Home Bibles ನ್ಯಾಯಾಧಿಪತಿಗಳು 4:9 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 4:9 · ಕನ್ನಡ ಬೈಬಲ್

ಅದಕ್ಕವಳುನಾನು ನಿನ್ನ ಸಂಗಡ ನಿಶ್ಚಯವಾಗಿ ಬರುವೆನು; ಆದರೆ ನೀನು ಹೋಗುವ ಪ್ರಯಾಣದಿಂದ ಉಂಟಾಗುವ ಘನವು ನಿನ್ನದಾಗಿರುವದಿಲ್ಲ; ಕರ್ತನು ಒಬ್ಬ ಸ್ತ್ರೀಯ ಕೈಗೆ ಸೀಸೆರನನ್ನು ಮಾರಿಬಿಡುವನು ಎಂದು ಹೇಳಿ ದಳು. ದೆಬೋರಳು ಎದ್ದು ಬಾರಾಕನ ಕೂಡ ಕೆದೆಷಿಗೆ ಹೋದಳು.

Cross references

ನ್ಯಾಯಾಧಿಪತಿಗಳು 2:14

ಆದದರಿಂದ ಕರ್ತನು ಇಸ್ರಾಯೇಲಿಗೆ ವಿರೋಧ ವಾಗಿ ಉರಿಗೊಂಡು ಅವರನ್ನು ಕೊಳ್ಳೆಹೊಡೆಯುವ ಕೊಳ್ಳೆಗಾರರ ಕೈಯಲ್ಲಿ ಒಪ್ಪಿಸಿಕೊಟ್ಟನು. ತರುವಾಯ ಅವರು ತಮ್ಮ ಶತ್ರುಗಳಿಗೆ ಎದುರಾಗಿ ನಿಲ್ಲದ ಹಾಗೆ ಅವರ ಸುತ್ತಲಿರುವ ಅವರ ಶತ್ರುಗಳ ಕೈಗೆ ಅವರನ್ನು ಮಾರಿಬಿಟ್ಟನು.

ನ್ಯಾಯಾಧಿಪತಿಗಳು 4:17

ಆದರೆ ಸೀಸೆರನು ಕಾಲುನಡೆಯಾಗಿ ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇಲಳ ಗುಡಾರಕ್ಕೆ ಓಡಿಬಂದನು. ಯಾಬೀನನೆಂಬ ಹಾಚೋರಿನ ಅರಸ ನಿಗೂ ಕೇನ್ಯನಾದ ಹೆಬೆರನ ಮನೆಗೂ ನಡುವೆ ಸಮಾ ಧಾನ ಇತ್ತು.

ನ್ಯಾಯಾಧಿಪತಿಗಳು 5:24

ಕೇನ್ಯನಾದ ಹೆಬೆರನ ಹೆಂಡತಿಯಾದ ಯಾಯೇ ಲಳು ಸ್ತ್ರೀಯರಲ್ಲಿ ಅಧಿಕವಾಗಿ ಆಶೀರ್ವದಿಸಲ್ಪಡು ವಳು; ಸ್ತ್ರೀಯರೊಳಗೆ ಅಧಿಕವಾಗಿ ಗುಡಾರದಲ್ಲಿ ಆಶೀರ್ವದಿಸಲ್ಪಡುವಳು.

ನ್ಯಾಯಾಧಿಪತಿಗಳು 9:53

ಆದರೆ ಒಬ್ಬ ಸ್ತ್ರೀಯು ಒಂದು ಬೀಸುವ ಕಲ್ಲಿನ ತುಂಡನ್ನು ಅಬೀಮೆಲೆಕನ ತಲೆಯ ಮೇಲೆ ಹಾಕಿ; ಅದರಿಂದ ಅವನ ತಲೆಯನ್ನು ಒಡೆದುಹಾಕಿದಳು.

ನ್ಯಾಯಾಧಿಪತಿಗಳು 9:54

ಆಗ ಅವನು ಶೀಘ್ರವಾಗಿ ತನ್ನ ಆಯುಧಗಳನ್ನು ಹೊರುವ ಸೇವಕ ನನ್ನು ಕರೆದು ಅವನಿಗೆ--ಒಬ್ಬ ಸ್ತ್ರೀಯು ಕೊಂದಳೆಂದು ಮನುಷ್ಯರು ನನ್ನನ್ನು ಕುರಿತು ಹೇಳದ ಹಾಗೆ ನೀನು ನಿನ್ನ ಕತ್ತಿಯನ್ನು ಇರಿದು ನನ್ನನ್ನು ಕೊಲ್ಲು ಎಂದು ಅವನಿಗೆ ಹೇಳಿದನು. ಹಾಗೆಯೇ ಅವನ ಸೇವಕನು ಅವನನ್ನು ತಿವಿದು ಹಾಕಿದನು; ಅವನು ಸತ್ತನು.

1 ಸಮುವೇಲ 2:30

ಆದದರಿಂದ ಇಸ್ರಾಯೇಲಿನ ದೇವರಾದ ಕರ್ತನು ಹೇಳುವ ದೇನಂದರೆ--ನಿನ್ನ ಮನೆಯವರೂ ನಿನ್ನ ತಂದೆಯ ಮನೆಯವರೂ ಎಂದೆಂದಿಗೂ ನನ್ನ ಸನ್ನಿಧಿಯಲ್ಲಿ ನಡೆದುಕೊಳ್ಳುವರೆಂದು ನಾನು ನಿಜವಾಗಿ ಹೇಳಿದ್ದೆನು. ಆದರೆ ಈಗ ಕರ್ತನು ಹೇಳುವದೇನಂದರೆ--ನನಗೆ ಅದು ದೂರವಾಗಿರಲಿ; ಯಾಕಂದರೆ ನನ್ನನ್ನು ಸನ್ಮಾನಿಸು ವವರನ್ನು ನಾನು ಸನ್ಮಾನಿಸುವೆನು; ನನ್ನನ್ನು ತಿರಸ್ಕರಿಸು ವವರನ್ನು ನಾನು ತಿರಸ್ಕರಿಸುವೆನು.

2 ಸಮುವೇಲ 20:21

ಕಾರ್ಯವು ಹಾಗಲ್ಲ; ಬಿಕ್ರೀಯ ಮಗನಾದ ಶೆಬನೆಂಬ ಹೆಸರುಳ್ಳ ಎಫ್ರಾಯಾಮ್‌ ಬೆಟ್ಟದವನಾದ ಒಬ್ಬ ಮನುಷ್ಯನು ಅರಸನಾದ ದಾವೀದನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ್ದಾನೆ. ನೀವು ಅವನೊಬ್ಬನನ್ನೇ ಒಪ್ಪಿಸಿಕೊಡಿರಿ; ಆಗ ನಾನು ಪಟ್ಟಣವನ್ನು ಬಿಟ್ಟು ಹೋಗುವೆನು ಅಂದನು. ಆ ಸ್ತ್ರೀಯು ಯೋವಾಬನಿಗೆ--ಇಗೋ, ಅವನ ತಲೆಯು ಗೋಡೆಯ ಮೇಲಿನಿಂದ ನಿನ್ನ ಬಳಿಗೆ ಹಾಕಲ್ಪಡುವದು ಅಂದಳು.

2 ದಿನವೃತ್ತಾಂತ 26:18

ಉಜ್ಜೀಯನೇ, ಕರ್ತ ನಿಗೆ ಧೂಪಸುಡುವದು ನಿನಗೆ ಸೇರಿದ್ದಲ್ಲ; ಧೂಪ ಸುಡುವದು ಪರಿಶುದ್ಧ ಮಾಡಲ್ಪಟ್ಟ ಯಾಜಕರಾದ ಆರೋನನ ಮಕ್ಕಳಿಗೆ ಸೇರಿದ್ದು; ನೀನು ಪರಿಶುದ್ಧ ಸ್ಥಾನದಿಂದ ಹೊರಟುಹೋಗು; ನೀನು ಅಪರಾಧ ಮಾಡಿದ್ದೀ. ದೇವರಾದ ಕರ್ತನಿಂದ ಇದು ನಿನಗೆ ಮಾನವಲ್ಲ ಅಂದರು.

Interlinear

Choose Theme