Home Bibles ನ್ಯಾಯಾಧಿಪತಿಗಳು 4:16 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 4:16 · ಕನ್ನಡ ಬೈಬಲ್

ಆಗ ಸೀಸೆರನು ರಥವನ್ನು ಬಿಟ್ಟು ಇಳಿದು ಕಾಲು ನಡೆಯಾಗಿ ಓಡಿ ಹೋದನು. ಆದರೆ ಬಾರಾಕನು ರಥಗಳನ್ನೂ ಸೈನ್ಯ ವನ್ನೂ ಅನ್ಯಜನಾಂಗಗಳ ಹರೋಷೆತಿನ ಮಟ್ಟಿಗೂ ಹಿಂದಟ್ಟಿದನು. ಸೀಸೆರನ ಸೈನ್ಯವೆಲ್ಲಾ ಕತ್ತಿಯಿಂದ ಹತ ವಾಗಿ ಬಿತ್ತು; ಒಬ್ಬನಾದರೂ ಉಳಿಯಲಿಲ್ಲ.

Cross references

ಲೇವ್ಯಕಾಂಡ 26:7

ನೀವು ನಿಮ್ಮ ಶತ್ರುಗಳನ್ನು ಹಿಂದಟ್ಟುವಾಗ ಅವರು ಕತ್ತಿಯಿಂದ ನಿಮ್ಮ ಮುಂದೆ ಬೀಳುವರು.

ಯೆಹೋಶುವ 10:10

ಆಗ ಕರ್ತನು ಅವರನ್ನು ಇಸ್ರಾಯೇಲಿನ ಮುಂದೆ ಗಲಿಬಿಲಿಮಾಡಿ ಅವರನ್ನು ಗಿಬ್ಯೋನಿನಲ್ಲಿ ದೊಡ್ಡ ಸಂಹಾರದಿಂದ ಸಂಹರಿಸಿ ಬೇತ್‌ಹೋರೋನಿಗೆ ಹೋಗುವ ಮಾರ್ಗದಲ್ಲಿ ಹಿಂದಟ್ಟಿ ಅಜೇಕ ಮಕ್ಕೇದದ ವರೆಗೂ ಹೊಡೆದನು.

ಯೆಹೋಶುವ 10:19

ನೀವು ನಿಲ್ಲಬೇಡಿರಿ, ನಿಮ್ಮ ಶತ್ರುಗಳನ್ನು ಹಿಂದಟ್ಟಿರಿ, ಹಿಂದಾದ ವೈರಿಗಳನ್ನು ಸಂಹರಿಸಿರಿ. ತಮ್ಮ ಪಟ್ಟಣಗಳಲ್ಲಿ ಪ್ರವೇಶಿಸದಂತೆ ಮಾಡಿರಿ; ಯಾಕಂದರೆ ನಿಮ್ಮ ದೇವರಾದ ಕರ್ತನು ಅವರನ್ನು ನಿಮ್ಮ ಕೈಗೆ ಒಪ್ಪಿಸಿಕೊಟ್ಟಿದ್ದಾನೆ ಅಂದನು.

ಯೆಹೋಶುವ 11:8

ಕರ್ತನು ಅವರನ್ನು ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವರು ಅವರನ್ನು ಹೊಡೆದು ದೊಡ್ಡ ಚೀದೋನಿನವರೆಗೂ ಮಿಸ್ರೆಫೋತ್ಮಯೀಮಿನ ವರೆಗೂ ಮೂಡಲಲ್ಲಿರುವ ಮಿಚ್ಪೆಯ ತಗ್ಗಿನ ವರೆಗೂ ಹಿಂದಟ್ಟಿ ಅವರಲ್ಲಿ ಒಬ್ಬನ ನ್ನಾದರೂ ಉಳಿಸದೆ ಅವರನ್ನು ಹೊಡೆದುಬಿಟ್ಟರು.

ಕೀರ್ತನೆಗಳು 83:9

ಮಿದ್ಯಾನಿಗೂ ಸೀಸೆರನಿಗೂ ಯಾಬೀನನಿಗೂ ಕೀಷೋನ್‌ ಹಳ್ಳದಲ್ಲಿ ಮಾಡಿದ ಹಾಗೆ ಅವರಿಗೆ ಮಾಡು.

ಕೀರ್ತನೆಗಳು 83:10

ಇವರು ಎಂದೋರಿನಲ್ಲಿ ನಾಶವಾಗಿ ಭೂಮಿಗೆ ಗೊಬ್ಬರವಾದರು.

ಕೀರ್ತನೆಗಳು 104:35

ಪಾಪಾತ್ಮರು ಭೂಮಿಯೊಳಗಿಂದ ನಾಶವಾಗಲಿ; ದುಷ್ಟರು ಇಲ್ಲದೆ ಹೋಗಲಿ; ಓ ನನ್ನ ಮನವೇ, ಕರ್ತನನ್ನು ಸ್ತುತಿಸು; ಕರ್ತನನ್ನು ಕೊಂಡಾಡಿರಿ.

ಯೆಶಾಯ 43:17

ಯಾವಾತನು ರಥ ಕುದುರೆ ಗಳ ದಂಡನ್ನು ಪರಾಕ್ರಮರಾದವರನ್ನು ಹೊರಡಿಸಿ ಅವು ಒಟ್ಟಿಗೆ ಬಿದ್ದು ಏಳಲಾರದಂತೆಯೂ ದೀಪದೋ ಪಾದಿಯಲ್ಲಿ ನಂದಿ ಆರಿಹೋಗುವಂತೆಯೂ ಮಾಡಿ ದನೋ ಆ ಕರ್ತನು ಇಂತೆನ್ನುತ್ತಾನೆ--

ರೋಮಾಪುರದವರಿಗೆ 2:12

ನ್ಯಾಯ ಪ್ರಮಾಣವಿಲ್ಲದೆ ಪಾಪ ಮಾಡಿದವರೆಲ್ಲರೂ ನ್ಯಾಯ ಪ್ರಮಾಣವಿಲ್ಲದೆ ನಾಶವಾಗುವರು; ನ್ಯಾಯಪ್ರಮಾಣ ವುಳ್ಳವರಾಗಿದ್ದು ಪಾಪ ಮಾಡಿದವರು ನ್ಯಾಯಪ್ರಮಾ ಣದಿಂದಲೇ ತೀರ್ಪು ಹೊಂದುವರು.

ಯಾಕೋಬ 2:13

ಕರುಣೆ ತೋರಿಸದೆ ಇರುವವನಿಗೆ ನ್ಯಾಯತೀರ್ಪಿನಲ್ಲಿ ಕರುಣೆಯು ತೋರಿಸಲ್ಪಡುವದಿಲ್ಲ. ಕರುಣೆಯು ನ್ಯಾಯತೀರ್ಪಿಗಿಂತ ಮೇಲಾಗಿ ಹಿಗ್ಗುತ್ತದೆ.

Interlinear

Choose Theme