ನ್ಯಾಯಾಧಿಪತಿಗಳು 1:24 · ಕನ್ನಡ ಬೈಬಲ್
ಪಾಳತಿಯವರು ಪಟ್ಟಣದೊಳಗಿಂದ ಬರುವ ಒಬ್ಬ ಮನುಷ್ಯನನ್ನು ಕಂಡು ಅವನಿಗೆ--ದಯಮಾಡಿ ಪಟ್ಟಣದಲ್ಲಿ ಪ್ರವೇಶಿಸುವ ಮಾರ್ಗವನ್ನು ನಮಗೆ ತೋರಿಸು; ನಾವು ನಿನಗೆ ಕರುಣೆ ತೋರಿಸುವೆವು ಅಂದರು.
Cross references
ಯೆಹೋಶುವ 2:12
ಈಗ ನಾನು ನಿಮಗೆ ದಯ ತೋರಿಸಿದ್ದರಿಂದ ನೀವು ನನಗೆ ಮತ್ತು ನನ್ನ ತಂದೆಯ ಮನೆಗೆ ದಯತೋರಿಸಬೇಕು. ನನಗೆ ಸತ್ಯವಾದ ಗುರುತನ್ನು ಕೊಡಬೇಕು.
ಯೆಹೋಶುವ 2:14
ಆ ಮನುಷ್ಯರು ಆಕೆಗೆ--ನೀನು ಈ ನಮ್ಮ ಕಾರ್ಯವನ್ನು ಬಹಿರಂಗಮಾಡದೆ ಇದ್ದರೆ ನಮ್ಮ ಪ್ರಾಣವು ನಿಮಗೋಸ್ಕರ ಇರುವದು. ಕರ್ತನು ನಮಗೆ ಈ ದೇಶವನ್ನು ಕೊಟ್ಟಾಗ ಸತ್ಯದಿಂದಲೂ ದಯ ದಿಂದಲೂ ನಡೆದುಕೊಳ್ಳುವೆವು ಅಂದರು.
1 ಸಮುವೇಲ 30:15
ದಾವೀದನು ಅವನಿಗೆ--ನೀನು ನನ್ನನ್ನು ಆ ದಂಡಿಗೆ ಕರಕೊಂಡು ಹೋಗುತ್ತೀಯಾ ಎಂದು ಕೇಳಿದನು. ಅದಕ್ಕವನು--ನೀನು ನನ್ನನ್ನು ಕೊಂದು ಹಾಕುವದಿಲ್ಲ ಇಲ್ಲವೆ ನನ್ನನ್ನು ನನ್ನ ಯಾಜಮಾನನ ಕೈಯಲ್ಲಿ ಒಪ್ಪಿಸಿಕೊಡುವದಿಲ್ಲ ಎಂದು ನನಗೆ ದೇವರ ಹೆಸರಿನಿಂದ ಪ್ರಮಾಣಕೊಟ್ಟರೆ ನಿನ್ನನ್ನು ಆ ದಂಡಿಗೆ ಕರಕೊಂಡು ಹೋಗುತ್ತೇನೆ ಅಂದನು.
ಕೀರ್ತನೆಗಳು 60:9
ಬಲವುಳ್ಳ ಪಟ್ಟಣಕ್ಕೆ ನನ್ನನ್ನು ಕರತರುವವನಾರು? ಎದೋಮಿನೊಳಗೆ ನನ್ನನ್ನು ನಡಿಸುವವನಾರು?