Home Bibles ☰ Books ನ್ಯಾಯಾಧಿಪತಿಗಳು 16:9 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 16:9 · ಕನ್ನಡ ಬೈಬಲ್

ಹೊಂಚುಗಾರರು ಅವಳೊಂದಿಗೆ ಕೊಠಡಿಯಲ್ಲಿ ದ್ದರು. ಅವಳು ಅವನಿಗೆ--ಸಂಸೋನನೇ, ಪಿಲಿಷ್ಟಿ ಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಆಗ ಅವನು ಬೆಂಕಿಗೆ ತೋರಿಸಲ್ಪಟ್ಟ ಸಣಬಿನ ಹುರಿಹರಿದು ಹೋಗುವ ಹಾಗೆಯೇ ನಾರಿನ ಬರಲುಗಳನ್ನು ಹರಿದುಬಿಟ್ಟನು. ಹೀಗೆ ಅವನ ಶಕ್ತಿ ತಿಳಿಯಲ್ಪಡದೆ ಹೋಯಿತು.

Cross references

ನ್ಯಾಯಾಧಿಪತಿಗಳು 15:14

ಅವನು ಲೆಹೀಗೆ ಬಂದಾಗ ಪಿಲಿಷ್ಟಿ ಯರು ಅವನಿಗೆ ಎದುರಾಗಿ ಬಂದು ಆರ್ಭಟಿಸಿದರು. ಕರ್ತನ ಆತ್ಮನು ಅವನ ಮೇಲೆ ಬಲವಾಗಿ ಬಂದದ್ದರಿಂದ ಅವನ ತೋಳುಗಳಲ್ಲಿ ಕಟ್ಟಿದ್ದ ಹಗ್ಗಗಳು ಬೆಂಕಿಯಿಂದ ಸುಟ್ಟುಹೋದ ದಾರದ ಹಾಗೆ ಆದವು. ಅವನ ಕೈಗಳಲ್ಲಿ ಇದ್ದ ಕಟ್ಟುಗಳು ಬಿಚ್ಚಿಬಿದ್ದವು.

ಕೀರ್ತನೆಗಳು 58:9

ನಿಮ್ಮ ಗಡಿಗೆಗಳಿಗೆ ಮುಳ್ಳಿನಕಾವು ತಾಗುವದಕ್ಕಿಂತ ಮುಂಚೆ ಅದು ಹಸಿ ಇರುವಾಗಲೇ ದೇವರು ಕೋಪದಿಂದ ಬಿರುಗಾಳಿಯಿಂ ದಲೋ ಎಂಬಂತೆ ಅವರನ್ನು ಹಾರಿಸಿಬಿಡುವನು.

Interlinear

Choose Theme