Home Bibles ☰ Books ನ್ಯಾಯಾಧಿಪತಿಗಳು 18:14 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 18:14 · ಕನ್ನಡ ಬೈಬಲ್

ಆಗ ಲಯಿಷಿನ ದೇಶವನ್ನು ಪಾಳತಿ ನೋಡಿಬಂದ ಆ ಐದು ಮಂದಿ ಮನುಷ್ಯರು ತಮ್ಮ ಸಹೋದರರರಿಗೆ ಉತ್ತರ ಕೊಟ್ಟುಈ ಮನೆಗಳಲ್ಲಿ ಏಫೋದೂ ಪ್ರತಿಮೆಗಳೂ ಕೆತ್ತಿದ ವಿಗ್ರಹವೂ ಎರಕದ ವಿಗ್ರಹವೂ ಉಂಟೆಂದು ನೀವು ಅರಿಯಿರಾ? ನೀವು ಈಗ ಮಾಡಬೇಕಾದದ್ದೇನೆಂದು ತಿಳುಕೊಳ್ಳಿರಿ ಅಂದರು.

Cross references

ನ್ಯಾಯಾಧಿಪತಿಗಳು 17:5

ಈ ವಿಾಕ ಎಂಬ ಮನುಷ್ಯನಿಗೆ ದೇವರುಗಳ ಮನೆ ಇದ್ದದರಿಂದ ಅವನು ಒಂದು ಏಫೋದನ್ನೂ ಪ್ರತಿಮೆಗಳನ್ನೂ ಮಾಡಿ ತನ್ನ ಕುಮಾರರಲ್ಲಿ ಒಬ್ಬನನ್ನು ಪ್ರತಿಷ್ಠೆಮಾಡಿದನು. ಅವನು ಇವನಿಗೆ ಯಾಜಕ ನಾದನು.

ನ್ಯಾಯಾಧಿಪತಿಗಳು 18:3

ಅವರು ವಿಾಕನ ಮನೆಯ ಬಳಿಯಲ್ಲಿರುವಾಗ ಲೇವಿಯನಾದ ಪ್ರಾಯಸ್ಥನ ಸ್ವರವನ್ನು ತಿಳುಕೊಂಡು ಅವನ ಬಳಿಗೆ ಹೋಗಿ--ನಿನ್ನನ್ನು ಇಲ್ಲಿಗೆ ಕರಕೊಂಡು ಬಂದವರು ಯಾರು? ಇಲ್ಲಿ ಏನು ಮಾಡುತ್ತಿ? ಇಲ್ಲಿ ನಿನಗೆ ಏನು ಇದೆ ಅಂದರು.

1 ಸಮುವೇಲ 14:28

ಆಗ ಜನರಲ್ಲಿ ಒಬ್ಬನು ಅವನಿಗೆ--ಈ ಹೊತ್ತು ಆಹಾರ ತಿನ್ನುವವನು ಶಪಿಸಲ್ಪಡಲಿ ಎಂದು ನಿನ್ನ ತಂದೆಯು ಜನರಿಗೆ ಕಟ್ಟುನಿಟ್ಟಾಗಿ ಆಣೆ ಇಟ್ಟಿದ್ದಾನೆ. ಅದಕ್ಕೋಸ್ಕರ ಜನರು ದಣಿದು ಹೋಗಿದ್ದಾರೆ ಅಂದನು.

ಯೋಬ 3:2

ಯೋಬನು ಮಾತನಾಡಿ--

ಸಾಮೇತಿಗಳು 19:27

ನನ್ನ ಮಗನೇ, ತಿಳುವಳಿಕೆಯ ಮಾತುಗಳಿಂದ ದಾರಿ ತಪ್ಪಿಸುವ ಬೋಧನೆಯನ್ನು ಕೇಳದಿರು.

ಯೆಶಾಯ 8:19

ಲೊಚಗುಟ್ಟುವ ಪಿಸುಮಾತಾಡುವ ಮಂತ್ರಗಾರ ರನ್ನೂ ಕಣಿಹೇಳುವವರನ್ನೂ ಹುಡುಕಿರಿ ಎಂದು ಅವರು ನಿಮಗೆ ಹೇಳುವಾಗ ಜನರು ತಮ್ಮ ದೇವರನ್ನೇ ಹುಡುಕುವದಿಲ್ಲವೋ? ಜೀವಿತರಿಗಾಗಿ ಸತ್ತವರಲ್ಲಿ ಹೋಗುವದುಂಟೋ?

Interlinear

Choose Theme