Home Bibles 2 ಸಮುವೇಲ 20:21 · ಕನ್ನಡ ಬೈಬಲ್
2 ಸಮುವೇಲ 20:21 · ಕನ್ನಡ ಬೈಬಲ್

ಕಾರ್ಯವು ಹಾಗಲ್ಲ; ಬಿಕ್ರೀಯ ಮಗನಾದ ಶೆಬನೆಂಬ ಹೆಸರುಳ್ಳ ಎಫ್ರಾಯಾಮ್‌ ಬೆಟ್ಟದವನಾದ ಒಬ್ಬ ಮನುಷ್ಯನು ಅರಸನಾದ ದಾವೀದನಿಗೆ ವಿರೋಧವಾಗಿ ತನ್ನ ಕೈಯನ್ನು ಎತ್ತಿದ್ದಾನೆ. ನೀವು ಅವನೊಬ್ಬನನ್ನೇ ಒಪ್ಪಿಸಿಕೊಡಿರಿ; ಆಗ ನಾನು ಪಟ್ಟಣವನ್ನು ಬಿಟ್ಟು ಹೋಗುವೆನು ಅಂದನು. ಆ ಸ್ತ್ರೀಯು ಯೋವಾಬನಿಗೆ--ಇಗೋ, ಅವನ ತಲೆಯು ಗೋಡೆಯ ಮೇಲಿನಿಂದ ನಿನ್ನ ಬಳಿಗೆ ಹಾಕಲ್ಪಡುವದು ಅಂದಳು.

Cross references

ಯೆಹೋಶುವ 24:33

ಆರೋ ನನ ಮಗನಾದ ಎಲೀಯಾಜರನು ಸತ್ತನು; ಅವ ನನ್ನು ಅವನ ಮಗನಾದ ಫೀನೆಹಾಸನಿಗೆ ಎಫ್ರಾ ಯಾಮ್‌ ಬೆಟ್ಟದ ದೇಶದಲ್ಲಿ ಕೊಡಲ್ಪಟ್ಟ ಗುಡ್ಡದಲ್ಲಿ ಹೂಣಿಟ್ಟರು.

ನ್ಯಾಯಾಧಿಪತಿಗಳು 2:9

ಅವನನ್ನು ಎಫ್ರಾಯಾಮಿನ ಬೆಟ್ಟದಲ್ಲಿ ಗಾಷ್‌ ಪರ್ವತದ ಉತ್ತರ ದಿಕ್ಕಿನಲ್ಲಿರುವ ಅವನ ಬಾಧ್ಯತೆಯ ಮೇರೆಯಾದ ತಿಮ್ನತ್‌ಹೆರೆಸ್‌ನಲ್ಲಿ ಹೂಣಿಟ್ಟರು.

ನ್ಯಾಯಾಧಿಪತಿಗಳು 7:24

ಇದಲ್ಲದೆ ಗಿದ್ಯೋನನು ಎಫ್ರಾಯಾಮ್‌ ಬೆಟ್ಟ ದಲ್ಲೆಲ್ಲಾ ದೂತರನ್ನು ಕಳುಹಿಸಿ--ನೀವು ಮಿದ್ಯಾನ್ಯರಿಗೆ ಎದುರಾಗಿ ಇಳಿದು ಹೋಗಿ ಬೇತ್‌ಬಾರ ಮತ್ತು ಯೊರ್ದನ್‌ ವರೆಗಿರುವ ನೀರುಗಳನ್ನು ಅವರಿಗೆ ಮುಂದಾಗಿ ಹಿಡಿಯಿರಿ ಎಂದು ಹೇಳಿದನು. ಹಾಗೆಯೇ ಎಫ್ರಾಯಾಮ್‌ ಮನುಷ್ಯರೆಲ್ಲರು ಕೂಡಿಕೊಂಡು ಬೇತ್‌ಬಾರ ಮತ್ತು ಯೊರ್ದನ್‌ ವರೆಗೆ ನೀರುಗಳನ್ನು ಹಿಡಿದರು.ಮಿದ್ಯಾನ್ಯರ ಇಬ್ಬರು ಅಧಿಪತಿಗಳಾದ ಓರೇಬನ್ನೂ ಜೇಬನ ಹಿಡಿದು ಓರೇಬನ್ನು ಓರೇಬೆಂಬ ಬಂಡೆಯಲ್ಲಿಯೂ ಜೇಬನ್ನು ಜೇಬನ ದ್ರಾಕ್ಷೇ ಆಲೆಯ ಬಳಿಯಲ್ಲಿಯೂ ಕೊಂದುಹಾಕಿ ಮಿದ್ಯಾನ್ಯರನ್ನು ಹಿಂದಟ್ಟಿ ಓರೇಬ ಜೇಬರ ತಲೆಗಳನ್ನು ಯೊರ್ದನಿಗೆ ಈಚೆಯಲ್ಲಿದ್ದ ಗಿದ್ಯೋನನ ಬಳಿಗೆ ತಂದರು.

ನ್ಯಾಯಾಧಿಪತಿಗಳು 9:55

ಅಬೀಮೆಲೆಕನು ಸತ್ತುಹೋದದ್ದನ್ನು ಇಸ್ರಾಯೇಲ್‌ ಮನುಷ್ಯರು ನೋಡಿದಾಗ ಅವರವರು ತಮ್ಮ ಸ್ಥಳಗಳಿಗೆ ಹೋದರು.

ನ್ಯಾಯಾಧಿಪತಿಗಳು 18:4

ಅವನು ಅವರಿಗೆವಿಾಕನು ನನಗೆ ಹೀಗೆ ಹೀಗೆ ನಡಿಸುತ್ತಾನೆ; ನನ್ನನ್ನು ಸಂಬಳಕ್ಕೆ ಇಟ್ಟು ಕೊಂಡಿದ್ದಾನೆ; ನಾನು ಅವನಿಗೆ ಯಾಜಕನಾಗಿದ್ದೇನೆ ಅಂದನು.

1 ಸಮುವೇಲ 24:6

ಅವನು ತನ್ನ ಮನುಷ್ಯರಿಗೆ--ಅವನು ಕರ್ತನ ಅಭಿಷಿಕ್ತನಾದದ್ದರಿಂದ ನನ್ನ ಕೈ ಅವನಿಗೆ ವಿರೋಧವಾಗಿ ಚಾಚಿ ಕರ್ತನಿಂದ ಅಭಿಷಿಕ್ತನಾದ ನನ್ನ ಒಡೆಯನಿಗೆ ಈ ಕಾರ್ಯಮಾಡುವದನ್ನು ಕರ್ತನು ತಡೆಯಲಿ ಅಂದನು.

1 ಸಮುವೇಲ 26:9

ಆದರೆ ದಾವೀದನು ಅಬೀಷೈಯನಿಗೆ -- ಅವನನ್ನು ಸಂಹರಿಸಬೇಡ; ಯಾಕಂದರೆ ಕರ್ತನ ಅಭಿಷಿಕ್ತನಿಗೆ ವಿರೋಧವಾಗಿ ಕೈ ಹಾಕುವವನು ನಿರಪರಾಧಿಯಾಗುವದಿಲ್ಲ ಅಂದನು.

2 ಸಮುವೇಲ 17:2

ಅವನು ದಣಿದವನೂ ಧೈರ್ಯಗುಂದಿದವನೂ ಆಗಿ ರುವಾಗಲೇ ಫಕ್ಕನೆ ಅವನ ಮೇಲೆ ಬಿದ್ದು ಅವನನ್ನು ಬೆದರಿಸುವೆನು, ಅವನ ಜನರೆಲ್ಲರೂ ಓಡಿಹೋಗು ವರು.

2 ಸಮುವೇಲ 20:1

ಬೆನ್ಯಾವಿಾನನ ಕುಲದವನಾದ ಬಿಕ್ರೀಯಮಗನಾಗಿರುವ ಶೆಬನೆಂಬ ಹೆಸರುಳ್ಳ ಬೆಲಿಯಾಳನವನಾದ ಒಬ್ಬನು ಅಲ್ಲಿದ್ದನು. ಅವನು ತುತೂರಿಯನ್ನು ಊದಿ--ನಮಗೆ ದಾವೀದನಲ್ಲಿ ಪಾಲಿಲ್ಲ; ಇಷಯನ ಮಗನಲ್ಲಿ ನಮಗೆ ಬಾಧ್ಯತೆಯೂ ಇಲ್ಲ. ಓ ಇಸ್ರಾಯೇಲ್ಯರೇ, ನಿಮ್ಮ ನಿಮ್ಮ ಗುಡಾರಗಳಿಗೆ ಹೋಗಿರಿ ಅಂದನು.

2 ಸಮುವೇಲ 23:18

ಯೋವಾಬನ ಸಹೋದರನಾದ ಚೆರೂಯಳ ಮಗನಾಗಿರುವ ಅಬೀಷೈಯು ಮೂರು ಮಂದಿಯಲ್ಲಿ ಮುಖ್ಯಸ್ಥನು. ಅವನು ತನ್ನ ಈಟಿಯನ್ನು ಎತ್ತಿ ಮುನ್ನೂರು ಜನರನ್ನು ಸಂಹರಿಸಿದ್ದರಿಂದ ಮೂವ ರೊಳಗೆ ಹೆಸರುಗೊಂಡನು.

2 ಅರಸುಗಳು 5:22

ಅವನುಕ್ಷೇಮ; ಇಗೋ, ಪ್ರವಾದಿಗಳ ಮಕ್ಕಳಲ್ಲಿ ಇಬ್ಬರು ಯೌವನಸ್ಥರು ಎಫ್ರಾಯಾಮ್‌ ಬೆಟ್ಟದಿಂದ ಈಗಲೇ ನನ್ನ ಬಳಿಗೆ ಬಂದಿದ್ದಾರೆ; ನೀನು ದಯಮಾಡಿ ಅವರಿಗೆ ಒಂದು ತಲಾಂತು ಬೆಳ್ಳಿಯನ್ನೂ ಎರಡು ದುಸ್ತು ಬಟ್ಟೆ ಗಳನ್ನೂ ಕೊಡಬೇಕೆಂದು ನಿನಗೆ ಹೇಳು ಎಂದು ನನ್ನ ಯಜಮಾನನು ಕಳುಹಿಸಿದ್ದಾನೆ ಅಂದನು.

2 ಅರಸುಗಳು 10:7

ಈ ಪತ್ರವು ಅವರ ಬಳಿಗೆ ಬಂದಾಗ ಏನಾಯಿತಂದರೆ, ಅವರು ಅರಸನ ಮಕ್ಕಳನ್ನು ಹಿಡಿದು ಎಪ್ಪತ್ತು ಮಂದಿಯನ್ನು ಕೊಂದು ಅವರ ತಲೆಗಳನ್ನು ಪುಟ್ಟಿಗಳಲ್ಲಿಟ್ಟು ಇಜ್ರೇಲಿನಲ್ಲಿದ್ದ ಯೇಹುವಿನ ಬಳಿಗೆ ಕಳುಹಿಸಿದರು.

ಯೆರೆಮಿಯ 4:15

ಒಂದು ಶಬ್ದವು ದಾನಿನಿಂದ ಪ್ರಕಟ ಮಾಡುತ್ತದೆ; ಎಫ್ರಾಯಾಮಿನ ಬೆಟ್ಟದಿಂದ ಆಪತ್ತನ್ನು ತಿಳಿಯಪಡಿಸುತ್ತದೆ.

ಯೆರೆಮಿಯ 50:19

ಯಾಕೋಬನ ಭಾಗವು ಇವುಗಳ ಹಾಗಲ್ಲ; ಆತನು ಎಲ್ಲವನ್ನು ರೂಪಿಸಿದವನೇ, ಆತನ ಸ್ವಾಸ್ತ್ಯದ ಕೋಲು ಇಸ್ರಾಯೇಲೇ; ಆತನ ಹೆಸರು ಸೈನ್ಯಗಳ ಕರ್ತನೇ.

Interlinear

Choose Theme