ಆಗ ಅವಳ ಗಂಡನು ಎದ್ದು ಅವಳ ಸಂಗಡ ಪ್ರೀತಿಯಲ್ಲಿ ಮಾತನಾಡಿ ಅವಳನ್ನು ತಿರಿಗಿ ಕರತರುವದಕ್ಕೆ ತನ್ನ ಊಳಿಗದವನನ್ನೂ ಎರಡು ಕತ್ತೆಗಳನ್ನೂ ತಕ್ಕೊಂಡು ಅವಳ ಬಳಿಗೆ ಹೋದನು. ಅವಳು ಅವನನ್ನು ತನ್ನ ತಂದೆಯ ಮನೆಗೆ ಕರಕೊಂಡು ಹೋದಳು. ಹೆಂಗಸಿನ ತಂದೆ ಅವನನ್ನು ಕಂಡಾಗ ಅವನನ್ನು ಕಂಡುಕೊಂಡ ದ್ದರಿಂದ ಸಂತೋಷಪಟ್ಟನು.
Cross references
ಅವನ ಮನಸ್ಸು ಯಾಕೋಬನ ಮಗಳಾದ ದೀನಳನ್ನು ಅಂಟಿಕೊಂಡಿತ್ತು. ಅವನು ಆ ಹುಡುಗಿಯನ್ನು ಪ್ರೀತಿಮಾಡಿ ಆಕೆಯೊಂದಿಗೆ ದಯೆ ಯಿಂದ ಮಾತನಾಡಿದನು.
ಹೀಗಿರುವದರಿಂದ ನೀವು ಭಯಪಡಬೇಡಿರಿ. ನಾನು ನಿಮ್ಮನ್ನೂ ನಿಮ್ಮ ಮಕ್ಕಳನ್ನೂ ಸಂರಕ್ಷಿಸುತ್ತೇನೆ ಎಂದು ಹೇಳಿ ಅವರನ್ನು ಸಂತೈಸಿ ದಯೆಯಿಂದ ಮಾತನಾಡಿದನು.
ನಿನ್ನ ಹೃದಯ ದಲ್ಲಿ ನಿನ್ನ ಸಹೋದರನನ್ನು ದ್ವೇಷಿಸಬೇಡ; ಹೇಗಾ ದರೂ ನಿನ್ನ ನೆರೆಯವನ ಪಾಪವು ನಿನ್ನ ಮೇಲೆ ಬಾರದಂತೆ ಅವನನ್ನು ತಪ್ಪದೆ ಗದರಿಸು.
ಒಬ್ಬನು ಮತ್ತೊಬ್ಬನ ಹೆಂಡತಿಯೊಡನೆ ವ್ಯಭಿ ಚಾರಮಾಡಿದರೆ, ಅಂದರೆ ತನ್ನ ನೆರೆಯವನ ಹೆಂಡ ತಿಯೊಡನೆ ವ್ಯಭಿಚಾರಮಾಡಿದರೆ ವ್ಯಭಿಚಾರ ಮಾಡುವವನಿಗೂ ವ್ಯಭಿಚಾರಮಾಡುವವಳಿಗೂ ನಿಶ್ಚಯವಾಗಿ ಮರಣದಂಡನೆ ವಿಧಿಸಬೇಕು.
ಅವನು ಹೋದದರಿಂದ ದೇವರ ಕೋಪವು ಉರಿಯಿತು. ಕರ್ತನ ದೂತನು ಅವನಿಗೆ ಎದುರಾಳಿ ಯಾಗಿ ಮಾರ್ಗದಲ್ಲಿ ನಿಂತುಕೊಂಡನು; ಆದರೆ ಅವನು ತನ್ನ ಕತ್ತೆಯ ಮೇಲೆ ಹತ್ತಿಕೊಂಡಿದ್ದನು; ಅವನ ಇಬ್ಬರು ಆಳುಗಳು ಅವನ ಸಂಗಡ ಇದ್ದರು.
ಕೆಲವು ದಿನಗಳ ತರುವಾಯ ಆದದ್ದೇನಂದರೆ, ಗೋಧಿಯ ಸುಗ್ಗೀ ಕಾಲದಲ್ಲಿ ಸಂಸೋನನು ತನ್ನ ಹೆಂಡತಿಯನ್ನು ನೋಡುವದಕ್ಕೆ ಒಂದು ಮೇಕೆಯ ಮರಿಯನ್ನು ತೆಗೆದುಕೊಂಡು ಹೋಗಿ ಅವನು--ನನ್ನ ಹೆಂಡತಿಯ ಬಳಿಗೆ ಕೊಠಡಿಯಲ್ಲಿ ಪ್ರವೇಶಿಸುತ್ತೇನೆ ಅಂದನು.
ಆ ಸ್ತ್ರೀ ಉದಯ ಕಾಲಕ್ಕೆ ಮುಂಚೆ ಬಂದು ಬೆಳಕಾಗುವ ಮಟ್ಟಿಗೂ ಅಲ್ಲಿ ತನ್ನ ಯಜಮಾನನು ಇರುವ ಮನೆಯ ಬಾಗಿಲ ಬಳಿಯಲ್ಲಿ ಬಿದ್ದಿದ್ದಳು.
ಒಬ್ಬನು ತನ್ನ ಹೆಂಡತಿಯನ್ನು ಬಿಟ್ಟುಬಿಟ್ಟಾಗ ಅವಳು ಅವನನ್ನು ಬಿಟ್ಟು ಹೋಗಿ ಬೇರೆಯವನವಳಾದರೆ ಅವನು ಇನ್ನು ಅವಳ ಹತ್ತಿರ ಹಿಂತಿರುಗುವನೋ? ಆ ದೇಶವು ಬಹಳವಾಗಿ ಅಪವಿತ್ರವಾಗುವದಿಲ್ಲವೋ? ನೀನು ಅನೇಕ ಮಿಂಡರ ಸಂಗಡ ಸೂಳೆತನ ಮಾಡಿದ್ದೀ; ಆದಾಗ್ಯೂ ನನ್ನ ಬಳಿಗೆ ತಿರುಗಿಕೋ ಎಂದು ಕರ್ತನು ಅನ್ನುತ್ತಾನೆ.
ಆದದರಿಂದ ಇಗೋ, ನಾನು ಅವಳನ್ನು ಮೋಹಿಸಿ ಅವಳನ್ನು ಅರಣ್ಯದೊಳಗೆ ಕರೆದುಕೊಂಡು ಬಂದು ಅವಳ ಸಂಗಡ ಹಿತಕರವಾಗಿ ಮಾತನಾಡು ವೆನು.
ಕರ್ತನು--ಆ ದಿನದಲ್ಲಿ ಆಗುವದೇನಂದರೆ, ನೀನು ನನ್ನನ್ನು ಇನ್ನು ಮೇಲೆ ಬಾಳಿ ಎಂದು ಕರೆಯದೆ ಈಶೀ ಎಂದು ಕರೆಯುವಿ.
ಆದರೆ ಆಕೆಯ ಗಂಡನಾದ ಯೋಸೇಫನು ನೀತಿವಂತನಾಗಿದ್ದು ಆಕೆಯನ್ನು ಬೈಲಿಗೆ ತರುವದಕ್ಕೆ ಮನಸ್ಸಿಲ್ಲದೆ ರಹಸ್ಯವಾಗಿ ಆಕೆಯನ್ನು ಬಿಟ್ಟುಬಿಡಬೇಕೆಂದು ಆಲೋಚಿಸುತ್ತಿದ್ದನು.
ಆತನಿಗೆ -- ಬೋಧಕನೇ, ಈ ಹೆಂಗಸು ವ್ಯಭಿಚಾರ ಮಾಡುವಾಗಲೇ ಹಿಡಿಯ ಲ್ಪಟ್ಟಳು.
ಅದಕ್ಕೆ ಆಕೆಯು-- ಕರ್ತನೇ, ಯಾರೂ ವಿಧಿಸಲಿಲ್ಲ ಅಂದಳು. ಯೇಸು ಆಕೆಗೆ--ನಾನೂ ನಿನಗೆ ಶಿಕ್ಷೆ ವಿಧಿಸುವದಿಲ್ಲ; ಹೋಗು, ಇನ್ನು ಮೇಲೆ ಪಾಪಮಾಡಬೇಡ ಅಂದನು.
ಸಹೋದರರೇ, ಒಬ್ಬನು ಒಂದು ದೋಷದಲ್ಲಿ ಸಿಕ್ಕಿದರೆ ಅಂಥವನನ್ನು ಆತ್ಮಿಕರಾದ ನೀವು ಸಾತ್ವಿಕಭಾವದಿಂದ ಯಥಾಸ್ಥಾನ ಪಡಿಸಿರಿ; ನೀನಾದರೋ ಶೋಧನೆಗೆ ಒಳಗಾಗದಂತೆ ನಿನ್ನ ವಿಷಯದಲ್ಲಿ ಎಚ್ಚರಿಕೆಯಾಗಿರು.