ಅವನು ಕರ್ತನ ಬಲಿಪೀಠವನ್ನು ಕಟ್ಟಿಸಿ ಅದರ ಮೇಲೆ ಸಮಾಧಾನದ ಬಲಿಗಳನ್ನೂ ಸ್ತೋತ್ರದ ಬಲಿಗಳನ್ನೂ ಅರ್ಪಿಸಿ ಇಸ್ರಾಯೇಲಿನ ದೇವರಾದ ಕರ್ತನನ್ನು ಸೇವಿಸಲು ಯೆಹೂದದವರಿಗೆ ಆಜ್ಞಾಪಿಸಿ ದನು.
Cross references
ಕರ್ತನು ಅಬ್ರಹಾಮ ನಿಗೆ ಹೇಳಿದ್ದು ನೆರವೇರುವಂತೆ ಅವನು ತನ್ನ ಮಕ್ಕಳಿಗೂ ತರುವಾಯ ಅವನ ಮನೆಯವರಿಗೂ ಆತನ ಮಾರ್ಗವನ್ನು ಕೈಕೊಂಡು ನೀತಿನ್ಯಾಯಗಳನ್ನು ಅನುಸರಿಸಬೇಕೆಂದು ಅಪ್ಪಣೆಕೊಡುವನು ಎಂದು ನನಗೆ ತಿಳಿದದೆ ಎಂದು ಅಂದುಕೊಂಡನು.
ಅವನ ಕಾಣಿಕೆಯು ಸಮಾಧಾನದ ಬಲಿಯ ಅರ್ಪಣೆಯಾಗಿದ್ದು ಅದನ್ನು ಮಂದೆಯಿಂದ ಅರ್ಪಿಸುವದಾದರೆ ಅದು ಗಂಡಾಗಲಿ ಇಲ್ಲವೆ ಹೆಣ್ಣಾಗಲಿ ಅದನ್ನು ಅವನು ಕರ್ತನ ಮುಂದೆ ದೋಷವಿಲ್ಲದ್ದಾಗಿ ಸಮರ್ಪಿಸಲಿ.
ಅವನು ಕರ್ತನಿಗೆ ಸಮರ್ಪಿಸಬೇಕಾದ ಸಮಾ ಧಾನ ಯಜ್ಞಸಮರ್ಪಣೆಗಳ ನಿಯಮವು ಇದೇ:
ಆಗ ಎಲೀಯನು ಸಮಸ್ತ ಜನರಿಗೆ--ನನ್ನ ಬಳಿಗೆ ಬನ್ನಿರಿ ಅಂದನು; ಜನರೆಲ್ಲರು ಅವನ ಬಳಿಗೆ ಬಂದರು. ಕಿತ್ತುಹಾಕಲ್ಪಟ್ಟ ಕರ್ತನ ಬಲಿಪೀಠವನ್ನು ಅವನು ದುರಸ್ತು ಮಾಡಿದನು.
ಅವನು ಅನ್ಯದೇವರು ಗಳ ಬಲಿಪೀಠಗಳನ್ನೂ ಉನ್ನತ ಸ್ಥಳಗಳನ್ನೂ ತೆಗೆದು ಹಾಕಿ ವಿಗ್ರಹಗಳನ್ನು ಒಡೆದುಬಿಟ್ಟು ಅವುಗಳ ತೋಪು ಗಳನ್ನು ಕಡಿದುಹಾಕಿ,
ತಮ್ಮ ಪಿತೃಗಳ ದೇವರಾದ ಕರ್ತನನ್ನು ಹುಡುಕಲೂ ನ್ಯಾಯಪ್ರಮಾಣವನ್ನು ಆಜ್ಞೆಯನ್ನು ಕೈಕೊಳ್ಳಲೂ ಯೆಹೂದ್ಯರಿಗೆ ಆಜ್ಞಾಪಿ ಸಿದನು.
ಆಗ ಅವರು ಅರಸನಾದ ಹಿಜ್ಕೀಯನ ಬಳಿಗೆ ಬಂದು ಅವನಿಗೆ--ಕರ್ತನ ಸಮಸ್ತ ಆಲಯವನ್ನೂ ದಹನಬಲಿಯ ಯಜ್ಞವೇದಿಯನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಸಮ್ಮುಖದ ರೊಟ್ಟಿಯ ಮೇಜನ್ನೂ ಅದರ ಎಲ್ಲಾ ಪಾತ್ರೆಗಳನ್ನೂ ಶುಚಿಮಾಡಿದೆವು.
ಇದಲ್ಲದೆ ಕರ್ತನ ವಾಕ್ಯದಿಂದುಂಟಾದ ಅರಸನ ಪ್ರಧಾನರ ಆಜ್ಞೆಯನ್ನು ಕೈಕೊಳ್ಳಲು ಅವರಿಗೆ ಒಂದೇ ಹೃದಯವನ್ನು ಕೊಡಲು ದೇವರ ಕೈ ಯೆಹೂ ದದವರಲ್ಲಿ ಇತ್ತು.
ಹೀಗೆಯೇ ಕರ್ತನು ಇಸ್ರಾಯೇಲಿನ ಮಕ್ಕಳ ಮುಂದೆ ನಾಶ ಮಾಡಿದ ಜನಾಂಗಗಳಿಗಿಂತ ಯೆಹೂದದವರೂ ಯೆರೂಸಲೇಮಿನ ನಿವಾಸಿಗಳೂ ಕೆಟ್ಟದ್ದನ್ನು ಮಾಡು ವದಕ್ಕೆ ತಪ್ಪಿಹೋಗುವಂತೆ ಮನಸ್ಸೆಯು ಮಾಡಿದನು.
ಆದರೆ ನಿನ್ನ ನಂಬಿಕೆಯು ಬಿದ್ದುಹೋಗದಂತೆ ನಾನು ನಿನಗೋಸ್ಕರ ಬೇಡಿಕೊಂಡಿದ್ದೇನೆ; ನೀನು ತಿರುಗಿಕೊಂಡ ಮೇಲೆ ನಿನ್ನ ಸಹೋದರರನ್ನು ಬಲಪಡಿಸು ಎಂದು ಹೇಳಿದನು.