ಇದಲ್ಲದೆ ನಾನು ನನ್ನ ಗುಡಾರವನ್ನು ನಿಮ್ಮ ಮಧ್ಯದಲ್ಲಿ ಮಾಡಿಕೊಳ್ಳು ವೆನು. ನನ್ನ ಪ್ರಾಣವು ನಿಮ್ಮನ್ನು ಅಸಹ್ಯಿಸದೆ ಇರುವದು.
Cross references
ನಾನು ಅವರ ಮಧ್ಯದಲ್ಲಿ ವಾಸಿಸುವ ಹಾಗೆ ಅವರು ನನಗೆ ಒಂದು ಪರಿಶುದ್ಧ ಆಲಯವನ್ನು ಕಟ್ಟಬೇಕು.
ಇಸ್ರಾಯೇಲ್ ಮಕ್ಕಳ ಮಧ್ಯ ದಲ್ಲಿ ನಾನು ವಾಸಮಾಡಿ ಅವರಿಗೆ ದೇವರಾಗಿರುವೆನು.ಅವರ ಮಧ್ಯದಲ್ಲಿ ನಾನು ವಾಸವಾಗಿರುವದಕ್ಕಾಗಿ ಅವರನ್ನು ಐಗುಪ್ತದೇಶದೊಳಗಿಂದ ಹೊರಗೆ ಬರ ಮಾಡಿದ ಅವರ ದೇವರಾದ ಕರ್ತನು ನಾನೇ ಎಂದು ಅವರಿಗೆ ತಿಳಿಯುವದು. ನಾನೇ ಅವರ ದೇವರಾದ ಕರ್ತನು.
ನಾನು ನಿಮ್ಮೆದುರಿನಲ್ಲಿಯೇ ಹೊರಗೆ ಹಾಕಿದ ಜನಾಂಗಗಳಂತೆ ನೀವು ನಡೆಯಬಾರದು; ಅವರು ಇಂಥವುಗಳನ್ನೆಲ್ಲಾ ಮಾಡಿದ್ದಾರೆ; ಆದಕಾರಣ ನಾನು ಅವರನ್ನು ಅಸಹ್ಯಿಸಿಕೊಂಡಿದ್ದೇನೆ.
ಕರ್ತನು ಅದನ್ನು ನೋಡಿ ಕೋಪದಿಂದ ತನ್ನ ಕುಮಾರ ಕುಮಾರ್ತೆಯರನ್ನು ಅಸಹ್ಯಿಸಿಕೊಂಡನು.
ನಿಮ್ಮ ಸ್ವಾಸ್ತ್ಯದ ದೇಶವು ಅಶುದ್ಧ ವಾಗಿದ್ದರೆ ಕರ್ತನ ಗುಡಾರವಿರುವ ಕರ್ತನ ಸ್ವಾಸ್ತ್ಯದ ದೇಶಕ್ಕೆ ನೀವು ದಾಟಿ ಬಂದು ನಮ್ಮ ಮಧ್ಯದಲ್ಲಿ ಸ್ವಾಸ್ತ್ಯವನ್ನು ತೆಗೆದುಕೊಳ್ಳಿರಿ. ಕರ್ತನ ಬಲಿಪೀಠದ ಹೊರತಾಗಿ ನಿಮಗೋಸ್ಕರ ಒಂದು ಬಲಿಪೀಠವನ್ನು ಕಟ್ಟಿಕೊಳ್ಳುವದರಿಂದ ನೀವು ಕರ್ತನಿಗೂ ನಮಗೂ ವಿರೋಧವಾಗಿ ತಿರುಗಿಬೀಳಬೇಡಿರಿ;
ಯಾಜಕ ನಾಗಿರುವ ಎಲ್ಲಾಜಾರನ ಕುಮಾರನಾದ ಫೀನೆಹಾಸನು ರೂಬೇನನ ಮಕ್ಕಳಿಗೂ ಗಾದನ ಮಕ್ಕಳಿಗೂ ಮನಸ್ಸೆಯ ಮಕ್ಕಳಿಗೂ--ನೀವು ಕರ್ತನಿಗೆ ವಿರೋಧವಾಗಿ ಈ ಅಪರಾಧವನ್ನು ಮಾಡದೆ ಇರುವದರಿಂದ ಕರ್ತನು ನಮ್ಮ ಮಧ್ಯದಲ್ಲಿ ಇದ್ದಾನೆಂದು ಇಂದು ಅರಿತಿದ್ದೇವೆ. ಈಗ ನೀವು ಇಸ್ರಾಯೇಲ್ ಮಕ್ಕಳನ್ನು ಕರ್ತನ ಕೈಗೆ ತಪ್ಪಿಸಿದ್ದೀ ಅಂದನು.
ನಿನಗೆ ನಿವಾಸದ ಮಂದಿರವನ್ನು ನೀನು ಎಂದೆಂದಿಗೂ ಅದರಲ್ಲಿ ವಾಸವಾಗಿರುವ ಹಾಗೆ ಶಾಶ್ವತ ಸ್ಥಳವನ್ನು ನಿಜವಾಗಿಯೂ ಕಟ್ಟಿಸಿದ್ದೇನೆ ಎಂದು ಹೇಳಿದನು.
ಆದರೆ ದೇವರು ನಿಶ್ಚಯವಾಗಿ ಭೂಮಿಯ ಮೇಲೆ ವಾಸವಾಗಿರುವನೋ? ಇಗೋ, ಆಕಾಶಗಳೂ ಆಕಾಶಾ ಕಾಶಗಳೂ ನಿನ್ನನ್ನು ಹಿಡಿಯಲಾರವು; ಹಾಗಾದರೆ ನಾನು ಕಟ್ಟಿಸಿದ ಈ ಮಂದಿರವು ಹಿಡಿಯುವದು ಹೇಗೆ?
ಸಾಲೇಮಿನಲ್ಲಿ ಆತನ ಗುಡಾರವೂ ಚೀಯೋನಿನಲ್ಲಿ ಆತನ ವಾಸಸ್ಥಾನವೂ ಉಂಟು.
ದೇವರು ಇದನ್ನು ಕೇಳಿ ಉಗ್ರನಾಗಿ ಇಸ್ರಾಯೇಲನ್ನು ಬಹು ಅಸಹ್ಯಿಸಿ ಬಿಟ್ಟು,
ಯೆಹೂದನ ಕುಲವನ್ನೂ ತಾನು ಪ್ರೀತಿ ಮಾಡಿದ ಚೀಯೋನ್ ಪರ್ವತವನ್ನೂ ಆದುಕೊಂಡು,
ಆಗ ಕರ್ತನ ಕೋಪವು ಆತನ ಜನರಿಗೆ ವಿರೋಧವಾಗಿ ಉರಿ ಯಿತು; ಆತನು ತನ್ನ ಸ್ವಂತ ಬಾಧ್ಯತೆಯನ್ನು ಅಸಹ್ಯಿಸಿ ಕೊಂಡು
ಕರ್ತನು ಚೀಯೋನನ್ನು ಆದುಕೊಂಡು ಅದನ್ನು ತನ್ನ ವಾಸಕ್ಕಾಗಿ ಅಪೇಕ್ಷಿಸಿದ್ದಾನೆ.
ಕೆಟ್ಟವರ ಕೈಯೊಳಗಿಂದ ನಿನ್ನನ್ನು ತಪ್ಪಿಸುತ್ತೇನೆ, ಭಯಂಕರವಾದ ಕೈಯೊಳಗಿಂದ ನಿನ್ನನ್ನು ವಿಮೋಚಿಸುತ್ತೇನೆ.
ಕರ್ತನು ತನ್ನ ಯಜ್ಞವೇದಿಯನ್ನು ತಳ್ಳಿಬಿಟ್ಟಿ ದ್ದಾನೆ; ತನ್ನ ಪರಿಶುದ್ಧ ಸ್ಥಳವನ್ನು ಅಸಹ್ಯಪಡಿಸಿದ್ದಾನೆ; ಆತನು ಅವಳ ಅರಮನೆಗಳ ಗೋಡೆಗಳನ್ನು ಶತ್ರುವಿನ ಕೈಯಲ್ಲಿ ಒಪ್ಪಿಸಿಕೊಟ್ಟಿದ್ದಾನೆ; ಪರಿಶುದ್ಧ ಹಬ್ಬದ ದಿನದಲ್ಲಿ ಮಾಡಿದ ಹಾಗೆ ಅವರು ಕರ್ತನ ಆಲಯದಲ್ಲಿ ಶಬ್ದಮಾಡಿದ್ದಾರೆ.
ಇದಾದ ಮೇಲೆ ನಾನು ಅವರೊಂದಿಗೆ ಸಮಾ ಧಾನದ ಒಡಂಬಡಿಕೆಯನ್ನು ಮಾಡಿಕೊಳ್ಳುವೆನು; ಇದು ಅವರೊಂದಿಗೆ ನಿತ್ಯವಾದ ಒಡಂಬಡಿಕೆಯಾಗಿ ರುವದು; ನಾನು ಅವರನ್ನು ಆ ಸ್ಥಳದಲ್ಲಿರಿಸುವೆನು ಅವರನ್ನು ವೃದ್ಧಿಗೊಳಿಸುವೆನು; ನನ್ನ ಪರಿಶುದ್ಧ ಸ್ಥಳವನ್ನು ಎಂದೆಂದಿಗೂ ಅವರ ಮಧ್ಯದಲ್ಲಿಡುವೆನು.
ನನ್ನ ಪರಿಶುದ್ಧ ಸ್ಥಳವು ಎಂದೆಂದಿಗೂ ಅವರ ಮಧ್ಯದೊಳಗಿರುವಾಗ, ಕರ್ತ ನಾದ ನಾನೇ ಇಸ್ರಾಯೇಲ್ಯರನ್ನು ಪರಿಶುದ್ಧ ಗೊಳಿಸಿದೆನೆಂದು ಅನ್ಯಜನರು ತಿಳಿದುಕೊಳ್ಳುವರು.
ಇದಲ್ಲದೆ ಒಂದೇ ತಿಂಗಳಲ್ಲಿ ಮೂರು ಕುರುಬರನ್ನು ತೆಗೆದುಹಾಕಿದೆನು; ನನ್ನ ಆತ್ಮವು ಅವರನ್ನು ಹೇಸಿಕೊಂಡಿತು; ಅವರ ಆತ್ಮವು ಸಹ ನನ್ನನ್ನು ಹೇಸಿ ಕೊಂಡಿತು.
ಆತನಲ್ಲಿ ನೀವು ಸಹ ಆತ್ಮನ ಮೂಲಕವಾಗಿ ದೇವರಿಗೆ ನಿವಾಸಸ್ಥಾನವಾಗುವಂತೆ ಒಟ್ಟಾಗಿ ಕಟ್ಟಲ್ಪಡುತ್ತಾ ಇದ್ದೀರಿ.
ಇದಲ್ಲದೆ ಪರಲೋಕದೊಳಗಿಂದ ಬಂದ ಮಹಾಶಬ್ದವು ನನಗೆ ಕೇಳಿಸಿತು. ಅದು-ಇಗೋ, ದೇವರ ಗುಡಾರವು ಮನುಷ್ಯರೊಂದಿಗೆ ಅದೆ; ಆತನು ಅವರೊಡನೆ ವಾಸ ಮಾಡುವನು, ಅವರು ಆತನ ಪ್ರಜೆಗಳಾಗಿರುವರು; ದೇವರು ತಾನೇ ಅವರ ಸಂಗಡ ಇರುವನು, ಇದಲ್ಲದೆ ಆತನು ಅವರ ದೇವರಾಗಿ