ನಮ್ಮ ಹೃದಯವನ್ನು ಕೈಗಳೊಂದಿಗೆ ಪರಲೋಕದ ದೇವರ ಕಡೆಗೆ ಎತ್ತಿಕೊಳ್ಳೋಣ.
Cross references
ನೀನು ನಿನ್ನ ಹೃದಯವನ್ನು ಸಿದ್ಧಮಾಡಿ ನಿನ್ನ ಕೈಗಳನ್ನು ಆತನ ಕಡೆಗೆ ಚಾಚಿದರೆ,
ಓ ಕರ್ತನೇ, ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
ನಾನು ನಿನಗೆ ಮೊರೆಯಿಡು ವಾಗ ನನ್ನ ಕೈಗಳನ್ನು ನಿನ್ನ ಪರಿಶುದ್ಧ ದೈವೋಕ್ತಿಯ ಕಡೆಗೆ ಎತ್ತುವಾಗ ನನ್ನ ವಿಜ್ಞಾಪನೆಯ ಶಬ್ದವನ್ನು ಕೇಳು.
ನನ್ನ ಜೀವಮಾನದಲ್ಲೆಲ್ಲಾ ಹೀಗೆಯೇ ನಿನ್ನನ್ನು ಹಾಡಿಹರಸುತ್ತಾ ನಿನ್ನ ಹೆಸರೆತ್ತಿ ಕೈಮುಗಿಯುವೆನು.
ಓ ಕರ್ತನೇ, ನಿನ್ನ ಸೇವಕನ ಪ್ರಾಣವನ್ನು ಸಂತೋಷಪಡಿಸು; ನಿನ್ನ ಕಡೆಗೆ ನನ್ನ ಪ್ರಾಣವನ್ನು ಎತ್ತುತ್ತೇನೆ.
ನಿಮ್ಮ ಕೈಗಳನ್ನು ಪರಿಶುದ್ಧ ಸ್ಥಳದಲ್ಲಿ ಎತ್ತಿ ಕರ್ತನನ್ನು ಸ್ತುತಿಸಿರಿ.ಆಕಾಶವನ್ನೂ ಭೂಮಿಯನ್ನೂ ಉಂಟು ಮಾಡಿದ ಕರ್ತನು ಚೀಯೋನಿನೊಳಗಿಂದ ನಿನ್ನನ್ನು ಆಶೀರ್ವದಿಸಲಿ.
ನನ್ನ ಪ್ರಾರ್ಥನೆ ನಿನ್ನ ಮುಂದೆ ಧೂಪವಾಗಿಯೂ ನನ್ನ ಕೈ ಎತ್ತುವದು ಸಾಯಂಕಾಲದ ಬಲಿಯಾಗಿಯೂ ಸಿದ್ಧವಾಗಿರಲಿ.
ನನ್ನ ಕೈಗಳನ್ನು ನಿನ್ನ ಕಡೆಗೆ ಚಾಚುತ್ತೇನೆ; ನನ್ನ ಪ್ರಾಣವು ದಾಹಗೊಂಡ ಭೂಮಿಯ ಹಾಗೆ ನಿನಗಾಗಿ ದಾಹಗೊಂಡಿದೆ.
ಉನ್ನತನೂ ಎತ್ತರವಾದವನೂ ನಿತ್ಯವಾಗಿ ವಾಸಿ ಸುವವನೂ ಪರಿಶುದ್ಧನೆಂದು ಹೆಸರುಳ್ಳಾತನೂ ಹೀಗೆ ಹೇಳುತ್ತಾನೆ--ಉನ್ನತವಾದ ಪರಿಶುದ್ಧ ಸ್ಥಳದಲ್ಲಿ ವಾಸಿ ಸುವ ನಾನು ಪಶ್ಚಾತ್ತಾಪದೊಂದಿಗೆ ಮತ್ತು ದೀನನ ಆತ್ಮದೊಂದಿಗೆ ಇದ್ದುಕೊಂಡು ಅವರನ್ನು ಉಜ್ಜೀ ವಿಸುವವನಾಗಿದ್ದೇನೆ.
ನೀವು ನಮಗೆ ಪ್ರಿಯರಾದ ಕಾರಣ ನಾವು ನಿಮ್ಮಲ್ಲಿ ಮಮತೆಯುಳ್ಳ ವರಾಗಿ ದೇವರ ಸುವಾರ್ತೆಯನ್ನು ಹೇಳುವದಕ್ಕೆ ಮಾತ್ರ ವಲ್ಲದೆ ನಿಮಗೋಸ್ಕರ ನಾವು ನಮ್ಮ ಪ್ರಾಣವನ್ನೇ ಕೊಡುವದಕ್ಕೆ ಇಷ್ಟವುಳ್ಳವರಾಗಿದ್ದೆವು.