Home Bibles ದ್ವಿತೀಯೋಪದೇಶಕಾಂಡ 14:3 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 14:3 · ಕನ್ನಡ ಬೈಬಲ್

ಅಸಹ್ಯವಾದ ಯಾವದನ್ನಾದರೂ ತಿನ್ನಬಾರದು. ನೀವು ತಿನ್ನತಕ್ಕ ಪ್ರಾಣಿಗಳು ಇವೇ:

Cross references

ಲೇವ್ಯಕಾಂಡ 11:43

ಯಾವದೇ ಹರಿದಾಡುವ ಪ್ರಾಣಿಯೊಡನೆಯೂ ನೀವು ನಿಮ್ಮನ್ನು ಅಶುದ್ಧಪಡಿಸಿಕೊಳ್ಳಬಾರದು ಇಲ್ಲವೆ ನೀವು ಅವುಗಳೊಂದಿಗೆ ನಿಮ್ಮನ್ನು ಅಶುದ್ಧಪಡಿಸಿಕೊಂಡು ಮಲಿನರಾಗಬಾರದು.

ಲೇವ್ಯಕಾಂಡ 20:25

ಆದದರಿಂದ ನೀವು ಶುದ್ಧವಾದ ಮತ್ತು ಅಶುದ್ಧವಾದ ಪಶುಗಳ ಮಧ್ಯದಲ್ಲಿಯೂ ಅಶುದ್ಧವಾದ ಮತ್ತು ಶುದ್ಧವಾದ ಪಕ್ಷಿಗಳ ಮಧ್ಯದಲ್ಲಿಯೂ ವ್ಯತ್ಯಾಸ ಮಾಡಬೇಕು. ಇದಲ್ಲದೆ ನಾನು ನಿಮ್ಮಿಂದ ಪ್ರತ್ಯೇಕಿಸಿದ ಅಶುದ್ಧವಾದ ಪಶುಗಳಿಂದಲೂ ಪಕ್ಷಿಗಳಿಂದಲೂ ಭೂಮಿಯ ಮೇಲೆ ಚಲಿಸುವ ಯಾವ ತರವಾದ ಜೀವಿಯಿಂದಲೂ ನೀವು ನಿಮ್ಮನ್ನು ಅಶುದ್ಧಮಾಡಿ ಕೊಳ್ಳಬಾರದು.

ಯೆಶಾಯ 65:4

ಸಮಾ ಧಿಗಳಲ್ಲಿ ಉಳಿದು ಗವಿಗಳಲ್ಲಿ ತಂಗುವವರು; ಹಂದಿ ಯ ಮಾಂಸವನ್ನು ತಿನ್ನುವವರು ತಮ್ಮ ಪಾತ್ರೆಗಳಲ್ಲಿ ಅಸಹ್ಯವಾದವುಗಳ ಸಾರುಳ್ಳವರು; ಅವರು--

ಯೆಹೆಜ್ಕೇಲ 4:14

ಆಮೇಲೆ ನಾನು--ಹಾ! ದೇವ ರಾದ ಕರ್ತನೇ, ಇಗೋ, ನನ್ನ ಪ್ರಾಣವು ಅಶುದ್ಧವಾಗ ಲಿಲ್ಲ, ಯಾಕಂದರೆ ನಾನು ಚಿಕ್ಕಂದಿನಿಂದ ಇಷ್ಟರವರೆಗೂ ತನ್ನಷ್ಟಕ್ಕೆ ತಾನೇ ಸತ್ತಿರುವದನ್ನು ಅಥವಾ ಹರಿದು ಚೂರು ಚೂರಾಗಿರುವದನ್ನು ತಿನ್ನಲಿಲ್ಲ; ಇಲ್ಲವೆ ಅಸಹ್ಯ ವಾದ ಮಾಂಸವನ್ನಾದರೂ ನನ್ನ ಬಾಯಿಯ ಹತ್ತಿರ ತಂದಿಲ್ಲ ಎಂದೆನು.

ಅಪೋಸ್ತಲರ ಕೃತ್ಯಗಳು 10:12

ಭೂಮಿಯ ಮೇಲಿ ರುವ ನಾಲ್ಕು ಕಾಲುಗಳುಳ್ಳ ಎಲ್ಲಾ ತರವಾದ ಪಶು ಗಳೂ ಕಾಡುಮೃಗಗಳೂ ಹರಿದಾಡುವ ಕ್ರಿಮಿಕೀಟ ಗಳೂ ಆಕಾಶದ ಪಕ್ಷಿಗಳೂ ಅದರೊಳಗೆ ಇದ್ದವು.

ರೋಮಾಪುರದವರಿಗೆ 14:14

ಯಾವ ಪದಾರ್ಥವೂ ಸ್ವತಃ ಅಶುದ್ಧ ವಾದದ್ದಲ್ಲವೆಂದು ನಾನು ಬಲ್ಲೆನು, ಇದನ್ನು ನಾನು ಕರ್ತನಾದ ಯೇಸುವಿನ ಮುಖಾಂತರ ದೃಢವಾಗಿ ನಂಬಿದ್ದೇನೆ; ಆದರೆ ಯಾವದಾದರೂ ಒಂದು ಪದಾರ್ಥವನ್ನು ಅಶುದ್ಧವೆಂದು ಒಬ್ಬನು ಭಾವಿಸಿದರೆ ಅವನಿಗೆ ಅದು ಅಶುದ್ಧವೇ.

1 ಕೊರಿಂಥದವರಿಗೆ 10:28

ಆದರೆ ಒಬ್ಬನು ನಿಮಗೆ--ಇದು ವಿಗ್ರಹಕ್ಕೆ ಬಲಿಕೊಟ್ಟದ್ದು ಎಂದು ಹೇಳಿದರೆ ಈ ವಿಷಯವನ್ನು ತಿಳಿಸಿದವನ ನಿಮಿತ್ತ ವಾಗಿಯೂ ಮನಸ್ಸಾಕ್ಷಿಯ ನಿಮಿತ್ತವಾಗಿಯೂ ತಿನ್ನ ಬೇಡಿರಿ; ಭೂಮಿಯೂ ಅದರಲ್ಲಿರುವ ಸಮಸ್ತವೂ ಕರ್ತನದಾಗಿದೆಯಲ್ಲವೇ?

ತೀತ 1:15

ಶುದ್ಧರಿಗೆ ಎಲ್ಲವೂ ಶುದ್ಧವೇ; ಆದರೆ ಮಲಿನವಾದವರಿಗೂ ನಂಬಿಕೆಯಿಲ್ಲ ದವರಿಗೂ ಯಾವದೂ ಶುದ್ಧವಲ್ಲ; ಆದರೆ ಅವರ ಬುದ್ಧಿಯೂ ಮನಸ್ಸಾಕ್ಷಿಯೂ ಕೂಡ ಮಲಿನವಾಗಿವೆ.ಅವರು ತಾವು ದೇವರನ್ನು ಅರಿತವರೆಂದು ಹೇಳಿ ಕೊಳ್ಳುತ್ತಾರೆ; ಆದರೆ ಅವರು ಅಸಹ್ಯರೂ ಅವಿಧೇಯ ರೂ ಸತ್ಕಾರ್ಯಗಳಿಗೆಲ್ಲಾ ಭ್ರಷ್ಟರೂ ಆಗಿರುವದರಿಂದ ದೇವರನ್ನು ತಮ್ಮ ಕೃತ್ಯಗಳಿಂದಲೇ ಅಲ್ಲಗಳೆಯುವರು.

Interlinear

Choose Theme