Home Bibles ಯೆಶಾಯ 52:3 · ಕನ್ನಡ ಬೈಬಲ್
ಯೆಶಾಯ 52:3 · ಕನ್ನಡ ಬೈಬಲ್

ಕರ್ತನು ಹೀಗನ್ನುತ್ತಾನೆ--ನಿಮ್ಮನ್ನು ನೀವೇ ನಿಷ್ಫಲವಾಗಿ ಮಾಡಿಕೊಂಡಿರಿ; ಹಣವಿಲ್ಲದೇ ನೀವು ವಿಮೋಚಿಸಲ್ಪಡುವಿರಿ.

Cross references

ಲೇವ್ಯಕಾಂಡ 25:54

ಈ ವರುಷಗಳಲ್ಲಿ ಅವನು ವಿಮೋಚಿಸಲ್ಪಡದಿದ್ದರೆ ಜೂಬಿಲಿ ಸಂವತ್ಸರದಲ್ಲಿ ಅವನೊಂದಿಗೆ ಅವನ ಮಕ್ಕಳು ಬಿಡುಗಡೆಯಾಗಬೇಕು.ಯಾಕಂದರೆ ಇಸ್ರಾಯೇಲ್‌ ಮಕ್ಕಳು ನನ್ನ ದಾಸರು, ಐಗುಪ್ತದೇಶ ದೊಳಗಿಂದ ನಾನು ಹೊರಗೆ ಬರಮಾಡಿದ ಇವರು ನನ್ನ ದಾಸರೇ. ನಿಮ್ಮ ದೇವರಾದ ಕರ್ತನು ನಾನೇ.

ಕೀರ್ತನೆಗಳು 44:12

ನಿನ್ನ ಜನರನ್ನು ಕ್ರಯವಿಲ್ಲದೆ ಮಾರಿಬಿಡುತ್ತೀ. ಅವರ ಬೆಲೆಯಿಂದ ನೀನು ನಿನ್ನ ಸಂಪತ್ತನ್ನು ಹೆಚ್ಚು ಮಾಡಲಿಲ್ಲ.

ಕೀರ್ತನೆಗಳು 44:13

ನಮ್ಮ ನೆರೆಯವರಿಗೆ ನಮ್ಮನ್ನು ನಿಂದೆಗೂ ಸುತ್ತಲಿರುವವರಿಗೆ ಗೇಲಿಯಾಗಿಯೂ ಹಾಸ್ಯವಾಗಿಯೂ ನಮ್ಮನ್ನು ಇಡುತ್ತೀ.

ಯೆಶಾಯ 45:13

ನಾನೇ ಅವನನ್ನು ನೀತಿಯಲ್ಲಿ ಎಬ್ಬಿಸಿ ದ್ದೇನೆ; ಅವನ ಎಲ್ಲಾ ಮಾರ್ಗಗಳನ್ನು ಸರಾಗ ಮಾಡು ತ್ತೇನೆ; ಅವನು ನನ್ನ ಪಟ್ಟಣವನ್ನು ಕಟ್ಟಿ ಕ್ರಯವ ನ್ನಾಗಲೀ ಬಹುಮಾನವನ್ನಾಗಲೀ ಕೇಳಿಕೊಳ್ಳದೆ ನನ್ನ ಸೆರೆಯವರನ್ನು ಕಳುಹಿಸಿಬಿಡುವನು ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ಯೆಶಾಯ 50:1

ಕರ್ತನು ಹೀಗನ್ನುತ್ತಾನೆ--ನಾನು ಬಿಟ್ಟು ಬಿಟ್ಟದ್ದಕ್ಕೆ ನಿನ್ನ ತಾಯಿಯ ತ್ಯಾಗಪತ್ರವು ಎಲ್ಲಿ? ಇಲ್ಲವೆ ನಾನು ನನ್ನ ಸಾಲಗಾರರಲ್ಲಿ ಯಾರಿಗೆ ನಿಮ್ಮನ್ನು ಮಾರಿಬಿಟ್ಟೇನು? ಇಗೋ, ನಿಮ್ಮ ಅಕ್ರಮ ಗಳ ನಿಮಿತ್ತ ನಿಮ್ಮನ್ನು ನೀವೇ ಮಾರಿಕೊಂಡಿದ್ದೀರಿ; ನಿಮ್ಮ ದ್ರೋಹಗಳ ನಿಮಿತ್ತವೇ ನಿಮ್ಮ ತಾಯಿಯನ್ನು ಬಿಟ್ಟಿದ್ದೇನೆ.

ಯೆರೆಮಿಯ 15:13

ಆದದರಿಂದ ನಾನು ನಿಮ್ಮನ್ನು ಈ ದೇಶದೊಳಗಿಂದ ಬಿಸಾಡಿ ನಿಮಗೂ ನಿಮ್ಮ ತಂದೆಗಳಿಗೂ ತಿಳಿಯದ ದೇಶಕ್ಕೆ ಎಸೆಯುವೆನು; ಅಲ್ಲಿ ನೀವು ರಾತ್ರಿ ಹಗಲು ಬೇರೆ ದೇವರುಗಳಿಗೆ ಸೇವೆಮಾಡುವಿರಿ ನಾನು ನಿಮಗೆ ಕನಿಕರ ತೋರಿಸುವದಿಲ್ಲ.

ರೋಮಾಪುರದವರಿಗೆ 7:14

ನ್ಯಾಯ ಪ್ರಮಾಣವು ಆತ್ಮೀಕವಾದದ್ದೆಂದು ನಾವು ಬಲ್ಲೆವು; ಆದರೆ ನಾನು ಶರೀರಾಧೀನನೂ ಪಾಪದ ಅಧೀನದಲ್ಲಿ ರುವದಕ್ಕೆ ಮಾರಲ್ಪಟ್ಟವನೂ ಆಗಿದ್ದೇನೆ.

1 ಪೇತ್ರ 1:18

ನಿಮ್ಮ ತಂದೆ ಗಳಿಂದ ಕಲಿತುಕೊಂಡ ಸಂಪ್ರದಾಯದ ವ್ಯರ್ಥವಾದ ನಡವಳಿಕೆಯಿಂದ ನಿಮಗೆ ಬಿಡುಗಡೆಯಾದದ್ದು ನಶಿಸಿ ಹೋಗುವ ಬೆಳ್ಳಿ ಬಂಗಾರದಿಂದಲ್ಲ;

Interlinear

Choose Theme