Home Bibles ನ್ಯಾಯಾಧಿಪತಿಗಳು 15:14 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 15:14 · ಕನ್ನಡ ಬೈಬಲ್

ಅವನು ಲೆಹೀಗೆ ಬಂದಾಗ ಪಿಲಿಷ್ಟಿ ಯರು ಅವನಿಗೆ ಎದುರಾಗಿ ಬಂದು ಆರ್ಭಟಿಸಿದರು. ಕರ್ತನ ಆತ್ಮನು ಅವನ ಮೇಲೆ ಬಲವಾಗಿ ಬಂದದ್ದರಿಂದ ಅವನ ತೋಳುಗಳಲ್ಲಿ ಕಟ್ಟಿದ್ದ ಹಗ್ಗಗಳು ಬೆಂಕಿಯಿಂದ ಸುಟ್ಟುಹೋದ ದಾರದ ಹಾಗೆ ಆದವು. ಅವನ ಕೈಗಳಲ್ಲಿ ಇದ್ದ ಕಟ್ಟುಗಳು ಬಿಚ್ಚಿಬಿದ್ದವು.

Cross references

ನಿರ್ಗಮಕಾಂಡ 14:3

ಫರೋಹನು ಇಸ್ರಾಯೇಲ್‌ ಮಕ್ಕಳ ವಿಷಯದಲ್ಲಿ--ಅವರು ದೇಶದಲ್ಲಿ ಸಿಕ್ಕಿಕೊಂಡರು. ಅರಣ್ಯವು ಅವರನ್ನು ಒಳಗೆ ಮುಚ್ಚಿಬಿಟ್ಟಿತು ಎಂದು ಹೇಳುವನು.

ನಿರ್ಗಮಕಾಂಡ 14:5

ಜನರು ಓಡಿಹೋದರೆಂದು ಐಗುಪ್ತದ ಅರಸನಿಗೆ ತಿಳಿಸಲ್ಪಟ್ಟಿತು; ಆಗ ಫರೋಹನ ಮತ್ತು ಅವನ ಸೇವಕರ ಹೃದಯವು ಜನರಿಗೆ ವಿರೋಧವಾಗಿ ತಿರುಗಿಕೊಂಡಿತು; ಅವರು--ಇಸ್ರಾಯೇಲ್ಯರು ನಮ್ಮ ಸೇವೆಮಾಡುವದನ್ನು ಬಿಟ್ಟುಹೋಗಿಬಿಡುವಂತೆ ನಾವು ಯಾಕೆ ಮಾಡಿದೆವು ಅಂದರು.

ನ್ಯಾಯಾಧಿಪತಿಗಳು 3:10

ಅವನ ಮೇಲೆ ಕರ್ತನ ಆತ್ಮವು ಬಂದದ್ದರಿಂದ ಅವನು ಇಸ್ರಾಯೇಲ್ಯರಿಗೆ ನ್ಯಾಯತೀರಿಸಿದನು. ಯುದ್ಧಮಾಡು ವದಕ್ಕೆ ಹೊರಟಾಗ ಕರ್ತನು ಅವನ ಕೈಗೆ ಮೆಸೊ ಪೊತಾಮ್ಯದ ಅರಸನಾದ ಕೂಷನ್‌ರಿಷಾತಮನ್ನು ಒಪ್ಪಿಸಿಕೊಟ್ಟನು. ಅವನ ಕೈ ಕೂಷನ್‌ರಿಷಾತಯಿಮಿನ ಮೇಲೆ ಬಲವಾಯಿತು.

ನ್ಯಾಯಾಧಿಪತಿಗಳು 5:30

ಅವರು ಓಡಲಿಲ್ಲವೋ? ಕೊಳ್ಳೆಹಂಚಿ ಕೊಳ್ಳಲಿಲ್ಲವೋ? ಒಬ್ಬೊಬ್ಬ ಮನುಷ್ಯನಿಗೆ ಒಂದೆರಡು ಹೆಣ್ಣು, ಸೀಸೆರನಿಗೆ ನಾನಾ ವರ್ಣವುಳ್ಳ ಕೊಳ್ಳೆ, ನಾನಾ ವರ್ಣವುಳ್ಳಂಥ ವಿಚಿತ್ರವಾಗಿ, ಹೊಲಿದಂಥ, ಎರಡು ಪಕ್ಕೆಗಳಲ್ಲಿ ವಿಚಿತ್ರವಾಗಿ ಹೊಲಿದಂಥ, ಕೊಳ್ಳೆ ಹಿಡಿ ಯುವರ ಕಂಠಗಳಿಗೆ ತಕ್ಕಂಥ ನಾನಾ ವರ್ಣವುಳ್ಳ ಕೊಳ್ಳೆ, ಸಿಕ್ಕಲಿಲ್ಲವೋ?ಓ ಕರ್ತನೇ, ಹೀಗೆಯೇ ನಿನ್ನ ಶತ್ರುಗಳೆಲ್ಲರು ನಾಶವಾಗಲಿ, ಆದರೆ ಆತನನ್ನು ಪ್ರೀತಿಮಾಡುವವರು ತನ್ನ ಪರಾಕ್ರಮದಿಂದ ಹೊರ ಡುವ ಸೂರ್ಯನ ಹಾಗೆಯೇ ಇರಲಿ. ದೇಶವು ನಾಲ್ವತ್ತು ವರುಷ ವಿಶ್ರಾಂತಿಯಲ್ಲಿತ್ತು.

ನ್ಯಾಯಾಧಿಪತಿಗಳು 14:6

ಆಗ ಅವನು ತನ್ನ ಕೈಯಲ್ಲಿ ಏನೂ ಇಲ್ಲದಿದ್ದರೂ ಕರ್ತನ ಆತ್ಮವು ಅವನ ಮೇಲೆ ಬಂದದ್ದರಿಂದ ಅದನ್ನು ಒಂದು ಮೇಕೆ ಮರಿಯ ಹಾಗೆ ಸೀಳಿಬಿಟ್ಟನು. ಆದರೆ ಅವನು ತಾನು ಮಾಡಿದ್ದನ್ನು ತನ್ನ ತಂದೆತಾಯಿಗಳಿಗೆ ತಿಳಿಸಲಿಲ್ಲ.

ನ್ಯಾಯಾಧಿಪತಿಗಳು 14:19

ಕರ್ತನ ಆತ್ಮವು ಅವನ ಮೇಲೆ ಬಂದದ್ದ ರಿಂದ ಅವನು ಅಷ್ಕೆಲೋನಿಗೆ ಹೋಗಿ ಆ ಊರಿನಲ್ಲಿ ಮೂವತ್ತು ಜನರನ್ನು ವಧಿಸಿ ಸುಲುಕೊಂಡು ಒಗಟನ್ನು ತಿಳಿಸಿದವರಿಗೆ ದುಸ್ತುವಸ್ತ್ರಗಳನ್ನು ಕೊಟ್ಟನು.ಅವನು ಕೋಪಗೊಂಡು ತನ್ನ ತಂದೆಯ ಮನೆಗೆ ಹೊರಟು ಹೋದನು. ಆದರೆ ಸಂಸೋನನ ಹೆಂಡತಿಯು ಅವನ ಸ್ನೇಹಿತನಾಗಿದ್ದ ಒಬ್ಬನಿಗೆ ಕೊಡಲ್ಪಟ್ಟಳು.

ನ್ಯಾಯಾಧಿಪತಿಗಳು 15:9

ಫಿಲಿಷ್ಟಿಯರು ಹೊರಟು ಹೋಗಿ ಯೆಹೂದದ ಲೆಹೀಯಲ್ಲಿ ವ್ಯಾಪಿಸಿ ಪಾಳೆಯ ಮಾಡಿಕೊಂಡರು.

ನ್ಯಾಯಾಧಿಪತಿಗಳು 16:9

ಹೊಂಚುಗಾರರು ಅವಳೊಂದಿಗೆ ಕೊಠಡಿಯಲ್ಲಿ ದ್ದರು. ಅವಳು ಅವನಿಗೆ--ಸಂಸೋನನೇ, ಪಿಲಿಷ್ಟಿ ಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಆಗ ಅವನು ಬೆಂಕಿಗೆ ತೋರಿಸಲ್ಪಟ್ಟ ಸಣಬಿನ ಹುರಿಹರಿದು ಹೋಗುವ ಹಾಗೆಯೇ ನಾರಿನ ಬರಲುಗಳನ್ನು ಹರಿದುಬಿಟ್ಟನು. ಹೀಗೆ ಅವನ ಶಕ್ತಿ ತಿಳಿಯಲ್ಪಡದೆ ಹೋಯಿತು.

ನ್ಯಾಯಾಧಿಪತಿಗಳು 16:12

ಆಗ ದೆಲೀಲಳು ಹೊಸ ಹಗ್ಗಗಳನ್ನು ತಕ್ಕೊಂಡು ಅವುಗಳಿಂದ ಅವನನ್ನು ಕಟ್ಟಿ ಅವನಿಗೆ--ಸಂಸೋನನೇ, ಫಿಲಿಷ್ಟಿಯರು ನಿನ್ನ ಮೇಲೆ ಬರುತ್ತಾರೆ ಅಂದಳು. ಹೊಂಚುಗಾರರು ಕೊಠಡಿಯಲ್ಲಿದ್ದರು. ಆದರೆ ಅವನು ತನ್ನ ತೋಳುಗಳಲ್ಲಿ ಇರುವವುಗಳನ್ನು ದಾರದ ಹಾಗೆ ಹರಿದುಬಿಟ್ಟನು.

ನ್ಯಾಯಾಧಿಪತಿಗಳು 16:24

ಜನರು ಅವನನ್ನು ನೋಡಿ ದಾಗ ತಮ್ಮ ದೇವರನ್ನು ಹೊಗಳಿದರು; ಯಾಕಂದರೆನಮ್ಮ ದೇಶವನ್ನು ಹಾಳು ಮಾಡಿ ನಮ್ಮಲ್ಲಿ ಅನೇಕರನ್ನು ಕೊಂದ ನಮ್ಮ ಶತ್ರುವನ್ನು ನಮ್ಮ ದೇವರು ನಮ್ಮ ಕೈಯಲ್ಲಿ ಒಪ್ಪಿಸಿಕೊಟ್ಟನೆಂದು ಅವರು ಹೇಳಿಕೊಂಡರು.

1 ಸಮುವೇಲ 4:5

ಕರ್ತನ ಒಡಂಬಡಿ ಕೆಯ ಮಂಜೂಷವು ಪಾಳೆಯಕ್ಕೆ ಬಂದಾಗ ಇಸ್ರಾಯೇ ಲ್ಯರೆಲ್ಲಾ ಮಹಾ ಆರ್ಭಟವಾಗಿ ಭೂಮಿ ಕಂಪಿಸುವ ಹಾಗೆ ಆರ್ಭಟಿಸಿದರು.

1 ಸಮುವೇಲ 10:6

ಆಗ ಕರ್ತನ ಆತ್ಮನು ನಿನ್ನ ಮೇಲೆ ಬರುವನು; ನೀನು ಅವರ ಸಂಗಡ ಪ್ರವಾದಿಸುವಿ; ಬೇರೆ ಮನುಷ್ಯನಾಗಿ ಮಾರ್ಪಡುವಿ.

1 ಸಮುವೇಲ 10:10

ಅವನು ಆ ಗುಡ್ಡಕ್ಕೆ ಬಂದಾಗ ಇಗೋ, ಪ್ರವಾದಿಗಳ ಗುಂಪು ಅವನೆದುರಿಗೆ ಬಂತು; ಆಗ ದೇವರ ಆತ್ಮನು ಅವನ ಮೇಲೆ ಬಂದದರಿಂದ ಅವನು ಪ್ರವಾದಿಸಿದನು.

1 ಸಮುವೇಲ 11:6

ಸೌಲನು ಈ ಮಾತು ಗಳನ್ನು ಕೇಳಿದಾಗ ದೇವರ ಆತ್ಮನು ಅವನ ಮೇಲೆ ಬಂದನು; ಅವನು ಬಹು ಕೋಪೋದ್ರೇಕಗೊಂಡವ ನಾಗಿ

1 ಸಮುವೇಲ 17:35

ಆಗ ನಾನು ಅದರ ಹಿಂದೆ ಹೋಗಿ ಅದನ್ನು ಹೊಡೆದು ಆ ಕುರಿಮರಿಯನ್ನು ಅದರ ಬಾಯಿಂದ ತಪ್ಪಿಸಿದೆನು. ಅದು ನನ್ನ ಮೇಲೆ ಹಿಂತಿರುಗಿ ಬಿದ್ದಾಗ ನಾನು ಅದರ ಗಡ್ಡವನ್ನು ಹಿಡಿದು ಹೊಡೆದು ಕೊಂದುಹಾಕಿದೆನು.

ಯೋಬ 20:5

ಏನಂದರೆ, ದುಷ್ಟರ ಜಯವು ಸ್ವಲ್ಪ ಕಾಲದ್ದೂ ಕಪಟಿಗಳ ಸಂತೋಷವು ಕ್ಷಣ ಮಾತ್ರದ್ದೂ.

ಕೀರ್ತನೆಗಳು 18:34

ಆತನು ನನ್ನ ಕೈಗಳಿಗೆ ಯುದ್ಧವನ್ನು ಕಲಿಸುತ್ತಾನೆ; ಹೀಗೆ ನನ್ನ ತೋಳುಗಳು ಉಕ್ಕಿನ ಬಿಲ್ಲನ್ನು ಮುರಿಯುತ್ತವೆ.

ಕೀರ್ತನೆಗಳು 118:11

ಅವರು ನನ್ನನ್ನು ಸುತ್ತಿಕೊಂಡರು; ಹೌದು, ನನ್ನನ್ನು ಸುತ್ತಿಕೊಂಡರು; ಕರ್ತನ ಹೆಸರಿನಲ್ಲಿ ಅವ ರನ್ನು ಸಂಹರಿಸುವೆನು.

ಮೀಕ 7:8

ನನ್ನ ಶತ್ರುವೇ, ನನ್ನ ಮೇಲೆ ಸಂತೋಷಪಡಬೇಡ; ನಾನು ಬಿದ್ದಿದ್ದರೂ ತಿರುಗಿ ಏಳುವೆನು; ಕತ್ತಲೆಯಲ್ಲಿ ಕೂತುಕೊಂಡರೂ ನನಗೆ ಬೆಳಕು ಕರ್ತನೇ.

ಜೆಕರ್ಯ 4:6

ನಾನು--ನನ್ನ ಒಡೆಯನೇ, ಇಲ್ಲ ಅಂದೆನು. ಆಗ ಅವನು ಉತ್ತರಕೊಟ್ಟು ನನಗೆ ಹೇಳಿದ್ದೇನಂದರೆ--ಜೆರುಬ್ಬಾಬೆಲನಿಗೆ ಕರ್ತನ ವಾಕ್ಯವು ಇದೇ--ಬಲ ದಿಂದಲ್ಲ, ಶಕ್ತಿಯಿಂದಲ್ಲ, ನನ್ನ ಆತ್ಮದಿಂದಲೇ ಎಂದು ಸೈನ್ಯಗಳ ಕರ್ತನು ಹೇಳುತ್ತಾನೆ.

ಫಿಲಿಪ್ಪಿಯವರಿಗೆ 4:3

ನಿಜ ಜೊತೆಗಾರನೇ, ನೀನು ಆ ಸ್ತ್ರೀಯರಿಗೆ ಸಹಾಯಕ ನಾಗಿರಬೇಕೆಂದು ನಿನ್ನನ್ನೂ ಕೇಳಿಕೊಳ್ಳುತ್ತೇನೆ. ಅವರು ಕ್ಲೇಮೆನ್ಸ್‌ ಮುಂತಾದ ನನ್ನ ಜೊತೆಕೆಲಸದವರ ಸಹಿತವಾಗಿ ನನ್ನ ಕೂಡ ಸುವಾರ್ತೆಗೋಸ್ಕರ ಪ್ರಯಾಸ ಪಟ್ಟವರು. ಅವರ ಹೆಸರುಗಳು ಜೀವಗ್ರಂಥದಲ್ಲಿ ಬರೆದವೆ.

Interlinear

Choose Theme