Home Bibles ನ್ಯಾಯಾಧಿಪತಿಗಳು 11:34 · ಕನ್ನಡ ಬೈಬಲ್
ನ್ಯಾಯಾಧಿಪತಿಗಳು 11:34 · ಕನ್ನಡ ಬೈಬಲ್

ಯೆಪ್ತಾಹನು ಮಿಚ್ಪೆಯಲ್ಲಿರುವ ತನ್ನ ಮನೆಗೆ ಬರುವಾಗ ಇಗೋ, ಅವನ ಮಗಳು ದಮ್ಮಡಿಗಳ ಸಂಗಡವೂ ನಾಟ್ಯದ ಸಂಗಡವೂ ಅವನನ್ನು ಎದುರು ಗೊಳ್ಳಲು ಹೊರಟಳು. ಅವನಿಗೆ ಅವಳು ಒಬ್ಬಳೇ ಮಗಳು; ಅವಳ ಹೊರತಾಗಿ ಅವನಿಗೆ ಮಗನಾಗಲಿ ಮಗಳಾಗಲಿ ಇರಲಿಲ್ಲ.

Cross references

ನಿರ್ಗಮಕಾಂಡ 15:20

ಆಗ ಪ್ರವಾದಿನಿಯಾಗಿದ್ದ ಆರೋನನ ಸಹೋ ದರಿ ಮಿರ್ಯಾಮಳು ಕೈಯಲ್ಲಿ ದಮ್ಮಡಿಯನ್ನು ತೆಗೆದು ಕೊಂಡಳು. ಸ್ತ್ರೀಯರೆಲ್ಲರೂ ದಮ್ಮಡಿಗಳನ್ನು ಹಿಡಿದು ಕೊಂಡು ನಾಟ್ಯವಾಡುತ್ತಾ ಆಕೆಯನ್ನು ಹಿಂಬಾಲಿಸಿ ಹೋದರು.

ಯೆಹೋಶುವ 18:26

ಮಿಚ್ಪೆ, ಕೆಫೀರಾ, ಮೋಚಾ,

ನ್ಯಾಯಾಧಿಪತಿಗಳು 5:1

ಆ ದಿನದಲ್ಲಿ ದೆಬೋರಳೂ ಅಬೀನೋ ವಮನ ಮಗನಾದ ಬಾರಾಕನೂ ಹಾಡಿ ದ್ದೇನಂದರೆ--

ನ್ಯಾಯಾಧಿಪತಿಗಳು 10:17

ಅಮ್ಮೋನನ ಮಕ್ಕಳು ಏಕವಾಗಿ ಕೂಡಿಕೊಂಡು ಗಿಲ್ಯಾದಿನಲ್ಲಿ ದಂಡಿಳಿದರು. ಆದರೆ ಇಸ್ರಾಯೇಲ್‌ ಮಕ್ಕಳು ಏಕವಾಗಿ ಕೂಡಿ ಮಿಚ್ಪೆಯಲ್ಲಿ ದಂಡಿಳಿದರು.ಆಗ ಗಿಲ್ಯಾದಿನ ಜನರೂ ಪ್ರಧಾನರೂ ಒಬ್ಬರಿ ಗೊಬ್ಬರು--ಯಾವನು ಅಮ್ಮೋನನ ಮಕ್ಕಳ ಮೇಲೆ ಯುದ್ಧಮಾಡಲಾರಂಭಿಸುವನೋ ಅವನು ಗಿಲ್ಯಾದಿನ ನಿವಾಸಿಗಳಿಗೆಲ್ಲಾ ನಾಯಕನಾಗಿರುವನು ಎಂದು ಮಾತ ನಾಡಿಕೊಂಡರು.

ನ್ಯಾಯಾಧಿಪತಿಗಳು 11:11

ಆಗ ಯೆಫ್ತಾ ಹನು ಗಿಲ್ಯಾದಿನ ಹಿರಿಯರ ಸಂಗಡ ಹೋದನು. ಆಗ ಜನರು ಅವನನ್ನು ತಮ್ಮ ಮೇಲೆ ನಾಯಕನ ನ್ನಾಗಿಯೂ ಅಧಿಪತಿಯನ್ನಾಗಿಯೂ ಇಟ್ಟುಕೊಂಡರು. ಯೆಫ್ತಾಹನು ತನ್ನ ಮಾತುಗಳನ್ನೆಲ್ಲಾ ಮಿಚ್ಪೆಯಲ್ಲಿ ಕರ್ತನ ಮುಂದೆ ಹೇಳಿದನು.

ನ್ಯಾಯಾಧಿಪತಿಗಳು 20:1

ಆಗ ಇಸ್ರಾಯೇಲ್‌ ಮಕ್ಕಳೆಲ್ಲರು ಹೊರಟು ಗಿಲ್ಯಾದು ಸಹಿತವಾಗಿ ದಾನ್‌ ಪಟ್ಟಣವು ಮೊದಲುಗೊಂಡು ಬೇರ್ಷೆಬದ ಮಟ್ಟಿಗೂ ಸಭೆಯು ಒಬ್ಬ ಮನುಷ್ಯನ ಹಾಗೆ ಮಿಚ್ಪೆಯಲ್ಲಿ ಕರ್ತನ ಮುಂದೆ ಕೂಡಿಕೊಂಡಿತು.

ನ್ಯಾಯಾಧಿಪತಿಗಳು 21:21

ಇಗೋ, ಶೀಲೋವಿನ ಕುಮಾರ್ತೆ ಯರು ನಾಟ್ಯಮಾಡುತ್ತಾ ಹೊರಟು ಬರುವರು. ನೀವು ಅವರನ್ನು ನೋಡಿದಾಗ ದ್ರಾಕ್ಷೇ ತೋಟಗಳಿಂದ ಹೊರಟು ಶೀಲೋವಿನ ಕುಮಾರ್ತೆಯರಲ್ಲಿ ನಿಮ್ಮಲ್ಲಿ ಅವನವನು ತನಗೆ ಹೆಂಡತಿಯಾಗಿ ಒಬ್ಬೊಬ್ಬಳನ್ನು ಹಿಡುಕೊಂಡು ಬೆನ್ಯಾವಿಾನನ ದೇಶಕ್ಕೆ ಹೋಗಿರಿ ಎಂದು ಆಜ್ಞಾಪಿಸಿದರು.

1 ಸಮುವೇಲ 18:6

ಆದರೆ ದಾವೀದನು ಫಿಲಿಷ್ಟಿಯನನ್ನು ಸಂಹರಿಸಿ ಜನರ ಸಹಿತವಾಗಿ ಬರುವಾಗ ಇಸ್ರಾಯೇಲ್ಯರ ಎಲ್ಲಾ ಪಟ್ಟಣಗಳಿಂದ ಸ್ತ್ರೀಯರು ಸಂತೋಷದಿಂದ ಹೊರಟು ದಮ್ಮಡಿಗಳಿಂದಲೂ ಸಂಗೀತವಾದ್ಯಗಳಿಂದಲೂ ಹಾಡುತ್ತಾ ನಾಟ್ಯವಾಡುತ್ತಾ ಅರಸನಾದ ಸೌಲನನ್ನು ಎದುರುಗೊಳ್ಳಲು ಬಂದರು.

ಕೀರ್ತನೆಗಳು 68:25

ಹಾಡು ವವರು ಮುಂದಾಗಿಯೂ ಬಾರಿಸುವವರು ಹಿಂದಾ ಗಿಯೂ ಹೋದರು, ಅವರಲ್ಲಿ ದಮ್ಮಡಿ ಬಾರಿಸುವ ಕನ್ಯೆಯರು ಇದ್ದರು.

ಕೀರ್ತನೆಗಳು 148:11

ಭೂರಾಜರೇ, ಎಲ್ಲಾ ಪ್ರಜೆ ಗಳೇ, ಪ್ರಧಾನರೇ, ಭೂಮಿಯ ಎಲ್ಲಾ ನ್ಯಾಯಾಧಿ ಪತಿಗಳೇ,

ಕೀರ್ತನೆಗಳು 150:4

ದಮ್ಮಡಿ ಯಿಂದಲೂ ಕುಣಿಯುತ್ತಾ ಆತನನ್ನು ಸ್ತುತಿಸಿರಿ; ತಂತಿವಾದ್ಯಗಳಿಂದಲೂ ಕೊಳಲುಗಳಿಂದಲೂ ಆತ ನನ್ನು ಸ್ತುತಿಸಿರಿ.

ಯೆರೆಮಿಯ 31:4

ಅವನು ಅದನ್ನು ವಶಪಡಿಸಿಕೊಳ್ಳುವನು; ಯೆಹೂದದ ಅರಸನಾದ ಚಿದ್ಕೀಯನು ಕಸ್ದೀಯರ ಕೈಗೆ ತಪ್ಪಿಸಿಕೊಳ್ಳದೆ ನಿಶ್ಚಯ ವಾಗಿ ಬಾಬೆಲಿನ ಅರಸನ ಕೈಯಲ್ಲಿ ಒಪ್ಪಿಸಲ್ಪಡುವನು, ಸಾಕ್ಷಾತ್ತಾಗಿ ಅವನ ಸಂಗಡ ಮಾತನಾಡುವನು; ಅವನ ಕಣ್ಣುಗಳು ಅವನ ಕಣ್ಣುಗಳನ್ನು ನೋಡುವವು.

ಯೆರೆಮಿಯ 31:13

ಅವರ ಮುಂದೆ ನಾನು ಬಾರೂಕನಿಗೆ ಅಪ್ಪಣೆ ಕೊಟ್ಟದ್ದೇ ನಂದರೆ--

ಜೆಕರ್ಯ 12:10

ದಾವೀದನ ಮನೆತನದವರ ಮೇಲೆಯೂ ಯೆರೂಸಲೇಮಿನ ನಿವಾಸಿಗಳ ಮೇಲೆಯೂ ಕೃಪೆಯ ಆತ್ಮವನ್ನೂ ಬಿನ್ನಹಗಳ ಆತ್ಮವನ್ನೂ ಒಯ್ಯುವೆನು; ಇರಿದವರು ಆತನನ್ನು ದೃಷ್ಟಿಸಿ ನೋಡುವರು; ಒಬ್ಬನೇ ಮಗನ ನಿಮಿತ್ತ ಗೋಳಾಡುವವನ ಹಾಗೆ ಆತನ ನಿಮಿತ್ತ ಗೋಳಾಡುವರು; ಚೊಚ್ಚಲ ಮಗನ ನಿಮಿತ್ತ ವ್ಯಥೆಪಡುವವನ ಹಾಗೆ ಆತನ ನಿಮಿತ್ತ ವ್ಯಥೆಪಡು ವರು.

ಲೂಕ 7:12

ಆತನು ಪಟ್ಟಣ ದ್ವಾರದ ಸವಿಾಪಕ್ಕೆ ಬಂದಾಗ ಇಗೋ, ಸತ್ತುಹೋಗಿದ್ದ ಒಬ್ಬ ಮನುಷ್ಯನನ್ನು ಹೊತ್ತುಕೊಂಡು ಹೋಗುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ವಿಧವೆಯಾಗಿ ದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು.

ಲೂಕ 8:42

ಯಾಕಂದರೆ ಅವನಿ ಗಿದ್ದ ಹೆಚ್ಚು ಕಡಿಮೆ ಹನ್ನೆರಡು ವರುಷದವಳಾದ ಒಬ್ಬಳೇ ಮಗಳು ಸಾಯುವಹಾಗಿದ್ದಳು. ಆದರೆ ಆತನು ಹೋಗುತ್ತಿದ್ದಾಗ ಜನರು ಆತನನ್ನು ನೂಕಾ ಡುತ್ತಿದ್ದರು.

ಲೂಕ 9:38

ಆಗ ಇಗೋ, ಆ ಗುಂಪಿನೊಳಗಿಂದ ಒಬ್ಬ ಮನುಷ್ಯನು ಕೂಗಿ--ಬೋಧಕನೇ, ನನ್ನ ಮಗನ ಮೇಲೆ ದೃಷ್ಟಿಯಿಡು ಎಂದು ನಾನು ನಿನ್ನನ್ನು ಬೇಡಿಕೊಳ್ಳುತ್ತೇನೆ; ಯಾಕಂದರೆ ಅವನು ನನಗೆ ಒಬ್ಬನೇ ಮಗನು.

Interlinear

Choose Theme