ಪರಿಶುದ್ಧವಾದದ್ದನ್ನು ಪರಕೀಯನು ತಿನ್ನಬಾರದು. ಯಾಜಕನ ಪ್ರವಾಸಿಯಾಗಲಿ ಇಲ್ಲವೆ ಕೂಲಿ ಆಳಾಗಲಿ ಪರಿಶುದ್ಧವಾದವುಗಳಲ್ಲಿ ತಿನ್ನಬಾರದು.
Cross references
ಕರ್ತನು ಮೋಶೆ ಆರೋನರಿಗೆ--ಪಸ್ಕದ ಶಾಸನವು ಇದೇ: ಅನ್ಯರಲ್ಲಿ ಯಾರೂ ಅದನ್ನು ತಿನ್ನ ಬಾರದು.
ಪರ ದೇಶದವರೂ ಕೂಲಿಯವರೂ ಅದನ್ನು ತಿನ್ನಬಾರದು.
ಅವ ರನ್ನು ಪ್ರತಿಷ್ಠೆಮಾಡುವದಕ್ಕೋಸ್ಕರ ಮತ್ತು ಪರಿಶುದ್ಧ ಮಾಡುವದಕ್ಕೋಸ್ಕರ ಅವರಿಗಾಗಿ ಪ್ರಾಯಶ್ಚಿತ್ತ ಮಾಡಿ ದವುಗಳನ್ನು ಅವರೇ ಊಟಮಾಡಬೇಕು. ಅನ್ಯರು ಅವುಗಳನ್ನು ಉಣ್ಣಬಾರದು, ಯಾಕಂದರೆ ಅವುಗಳು ಪರಿಶುದ್ಧವಾದವುಗಳು.
ಅವನು ಅತಿ ಪರಿಶುದ್ಧವಾದ ಮತ್ತು ಪರಿಶುದ್ಧವಾದ ತನ್ನ ದೇವರ ರೊಟ್ಟಿಯನ್ನು ತಿನ್ನಬೇಕು.
ಆಗ ಕರ್ತನ ಸನ್ನಿಧಿಯಿಂದ ತೆಗೆದುಕೊಳ್ಳಲ್ಪಟ್ಟ ಸಮ್ಮುಖದ ರೊಟ್ಟಿಗಳ ಹೊರತು ಬೇರೆ ರೊಟ್ಟಿಯು ಅಲ್ಲಿ ಇಲ್ಲದ್ದರಿಂದ ಯಾಜಕನು ಅವನಿಗೆ ಪರಿಶುದ್ಧ ರೊಟ್ಟಿಯನ್ನು ಕೊಟ್ಟನು. ಅವುಗಳನ್ನು ತೆಗೆದುಕೊಳ್ಳುವ ದಿವಸದಲ್ಲಿ ಅವುಗಳಿಗೆ ಬದಲಾಗಿ ಬಿಸಿರೊಟ್ಟಿಗಳು ಇಡಲ್ಪಡುವವು.
ಆದರೆ ಸೌಲನ ಸೇವಕರಲ್ಲಿ ಎದೋಮ್ಯನಾದ ದೋಯೇಗ ನೆಂಬ ಹೆಸರುಳ್ಳ ಒಬ್ಬನು ಆ ದಿವಸ ಅಲ್ಲಿ ಕರ್ತನ ಮುಂದೆ ತಡೆಯಲ್ಪಟ್ಟಿದ್ದನು. ಅವನು ಸೌಲನ ಹಿಂಡು ಕಾಯುವವರಲ್ಲಿ ಮುಖ್ಯಸ್ಥನಾಗಿದ್ದನು.
ಊರೀಮ್ ತುವ್ಮೆಾಮ್ ಇರುವ ಯಾಜಕನು ಏಳುವ ವರೆಗೂ ಮಹಾಪರಿಶುದ್ಧವಾದವುಗಳನ್ನು ತಿನ್ನ ಬಾರದೆಂದು ತರ್ಷಾತನು ಅವರಿಗೆ ಹೇಳಿದನು.
ನೀವು ನನ್ನ ಪರಿಶುದ್ಧವಾದ ಜವಾಬ್ದಾರಿಯನ್ನು ಕೈಗೊಳ್ಳದೆ ಬೇರೆಯವರನ್ನು ಕಾಯುವದಕ್ಕೆ ನಿಮ್ಮ ಪರಿ ಶುದ್ದ ಸ್ಥಳದಲ್ಲಿ ಇರಿಸಿದ್ದೀರಿ.
ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು?