ಈ ವರುಷಗಳಲ್ಲಿ ಅವನು ವಿಮೋಚಿಸಲ್ಪಡದಿದ್ದರೆ ಜೂಬಿಲಿ ಸಂವತ್ಸರದಲ್ಲಿ ಅವನೊಂದಿಗೆ ಅವನ ಮಕ್ಕಳು ಬಿಡುಗಡೆಯಾಗಬೇಕು.ಯಾಕಂದರೆ ಇಸ್ರಾಯೇಲ್ ಮಕ್ಕಳು ನನ್ನ ದಾಸರು, ಐಗುಪ್ತದೇಶ ದೊಳಗಿಂದ ನಾನು ಹೊರಗೆ ಬರಮಾಡಿದ ಇವರು ನನ್ನ ದಾಸರೇ. ನಿಮ್ಮ ದೇವರಾದ ಕರ್ತನು ನಾನೇ.
Cross references
ನೀನು ಇಬ್ರಿಯ ದಾಸನನ್ನು ಕೊಂಡುಕೊಂಡರೆ ಅವನು ಆರು ವರುಷ ನಿನಗೆ ಸೇವೆಮಾಡಬೇಕು; ಏಳನೆಯ ವರುಷದಲ್ಲಿ ಏನೂ ಕೊಡದೆ ಬಿಡುಗಡೆಯಾಗಿ ಅವನು ಹೋಗಲಿ.
ಆದರೆ ಕೂಲಿ ಯಾಳಂತೆಯೂ ಪ್ರವಾಸಿಯಂತೆಯೂ ಅವನು ನಿನ್ನ ಬಳಿಯಲ್ಲಿ ಇರಲಿ. ಜೂಬಿಲಿ ಸಂವತ್ಸರದ ವರೆಗೆ ನಿನಗೆ ಸೇವೆಮಾಡಲಿ.
ನೀನು ಬಂದಿ ಸಲ್ಪಟ್ಟವರಿಗೆ--ಹೊರಗೆ ಹೋಗಿರಿ, ಕತ್ತಲೆಯಲ್ಲಿರು ವವರಿಗೆ--ನಿಮ್ಮನ್ನು ತೋರ್ಪಡಿಸಿಕೊಳ್ಳಿರಿ ಎಂದು ಹೇಳಬಹುದು. ಅವರು ದಾರಿಗಳಲ್ಲಿ ಮೇಯಿಸುವರು, ಅವರ ಎಲ್ಲಾ ಎತ್ತರವಾದ ಪ್ರದೇಶಗಳು ಕೂಡ ಅವ ರಿಗೆ ಹುಲ್ಲುಗಾವಲಾಗಿರುವವು.
ಆದರೆ ಕರ್ತನು ಹೀಗ ನ್ನುತ್ತಾನೆ--ಶೂರನ ಸೆರೆಯವರು ತೆಗೆಯಲ್ಪಡುವರು; ಭಯಂಕರವಾದ ಕೊಳ್ಳೆಯು ಬಿಡಿಸಲ್ಪಡುವದು; ನಿನ್ನೊ ಡನೆ ಹೋರಾಡುವವನ ಸಂಗಡ ನಾನೇ ಹೋರಾಡಿ ನಿನ್ನ ಮಕ್ಕಳನ್ನು ನಾನು ರಕ್ಷಿಸುವೆನು.ನಿನ್ನ ಹಿಂಸಕರಿಗೆ ಅವರ ಮಾಂಸವನ್ನೇ ಅವರಿಗೆ ತಿನ್ನಿಸುವೆನು ಮತ್ತು ಸಿಹಿಯಾದ ದ್ರಾಕ್ಷಾರಸವನ್ನು ಕುಡಿಯುವಂತೆ ಅವರು ತಮ್ಮ ಸ್ವಂತ ರಕ್ತವನ್ನೇ ಕುಡಿಯುವರು. ಆಗ ಕರ್ತನಾದ ನಾನೇ ನಿನ್ನ ರಕ್ಷಕನೂ ನಿನ್ನ ವಿಮೋಚಕನೂ ಯಾಕೋಬ್ಯರ ಶೂರನೂ ಎಂದು ನರಜನ್ಮದವರೆ ಲ್ಲರಿಗೂ ಗೊತ್ತಾಗುವದು.
ಕರ್ತನು ಹೀಗನ್ನುತ್ತಾನೆ--ನಿಮ್ಮನ್ನು ನೀವೇ ನಿಷ್ಫಲವಾಗಿ ಮಾಡಿಕೊಂಡಿರಿ; ಹಣವಿಲ್ಲದೇ ನೀವು ವಿಮೋಚಿಸಲ್ಪಡುವಿರಿ.