Home Bibles ಯೆಹೋಶುವ 11:8 · ಕನ್ನಡ ಬೈಬಲ್
ಯೆಹೋಶುವ 11:8 · ಕನ್ನಡ ಬೈಬಲ್

ಕರ್ತನು ಅವರನ್ನು ಇಸ್ರಾಯೇಲಿನ ಕೈಯಲ್ಲಿ ಒಪ್ಪಿಸಿಕೊಟ್ಟನು. ಅವರು ಅವರನ್ನು ಹೊಡೆದು ದೊಡ್ಡ ಚೀದೋನಿನವರೆಗೂ ಮಿಸ್ರೆಫೋತ್ಮಯೀಮಿನ ವರೆಗೂ ಮೂಡಲಲ್ಲಿರುವ ಮಿಚ್ಪೆಯ ತಗ್ಗಿನ ವರೆಗೂ ಹಿಂದಟ್ಟಿ ಅವರಲ್ಲಿ ಒಬ್ಬನ ನ್ನಾದರೂ ಉಳಿಸದೆ ಅವರನ್ನು ಹೊಡೆದುಬಿಟ್ಟರು.

Cross references

ಆದಿಕಾಂಡ 10:15

ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ

ಆದಿಕಾಂಡ 49:13

ಜೆಬೂಲೂನನು ಸಮುದ್ರದ ರೇವಿನಲ್ಲಿ ವಾಸಿಸು ವನು; ಅವನು ಹಡಗುಗಳ ರೇವೂ ಆಗಿರುವನು. ಅವನ ಮೇರೆಯು ಚೀದೋನಿಗೆ ಮುಟ್ಟುವದು.

ದ್ವಿತೀಯೋಪದೇಶಕಾಂಡ 7:2

ನಿನ್ನ ದೇವರಾದ ಕರ್ತನು ಅವರನ್ನು ನಿನ್ನ ಮುಂದೆ ಒಪ್ಪಿಸಲು ನೀನು ಅವರನ್ನು ಹೊಡೆದು ಸಂಪೂರ್ಣವಾಗಿ ನಿರ್ಮೂಲ ಮಾಡಬೇಕು. ಅವರ ಸಂಗಡ ಒಡಂಬಡಿಕೆ ಮಾಡಿ ಕೊಳ್ಳಬಾರದು. ಇಲ್ಲವೆ ಅವರಿಗೆ ದಯೆತೋರಿಸ ಬಾರದು.

ದ್ವಿತೀಯೋಪದೇಶಕಾಂಡ 9:3

ಹೀಗಿರುವದರಿಂದ ನೀನು ಈಹೊತ್ತು ತಿಳಿದುಕೊಳ್ಳತಕ್ಕದ್ದೇನಂದರೆ--ನಿನ್ನ ದೇವ ರಾದ ಕರ್ತನೇ ನಿನ್ನ ಮುಂದೆ ದಾಟಿಹೋಗುತ್ತಾನೆ; ಆತನು ದಹಿಸುವ ಅಗ್ನಿಯಾಗಿ ಅವರನ್ನು ನಾಶಮಾಡು ವನು; ಆತನು ಅವರನ್ನು ನಿನ್ನ ಮುಂದೆ ತಗ್ಗಿಸುವನು; ಈ ಪ್ರಕಾರ ಅವರನ್ನು ಸ್ವಾಧೀನಪಡಿಸಿಕೊಂಡು ಕರ್ತನು ನಿನಗೆ ಹೇಳಿದ ಹಾಗೆ ಅವರನ್ನು ಬೇಗ ನಾಶಮಾಡುವಿ.

ಯೆಹೋಶುವ 10:20

ಯೆಹೋಶುವನೂ ಇಸ್ರಾಯೇಲ್‌ ಮಕ್ಕಳೂ ಅವರನ್ನು ಕೊಲ್ಲುವ ವರೆಗೂ ದೊಡ್ಡ ಸಂಹಾರದಿಂದ ಸಂಹರಿಸಿಬಿಟ್ಟ ತರುವಾಯ ಅವರಲ್ಲಿ ಉಳಿದವರು ಕೋಟೆಗಳುಳ್ಳ ಪಟ್ಟಣಗಳಲ್ಲಿ ಸೇರಿದರು.

ಯೆಹೋಶುವ 11:3

ಪೂರ್ವ ಪಶ್ಚಿಮಕ್ಕಿರುವ ಕಾನಾನ್ಯರ ಬಳಿಗೂ ಪರ್ವತಗಳಲ್ಲಿರುವ ಅಮೋರಿ ಯರ, ಹಿತ್ತಿಯರ, ಪೆರಿಜ್ಜೀಯರ, ಯೆಬೂಸಿಯರ ಬಳಿಗೂ ಮಿಚ್ಪೆಯ ದೇಶದಲ್ಲಿ ಹೆರ್ಮೋನ್‌ ಪರ್ವತದ ಕೆಳ ಭಾಗದಲ್ಲಿರುವ ಹಿವ್ವಿಯರ ಬಳಿಗೂ ಹೇಳಿಕಳುಹಿ ಸಿದನು.

ಯೆಹೋಶುವ 13:6

ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನ ವರೆಗೂ ಬೆಟ್ಟದ ದೇಶದ ಎಲ್ಲಾ ನಿವಾಸಿಗಳನ್ನೂ ಎಲ್ಲಾ ಚೀದೋನ್ಯರನ್ನೂ ನಾನು ಇಸ್ರಾಯೇಲ್‌ ಮಕ್ಕಳ ಎದುರಿನಿಂದ ಹೊರಡಿಸಿ ಬಿಡುವೆನು. ಆದರೆ ನಾನು ನಿನಗೆ ಹೇಳಿದ ಹಾಗೆಯೇ ನೀನು ಚೀಟುಗಳನ್ನು ಹಾಕಿ ಇಸ್ರಾಯೇಲಿಗೆ ಬಾಧ್ಯತೆಯಾಗಿ ಪಾಲಿಡಬೇಕು.

ಯೆಹೋಶುವ 19:28

ಅಲ್ಲಿಂದ ಎಬ್ರೋನಿಗೂ ರೆಹೋಬಿನಿಗೂ ಹಮ್ಮೋನಿಗೂ ಕಾನಕ್ಕೂ ಮಹಾಚಿದೋನಿನ ವರೆಗೆ ಹಾದು

ಯೆಹೋಶುವ 21:44

ಕರ್ತನು ಅವರ ತಂದೆಗಳಿಗೆ ಆಣೆ ಇಟ್ಟ ಪ್ರಕಾರವೆಲ್ಲಾ ಅವರ ಸುತ್ತಲೂ ಅವರಿಗೆ ವಿಶ್ರಾಂತಿ ಕೊಟ್ಟನು; ಅವರ ಎಲ್ಲಾ ಶತ್ರುಗಳಲ್ಲಿ ಒಬ್ಬನಾದರೂ ಅವರ ಮುಂದೆ ನಿಲ್ಲಲಿಲ್ಲ; ಅವರ ಶತ್ರುಗಳನ್ನೆಲ್ಲಾ ಕರ್ತನು ಅವರ ಕೈಗಳಿಗೆ ಒಪ್ಪಿಸಿದನು.ಕರ್ತನು ಇಸ್ರಾಯೇಲ್‌ ಮನೆಗೆ ಹೇಳಿದ ಒಳ್ಳೇ ವಿಷಯಗಳಲ್ಲಿ ಒಂದಾದರೂ ಬಿದ್ದು ಹೋಗಲಿಲ್ಲ; ಎಲ್ಲಾ ನೆರವೇರಿದವು.

2 ಸಮುವೇಲ 24:6

ಅಲ್ಲಿಂದ ಗಿಲ್ಯಾದಿಗೂ ತಖ್ತೀಮ್‌ ಹೊಜೀಯ ದೇಶಕ್ಕೂ ಅಲ್ಲಿಂದ ದಾನ್‌ನಿಗೂ ಅಲ್ಲಿಂದ ಸುತ್ತಿಕೊಂಡು ಚೀದೋನಿಗೂ ಬಂದರು.

ಜೆಕರ್ಯ 9:2

ಹಮಾತು ಬಹಳ ಜ್ಞಾನವಿರುವ ತೂರ್‌ ಚೀದೋನ್‌ ಸಹ ಅದರ ಮೇರೆಯಾಗಿದೆ.

Interlinear

Choose Theme