ಆ ಕಾಲದಲ್ಲಿ ಬೆನ್ಯಾವಿಾನ್ಯರು ತಿರಿಗಿ ಅವರ ಬಳಿಗೆ ಬಂದರು. ಅವರು ಯಾಬೇಷ್ ಗಿಲ್ಯಾದಿನ ಸ್ತ್ರೀಯ ರಲ್ಲಿ ಜೀವದಿಂದ ಉಳಿಸಿದ ಸ್ತ್ರೀಯರನ್ನು ಅವರಿಗೆ ಹೆಂಡತಿಯರಾಗಿ ಕೊಟ್ಟರು. ಅದಾಗ್ಯೂ ಅವರಿಗೆ ತಕ್ಕಷ್ಟು ಹೆಂಡತಿಯರು ಸಿಕ್ಕಲಿಲ್ಲ.
Cross references
ಆದರೆ ಆರು ನೂರು ಮಂದಿ ತಿರುಗಿಕೊಂಡು ಅರಣ್ಯದಲ್ಲಿರುವ ರಿಮ್ಮೋನ್ ಬೆಟ್ಟಕ್ಕೆ ಓಡಿಹೋಗಿ ರಿಮ್ಮೋನ್ ಗುಡ್ಡದಲ್ಲಿ ನಾಲ್ಕು ತಿಂಗಳು ವಾಸವಾಗಿದ್ದರು.ಇಸ್ರಾಯೇಲ್ ಜನರು ಬೆನ್ಯಾವಿಾನನ ಮಕ್ಕಳ ಮೇಲೆ ತಿರಿಗಿ ಹೋಗಿ ಪಟ್ಟಣದಲ್ಲಿ ಜನರನ್ನೂ ಪಶು ಗಳನ್ನೂ ಕೈಗೆ ಸಿಕ್ಕಿದ್ದೆಲ್ಲವನ್ನೂ ಕತ್ತಿಯಿಂದ ಹೊಡೆದು ತಾವು ಹೋದ ಸಮಸ್ತ ಪಟ್ಟಣಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
ಹಾಗೆಯೆ ಯಾಬೇಷ್ ಗಿಲ್ಯಾದಿನ ನಿವಾಸಿಗಳಲ್ಲಿ ಅವರ ಸಂಗಡ ಮಲಗುವದರಿಂದ ಪುರುಷರನ್ನು ಅರಿಯದೆ ಇರುವ ನಾನೂರು ಮಂದಿ ಪ್ರಾಯದ ಕನ್ನಿಕೆಯರನ್ನು ಕಂಡು ಕೊಂಡು ಅವರನ್ನು ಕಾನಾನ್‌ದೇಶದಲ್ಲಿರುವ ಶೀಲೋ ವಿನಲ್ಲಿದ್ದ ಪಾಳೆಯಕ್ಕೆ ತಂದರು.
ಅವರ ತಂದೆಗಳಾದರೂ ಅವರ ಸಹೋದರರಾದರೂ ನಮ್ಮ ಸಂಗಡ ವ್ಯಾಜ್ಯ ವಾಡುವದಕ್ಕೆ ಬಂದರೆ ನಾವು ಅವರಿಗೆ--ಯುದ್ದದಲ್ಲಿ ನಾವು ಅವನಿಗೆ ಹೆಂಡತಿಯನ್ನು ತಕ್ಕೊಳ್ಳದ ಕಾರಣ ನಮಗೋಸ್ಕರ ಅವರ ಮೇಲೆ ದಯೆ ತೋರಿಸಿರಿ. ಯಾಕಂದರೆ ನೀವು ಈ ಸಮಯದಲ್ಲಿ ಅವರಿಗೆ ಕೊಟ್ಟು ಅಪರಾಧಸ್ಥರಾಗಲಿಲ್ಲ ಎಂಬದಾಗಿ ಹೇಳುತ್ತೇವೆ ಅಂದರು.
ಆದಾಗ್ಯೂ ಜಾರತ್ವಕ್ಕೆ ದೂರವಿರುವಂತೆ ಪ್ರತಿ ಮನುಷ್ಯನಿಗೆ ಅವನ ಸ್ವಂತ ಹೆಂಡತಿಯೂ ಪ್ರತಿ ಸ್ತ್ರೀಗೆ ಅವಳ ಸ್ವಂತ ಗಂಡನೂ ಇರಲಿ.