Home Bibles ಮತ್ತಾಯ 12:4 · ಕನ್ನಡ ಬೈಬಲ್
ಮತ್ತಾಯ 12:4 · ಕನ್ನಡ ಬೈಬಲ್

ಅವನು ದೇವರ ಮನೆ ಯೊಳಗೆ ಪ್ರವೇಶಿಸಿ ಯಾಜಕರೇ ಹೊರತು ತಾನಾಗಲೀ ತನ್ನ ಕೂಡ ಇದ್ದವರಾಗಲೀ ತಿನ್ನಬಾರದಾಗಿದ್ದ ಸಮ್ಮುಖ ರೊಟ್ಟಿಯನ್ನು ಹೇಗೆ ತಿಂದನು?

Cross references

ನಿರ್ಗಮಕಾಂಡ 25:30

ಮೇಜಿನ ಮೇಲೆ ಸಮ್ಮುಖದ ರೊಟ್ಟಿಯನ್ನು ಯಾವಾಗಲೂ ನನ್ನ ಮುಂದೆ ಇಡಬೇಕು.

ನಿರ್ಗಮಕಾಂಡ 29:32

ಆರೋನನೂ ಅವನ ಕುಮಾರರೂ ಟಗರಿನ ಮಾಂಸ ವನ್ನೂ ಪುಟ್ಟಿಯಲ್ಲಿರುವ ರೊಟ್ಟಿಯನ್ನೂ ಸಭೆಯ ಗುಡಾ ರದ ಬಾಗಲಿನ ಬಳಿಯಲ್ಲಿ ಊಟಮಾಡಬೇಕು.

ಲೇವ್ಯಕಾಂಡ 8:31

ಮೋಶೆಯು ಆರೋನನಿಗೂ ಅವನ ಕುಮಾರರಿಗೂ--ಸಭೆಯ ಗುಡಾರದ ಬಾಗಿಲ ಬಳಿಯಲ್ಲಿ ಆ ಮಾಂಸವನ್ನು ಬೇಯಿಸಿರಿ; ಅದನ್ನು ಪ್ರತಿಷ್ಠಿತ ಬುಟ್ಟಿ ಯೊಳಗಿರುವ ರೊಟ್ಟಿಯೊಡನೆ ತಿನ್ನಬೇಕು; ನಾನು ಆಜ್ಞಾಪಿಸಿ ಹೇಳಿದಂತೆ ಆರೋನನೂ ಅವನ ಕುಮಾ ರರೂ ಅದನ್ನು ತಿನ್ನಬೇಕು.

ಲೇವ್ಯಕಾಂಡ 24:5

ನೀನು ನಯವಾದ ಹಿಟ್ಟನ್ನು ತೆಗೆದುಕೊಂಡು ಹನ್ನೆರಡು ರೊಟ್ಟಿಗಳನ್ನು ಸುಡಬೇಕು; ಹತ್ತರಲ್ಲಿ ಎರಡು ಪಾಲು ಒಂದು ರೊಟ್ಟಿಯಲ್ಲಿ ಇರಬೇಕು.

Interlinear

Choose Theme