಾಗಲಿ ಅವನನ್ನು ಇಸ್ರಾಯೇಲ್ ಸಭೆಯೊಳಗಿಂದ ತೆಗೆದು ಹಾಕಬೇಕು.
ಅದರ ಹಾಗೆ ತೈಲ ಮಾಡುವವನೂ ಅದನ್ನು ಅನ್ಯನಿಗೆ ಕೊಡುವವನೂ ತನ್ನ ಜನರೊಳಗಿಂದ ತೆಗೆದುಹಾಕಲ್ಪಡಬೇಕು ಎಂದು ಹೇಳು ಅಂದನು.
ಇಲ್ಲವೆ ಯಾವನಾದರೂ ಅಶುದ್ಧವಾದ ಯಾವದನ್ನಾದರೂ ಮುಟ್ಟಿದರೆ, ಅಂದರೆ ಅದು ಅಶುದ್ಧ ವಾದ ಮೃಗದ ಹೆಣವಾಗಲಿ ದನದ ಹೆಣವಾಗಲಿ ಹರಿದಾಡುವವುಗಳ ಹೆಣಗಳಾಗಲಿ ಅವನಿಗೆ ತಿಳಿಯದಿ ದ್ದರೂ ಅವನು ಅಶುದ್ಧನಾಗಿದ್ದು ಅಪರಾಧಿಯಾಗಿರುವನು.
ಮನುಷ್ಯದೇಹದಿಂದುಂಟಾದ ಯಾವದಾ ದರೂ ಒಂದು ಅಶುದ್ಧವಸ್ತು ತಗಲಿದ್ದು ಅವನಿಗೆ ತಿಳಿಯದೆ ಹೋದರೂ ತಿಳಿದು ಬಂದಾಗ ಅವನು ದೋಷಿಯಾಗುವನು.
ಯಾವನಾದರೂ ಅಶುದ್ಧನಾಗಿದ್ದು ಕರ್ತ ನಿಗೆ ಸಂಬಂಧಪಟ್ಟ ಸಮಾಧಾನ ಬಲಿಗಳ ಯಜ್ಞದ ಮಾಂಸವನ್ನು ತಿನ್ನುವನೋ ಅವನು ತನ್ನ ಜನರಿಂದ ತೆಗೆಯಲ್ಪಡಬೇಕು.
ಮನುಷ್ಯರು ಕರ್ತನಿಗೆ ಬೆಂಕಿಯಿಂದ ಸಮರ್ಪಿಸಿದ ಪ್ರಾಣಿಯ ಕೊಬ್ಬನ್ನು ಯಾವನಾದರೂ ತಿಂದರೆ ಅವನು ತನ್ನ ಜನರಿಂದ ತೆಗೆಯಲ್ಪಡಬೇಕು.
ಯಾವುದೇ ತರದ ರಕ್ತವನ್ನು ತಿಂದವನು ಯಾವನೇ ಆಗಿರಲಿ ಅವನು ತನ್ನ ಜನರಿಂದ ತೆಗೆದು ಹಾಕಲ್ಪಡಬೇಕು ಎಂಬದೇ.
ಸಮುದ್ರಗಳಲ್ಲಿಯೂ ನದಿಗಳಲ್ಲಿಯೂ ನೀರೊಳಗೆ ಚಲಿಸುವವುಗಳಾಗಿದ್ದು ಮತ್ತು ಜೀವಿಸುವ ಎಲ್ಲವುಗಳಲ್ಲಿ ಈಜು ರೆಕ್ಕೆಯೂ ಪೊರೆಯಿಲ್ಲದವುಗಳೂ ನಿಮಗೆ ಅಶುದ್ಧವಾಗಿರುವವು.
ರೆಕ್ಕೆಯುಳ್ಳವುಗಳಾಗಿ ಕಾಲುಗಳಿಂದ ಹರಿದಾಡುವ ಕ್ರಿಮಿಕೀಟಗಳೆಲ್ಲವೂ ನಿಮಗೆ ಹೇಯವಾಗಿರಬೇಕು.
ಇವುಗಳು ನಿಮಗೆ ಅಶುದ್ಧವಾಗಿರುವವು. ಅವುಗಳ ಶವಗಳನ್ನು ಮುಟ್ಟುವವನು ಸಾಯಂಕಾಲದ ವರೆಗೂ ಅಶುದ್ಧನಾಗಿರುವನು.
ಕರ್ತನು ಮೋಶೆಯೊಂದಿಗೆ ಮಾತನಾಡಿ --
ಕರ್ತನು ಮೋಶೆ ಆರೋನರೊಂದಿಗೆ ಮಾತನಾಡಿ ಹೇಳಿದ್ದೇನಂದರೆ--
ಇದಲ್ಲದೆ ಇಸ್ರಾಯೇಲ್ ಮನೆತನದಲ್ಲಿ ಯಾವನಾದರೂ ನಿಮ್ಮ ಮಧ್ಯದೊಳಗೆ ಪ್ರವಾಸಿಯಾಗಿರುವ ಪರಕೀಯನಾ ದರೂ ಯಾವದೇ ತರದ ರಕ್ತವನ್ನು ತಿಂದರೆ ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.
ಯಾಕಂದರೆ ರಕ್ತವೇ ಎಲ್ಲಾ ಶರೀರಗಳ ಜೀವವಾಗಿದೆ; ಅದಕ್ಕಿರುವ ರಕ್ತವು ಅದರ ಜೀವಕ್ಕಾಗಿಯೇ ಇದೆ; ಆದದರಿಂದ ನಾನು ಇಸ್ರಾ ಯೇಲ್ ಮಕ್ಕಳಿಗೆ--ನೀವು ಯಾವ ಬಗೆಯ ಶರೀರದ ರಕ್ತವನ್ನೂ ತಿನ್ನಬಾರದೆಂದು ಹೇಳಿದ್ದೇನೆ. ಎಲ್ಲಾ ಶರೀರಗಳ ಜೀವವು ರಕ್ತದಲ್ಲಿಯೇ ಇದೆ; ಇದನ್ನು ತಿನ್ನುವ ಯಾವನಾದರೂ ತೆಗೆದುಹಾಕಲ್ಪಡಬೇಕು.
ಯಾವನಾದರೂ ಈ ಅಸಹ್ಯವಾದವುಗಳಲ್ಲಿ ಯಾವ ದನ್ನಾದರೂ ಮಾಡಿದರೆ ಅವುಗಳನ್ನು ಮಾಡುವ ಮನುಷ್ಯರನ್ನು ಅವರ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು.ಆದದರಿಂದ ನಿಮಗಿಂತ ಮೊದಲಿನವರು ಮಾಡಿದಂತೆ ಅಸಹ್ಯವಾದ ಆಚರಣೆ ಗಳಲ್ಲಿ ಒಂದನ್ನಾದರೂ ನೀವು ಮಾಡದಂತೆ ಮತ್ತು ಅವುಗಳಲ್ಲಿ ನಿಮ್ಮನ್ನು ಹೊಲೆಮಾಡಿಕೊಳ್ಳದಂತೆ ನೀವು ನನ್ನ ಕಟ್ಟಳೆಗಳನ್ನು ಕೈಕೊಳ್ಳಬೇಕು; ನಿಮ್ಮ ದೇವರಾಗಿರುವ ಕರ್ತನು ನಾನೇ.
ಆದದರಿಂದ ಅದನ್ನು ತಿನ್ನುವ ಪ್ರತಿಯೊಬ್ಬನು ತನ್ನ ಅಪರಾಧವನ್ನು ಹೊತ್ತುಕೊಳ್ಳಬೇಕು. ಕರ್ತನ ಪವಿತ್ರ ವಾದದ್ದನ್ನು ಅವನು ಅಶುದ್ಧಮಾಡಿದ್ದಾನೆ. ಅವನು ತನ್ನ ಜನರ ಮಧ್ಯದೊಳಗಿಂದ ತೆಗೆದುಹಾಕಲ್ಪಡಬೇಕು.
ನಾನು ಆ ಮನುಷ್ಯನಿಗೆ ವಿಮುಖನಾಗಿರುವೆನು; ಅವನನ್ನು ಅವನ ಜನರ ಮಧ್ಯದೊಳಗಿಂದ ತೆಗೆದುಹಾಕುವೆನು; ಅವನು ನನ್ನ ಹೆಸರನ್ನು ಅಪವಿತ್ರಗೊಳಿಸುವಂತೆ ಮತ್ತು ನನ್ನ ಪವಿತ್ರ ಸ್ಥಳವನ್ನು ಹೊಲೆಮಾಡುವಂತೆ ತನ್ನ ಸಂತತಿಯನ್ನು ಮೋಲೆಕನಿಗೆ ಕೊಟ್ಟಿದ್ದಾನೆ.
ಅವರಿಗೆ ನೀನು ಹೀಗೆ ಹೇಳು--ನಿಮ್ಮ ಎಲ್ಲಾ ಸಂತತಿಯ ವಂಶಾವಳಿ ಗಳಲ್ಲಿ ಅಶುದ್ಧತ್ವವಿರುವ ಇಸ್ರಾಯೇಲ್ ಮಕ್ಕಳು ಕರ್ತನಿಗೆ ಸಲ್ಲಿಸುವ ಪರಿಶುದ್ಧವಾದವುಗಳ ಬಳಿಗೆ ಯಾವನು ಬರುವನೋ ಅವನು ನನ್ನ ಸನ್ನಿಧಿ ಯಿಂದ ತೆಗೆದುಹಾಕಲ್ಪಡಬೇಕು; ನಾನೇ ಕರ್ತನು.
ಆರೋನನ ಸಂತತಿಯವರಲ್ಲಿ ಒಬ್ಬನು ಕುಷ್ಠರೋಗಿ ಇಲ್ಲವೆ ಸ್ರಾವವುಳ್ಳವನಿದ್ದರೆ ಅವನು ಶುದ್ಧನಾಗುವ ವರೆಗೆ ಪರಿಶುದ್ಧವಾದವುಗಳನ್ನು ತಿನ್ನಬಾರದು. ಹೆಣದಿಂದ ಅಶುದ್ಧವಾದದ್ದನ್ನು ಮುಟ್ಟಿದವನು ಇಲ್ಲವೆ ತನ್ನೊಳಗಿಂದ ವೀರ್ಯ ಹೊರಟವನು
ಆ ದಿವಸದಲ್ಲಿ ಯಾವನಾದರೂ ಕುಂದಿಸಿಕೊಳ್ಳದಿದ್ದರೆ ಅವನು ತನ್ನ ಜನರ ಮಧ್ಯ ದೊಳಗಿನಿಂದ ತೆಗೆದುಹಾಕಲ್ಪಡಬೇಕು.
ಮನುಷ್ಯನ ಹೆಣವನ್ನು ಮುಟ್ಟಿದವನು ಏಳು ದಿನಗಳವರೆಗೆ ಅಶುದ್ಧನಾಗಿರಬೇಕು.
ಅಸಹ್ಯವಾದ ಯಾವದನ್ನಾದರೂ ತಿನ್ನಬಾರದು. ನೀವು ತಿನ್ನತಕ್ಕ ಪ್ರಾಣಿಗಳು ಇವೇ:
ಆದರೆ ಮೆಲುಕು ಹಾಕಿ ಉಗುರುಳ್ಳ ಗೊರಸೆಯನ್ನು ಭೇದಿಸಿಕೊಂಡಿರುವವು ಗಳಲ್ಲಿ ಇವುಗಳನ್ನು ನೀವು ತಿನ್ನಬಾರದು; ಯಾವ ವೆಂದರೆ: ಒಂಟೆ, ಮೊಲ, ಕುಣಿಮೊಲ. ಯಾಕಂದರೆ ಅವು ಮೆಲುಕು ಹಾಕಿದರೂ ಗೊರಸೆಯನ್ನು ಭೇದಿಸು ವದಿಲ್ಲ; ಅವು ನಿಮಗೆ ಅಶುದ್ಧವಾಗಿವೆ.
ಆದರೆ ರೆಕ್ಕೆಗಳೂ ಪೊರೆ ಗಳೂ ಇಲ್ಲದವುಗಳನ್ನೆಲ್ಲಾ ತಿನ್ನಬಾರದು; ಅವು ನಿಮಗೆ ಅಶುದ್ಧವಾಗಿವೆ.
ಪಕ್ಷಿ ಜಾತಿಯಲ್ಲಿ ನೀವು ತಿನ್ನಬಾರದವುಗಳು ಯಾವ ವೆಂದರೆ: ಗರುಡ, ಬೆಟ್ಟದಹದ್ದು, ಕ್ರೌಂಚ, ಗಿಡಗ, ಹಕ್ಕಿಸಾಲೆ,
ಆಮೇಲೆ ನಾನು--ಹಾ! ದೇವ ರಾದ ಕರ್ತನೇ, ಇಗೋ, ನನ್ನ ಪ್ರಾಣವು ಅಶುದ್ಧವಾಗ ಲಿಲ್ಲ, ಯಾಕಂದರೆ ನಾನು ಚಿಕ್ಕಂದಿನಿಂದ ಇಷ್ಟರವರೆಗೂ ತನ್ನಷ್ಟಕ್ಕೆ ತಾನೇ ಸತ್ತಿರುವದನ್ನು ಅಥವಾ ಹರಿದು ಚೂರು ಚೂರಾಗಿರುವದನ್ನು ತಿನ್ನಲಿಲ್ಲ; ಇಲ್ಲವೆ ಅಸಹ್ಯ ವಾದ ಮಾಂಸವನ್ನಾದರೂ ನನ್ನ ಬಾಯಿಯ ಹತ್ತಿರ ತಂದಿಲ್ಲ ಎಂದೆನು.
ಆದದರಿಂದ ನೀನು ಅವರಿಗೆ ಹೇಳಬೇಕಾದದ್ದೇ ನಂದರೆ--ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನೀವು ರಕ್ತದಿಂದ ಕೂಡಿದ ಮಾಂಸವನ್ನು ತಿನ್ನುವರ ಲ್ಲವೇ? ನಿಮ್ಮ ಕಣ್ಣುಗಳು ವಿಗ್ರಹಗಳ ಕಡೆಗೆ ಎತ್ತಿ ರಕ್ತವನ್ನು ಚೆಲ್ಲುವ ನೀವು ದೇಶವನ್ನು ಸ್ವಾಧೀನಪಡಿಸಿ ಕೊಳ್ಳುವಿರೋ?