ಲೇವ್ಯಕಾಂಡ 26:10 · ಕನ್ನಡ ಬೈಬಲ್
ನೀವು ಹಳೇ ಧಾನ್ಯವನ್ನು ತಿಂದು ಹೊಸದು ಬಂದಾಗ ಹಳೇದನ್ನು ಹೊರಗೆ ತರುವಿರಿ.
Cross references
ಲೇವ್ಯಕಾಂಡ 25:22
ನೀವು ಎಂಟನೆಯ ವರುಷದಲ್ಲಿ ಬಿತ್ತಿ ಅದರ ಫಲವನ್ನು ಒಂಭತ್ತನೆಯ ವರುಷದ ವರೆಗೆ ತಿನ್ನುವಿರಿ; ಅದರ ಫಲ ಬರುವ ವರೆಗೆ ನೀವು ಸಂಗ್ರಹಿಸಿದ ಹಳೇದನ್ನೇ ತಿನ್ನುವಿರಿ.
ಯೆಹೋಶುವ 5:11
ಪಸ್ಕದ ಎರಡನೇ ದಿವಸವಾದ ಆ ದಿನದಲ್ಲಿ ಅವರು ಆ ದೇಶದ ಹಳೆಯ ಧಾನ್ಯದಿಂದ ಮಾಡಿದ ಹುಳಿ ಇಲ್ಲದ ರೊಟ್ಟಿಗಳನ್ನೂ ಹುರಿದ ಧಾನ್ಯಗಳನ್ನೂ ತಿಂದರು.
2 ಅರಸುಗಳು 19:29
ನಿನಗೆ ಗುರುತು ಇದೇ--ಈ ವರುಷದಲ್ಲಿ ತನ್ನಷ್ಟಕ್ಕೆ ತಾನೇ ಬೆಳೆದದ್ದನ್ನೂ ಎರಡನೇ ವರುಷದಲ್ಲಿ ಅದರಿಂದ ಮೊಳೆತದ್ದನ್ನೂ ತಿನ್ನುವಿರಿ; ಆದರೆ ಮೂರನೇ ವರುಷ ದಲ್ಲಿ ನೀವು ಬಿತ್ತಿ ಕೊಯ್ಯಿರಿ; ದ್ರಾಕ್ಷೇ ತೋಟಗಳನ್ನು ನೆಟ್ಟು ಅವುಗಳ ಫಲಗಳನ್ನು ತಿನ್ನಿರಿ.
ಲೂಕ 12:17
ಆಗ ಅವನು ತನ್ನೊಳಗೆ--ನಾನೇನು ಮಾಡಲಿ? ನನಗಿರುವ ಬೆಳೆಯನ್ನು ತುಂಬಿಡುವದಕ್ಕೆ ನನಗೆ ಸ್ಥಳವಿಲ್ಲ ಎಂದು ಆಲೋಚಿಸಿ ಅವನು--