ಆದರೆ ಮೊದಲು ಲೂಜ್ ಎಂದು ಹೆಸರಿದ್ದ ಬೇತೇಲೆಂಬ ಪಟ್ಟಣವನ್ನು ಪಾಳತಿ ನೋಡಲು ಯೋಸೇಫನ ಮನೆಯವರು ಕಳುಹಿಸಿದರು.
Cross references
ಇದಲ್ಲದೆ ಅವನು ಆ ಸ್ಥಳಕ್ಕೆ ಬೇತೇಲ್ ಎಂದು ಹೆಸರಿಟ್ಟನು. ಆದರೆ ಅದಕ್ಕಿಂತ ಮೊದಲು ಆ ಪಟ್ಟಣಕ್ಕೆ ಲೂಜ್ ಎಂದು ಹೆಸರಿತ್ತು.
ಹೀಗೆ ಯಾಕೋಬನು ತನ್ನ ಸಂಗಡ ಇದ್ದ ಎಲ್ಲಾ ಜನ ಸಹಿತವಾಗಿ ಕಾನಾನ್ ದೇಶದಲ್ಲಿರುವ ಲೂಜಿಗೆ ಬಂದನು, ಅದೇ ಬೇತೇಲ್.
ಆಗ ಯಾಕೋಬನು ಯೋಸೇಫ ನಿಗೆ ಸರ್ವಶಕ್ತನಾದ ದೇವರು ಕಾನಾನ್‌ದೇಶದ ಲೂಜ್ ಎಂಬಲ್ಲಿ ನನಗೆ ಕಾಣಿಸಿಕೊಂಡು ನನ್ನನ್ನು ಆಶೀರ್ವದಿಸಿದನು.
ನೂನನ ಮಗನಾದ ಯೆಹೋಶುವನು ಪಾಳತಿ ನೋಡುವವರಾದ ಇಬ್ಬರು ಮನುಷ್ಯರನ್ನು ಶಿಟ್ಟೀಮಿನಿಂದ ಗುಪ್ತ ಮಾರ್ಗವಾಗಿ ಕಳುಹಿಸಿ ಅವರಿಗೆ--ನೀವು ಹೋಗಿ ದೇಶವನ್ನು ಮತ್ತು ಯೆರಿಕೋವನ್ನು ನೋಡಿರಿ ಅಂದನು. ಅವರು ಹೋಗಿ ರಾಹಾಬಳೆಂಬ ಹೆಸರುಳ್ಳ ಒಬ್ಬ ಸೂಳೆಯ ಮನೆಯಲ್ಲಿ ಇಳಿದುಕೊಂಡರು.
ಆಗ ಯೆಹೋಶುವನು ಅವರಿಗೆ--ನೀವು ದೇಶ ವನ್ನು ಪಾಳತಿ ನೋಡಿ ಬನ್ನಿರಿ ಎಂದು ಹೇಳಿ ಯೆರಿಕೋ ವಿನಿಂದ ಮನುಷ್ಯರನ್ನು ಬೇತೇಲಿಗೆ ಪೂರ್ವಕಡೆಯಾದ ಬೇತಾವೆನಿನ ಬಳಿಯಲ್ಲಿರುವ ಆಯಿಗೆ ಕಳುಹಿಸಿದನು. ಆಗ ಅವರು ಹೋಗಿ ಆಯಿಯನ್ನು ಪಾಳತಿನೋಡಿ
ಯೋಸೇಫನ ಮಕ್ಕಳಿಗೆ ಚೀಟು ಬಿದ್ದ ಪ್ರಕಾರ ಕೊಟ್ಟ ಸ್ವಾಸ್ಥ್ಯದ ಭೂಮಿಯು ಯೆರಿಕೋವಿನ ಬಳಿಯಲ್ಲಿರುವ ಯೊರ್ದನಿನಿಂದ ಮೂಡಲಲ್ಲಿರುವ ಯೆರಿಕೋವಿನ ಜಲದ ವರೆಗೂ ಮತ್ತು ಬೇತೇಲಿನ ಬೆಟ್ಟಗಳ ವರೆಗೂ ಇರುವ ಅರಣ್ಯದ ಮಾರ್ಗವಾಗಿ ಹೋಗಿ
ಬೇತೇಲಿನಿಂದ ಲೂಜಿಗೂ ಅಲ್ಲಿಂದ ಅರ್ಕೀಯ ಮೇರೆಗಳಾದ ಅಟಾರೋತನ್ನು ದಾಟಿ
ಅವರು ದೇಶವನ್ನು ಪಾಳತಿ ನೋಡಿ ಶೋಧಿಸುವದಕ್ಕಾಗಿ ತಮ್ಮ ಮೇರೆಗಳಲ್ಲಿರುವ ಚೊರ್ಗದಿಂದಲೂ ಎಷ್ಟಾವೋಲಿನಿಂದಲೂ ತಮ್ಮ ಕುಟುಂಬದಲ್ಲಿ ಪರಾಕ್ರಮಶಾಲಿಗಳಾದ ಐದು ಮಂದಿ ಯನ್ನು ಕರೆದು ಅವರಿಗೆ--ನೀವು ಹೋಗಿ ದೇಶವನ್ನು ಶೋಧಿಸಿರಿ ಎಂದು ಹೇಳಿ ಕಳುಹಿಸಿದರು. ಹಾಗೆಯೇ ಇವರು ಎಫ್ರಾಯಾಮ್ ಬೆಟ್ಟದಲ್ಲಿರುವ ವಿಾಕನ ಮನೆಯ ಬಳಿಗೆ ಬಂದು ಅಲ್ಲಿ ಇಳುಕೊಂಡರು.