ಆಗ ಸಭೆಯವ ರೆಲ್ಲರೂ ರಿಮ್ಮೋನ್ ಗುಡ್ಡದಲ್ಲಿರುವ ಬೆನ್ಯಾವಿಾನನ ಮಕ್ಕಳ ಸಂಗಡ ಮಾತನಾಡಿ ಅವರಿಗೆ ಸಮಾಧಾನ ವನ್ನು ಸಾರಲು ಕೆಲವರನ್ನು ಕಳುಹಿಸಿದರು.
Cross references
ನೀನು ಯುದ್ಧಮಾಡುವ ನಿಮಿತ್ತ ಒಂದು ಪಟ್ಟ ಣದ ಹತ್ತಿರ ಬಂದರೆ ಸಮಾಧಾನಕ್ಕಾಗಿ ಅದನ್ನು ಕರೆಯಬೇಕು.
ಲೆಬಾವೋತ್, ಶಿಲ್ಹೀಮ್, ಅಯಿನ್, ರಿಮ್ಮೋನ್ ಎಂಬವುಗಳೇ; ಅವುಗಳ ಗ್ರಾಮಗಳು ಪಟ್ಟಣಗಳೆಲ್ಲಾ ಇಪ್ಪತ್ತೊಂಭತ್ತು.
ಆದರೆ ಅವರು ತಿರುಗಿ ಕೊಂಡು ಅರಣ್ಯದಲ್ಲಿರುವ ರಿಮ್ಮೋನ್ ಬಂಡೆಗೆ ಓಡಿ ಹೋದರು. ಅದರಲ್ಲಿ ಐದು ಸಾವಿರ ಜನರನ್ನು ಹೆದ್ದಾರಿ ಗಳಲ್ಲಿ ಹಕ್ಕಲಾರಿಸಿ ಕೊಂದುಹಾಕಿದರು. ಕಡಿಮೆಯ ವರನ್ನು ಗಿದೋಮಿನ ವರೆಗೆ ಹಿಂದಟ್ಟಿ ಅವರಲ್ಲಿ ಎರಡು ಸಾವಿರ ಮನುಷ್ಯರನ್ನು ವಧಿಸಿದರು.
ಆದರೆ ಆರು ನೂರು ಮಂದಿ ತಿರುಗಿಕೊಂಡು ಅರಣ್ಯದಲ್ಲಿರುವ ರಿಮ್ಮೋನ್ ಬೆಟ್ಟಕ್ಕೆ ಓಡಿಹೋಗಿ ರಿಮ್ಮೋನ್ ಗುಡ್ಡದಲ್ಲಿ ನಾಲ್ಕು ತಿಂಗಳು ವಾಸವಾಗಿದ್ದರು.ಇಸ್ರಾಯೇಲ್ ಜನರು ಬೆನ್ಯಾವಿಾನನ ಮಕ್ಕಳ ಮೇಲೆ ತಿರಿಗಿ ಹೋಗಿ ಪಟ್ಟಣದಲ್ಲಿ ಜನರನ್ನೂ ಪಶು ಗಳನ್ನೂ ಕೈಗೆ ಸಿಕ್ಕಿದ್ದೆಲ್ಲವನ್ನೂ ಕತ್ತಿಯಿಂದ ಹೊಡೆದು ತಾವು ಹೋದ ಸಮಸ್ತ ಪಟ್ಟಣಗಳನ್ನು ಬೆಂಕಿಯಿಂದ ಸುಟ್ಟುಬಿಟ್ಟರು.
ನಾನು ತುಟಿಗಳಿಗೆ ಫಲವನ್ನುಂಟು ಮಾಡುವ ವನಾಗಿ ಅವನಿಗೆ ದೂರವಾದವನಿಗೂ ಅವನಿಗೆ ಸವಿಾಪವಾದವನಿಗೂ ಸಮಾಧಾನವಿರಲಿ. ನಾನು ಅವನನ್ನು ಸ್ವಸ್ಥಮಾಡುವೆ ನೆಂದು ಕರ್ತನು ಹೇಳು ತ್ತಾನೆ.
ನೀವು ಯಾವ ಮನೆಯಲ್ಲಿಯಾದರೂ ಪ್ರವೇಶಿಸುವಾಗ ಮೊದಲು--ಈ ಮನೆಗೆ ಸಮಾಧಾನವಾಗಲಿ ಎಂದು ಹೇಳಿರಿ.
ಇದಲ್ಲದೆ ಆತನು ಬಂದು ದೂರ ವಾಗಿದ್ದ ನಿಮಗೂ ಸವಿಾಪವಾಗಿದ್ದ ಅವರಿಗೂ ಸಮಾಧಾನವನ್ನು ಸಾರಿದನು.