Home Bibles ಯೆಹೋಶುವ 5:1 · ಕನ್ನಡ ಬೈಬಲ್
ಯೆಹೋಶುವ 5:1 · ಕನ್ನಡ ಬೈಬಲ್

ಇದಾದ ಮೇಲೆ ಇಸ್ರಾಯೇಲ್‌ ಮಕ್ಕಳು ದಾಟಿಹೋಗುವ ಪರಿಯಂತರ ಕರ್ತನು ಅವರ ಮುಂದೆ ಯೊರ್ದನನ್ನು ಒಣಗಿಹೋಗ ಮಾಡಿ ದ್ದನ್ನು ಆಚೇ ದಡದ ಪಶ್ಚಿಮದಲ್ಲಿ ವಾಸಿಸಿದ್ದ ಅಮೋರಿ ಯರ ಸಕಲ ಅರಸುಗಳೂ ಸಮುದ್ರದ ಆಚೆಯಲ್ಲಿ ವಾಸಿಸಿದ ಕಾನಾನ್ಯರ ಸಕಲ ಅರಸುಗಳೂ ಕೇಳಿದಾಗ ಅವರ ಹೃದಯವು ಕರಗಿಹೋಯಿತು. ಇಸ್ರಾಯೇಲ್‌ ಮಕ್ಕಳ ನಿಮಿತ್ತವಾಗಿ ಅವರಿಗೆ ಪ್ರಾಣಹೋದಂತೆ ಆಯಿತು.

Cross references

ಆದಿಕಾಂಡ 10:15

ಕಾನಾನನಿಂದ ತನ್ನ ಚೊಚ್ಚಲ ಮಗನಾದ ಸೀದೊನನೂ ಹೇತನೂ

ಆದಿಕಾಂಡ 12:6

ಅಬ್ರಾಮನು ಆ ದೇಶದಲ್ಲಿ ಶೆಕೆಮ್‌ ಎಂಬ ಸ್ಥಳದ ಮೋರೆಯೆಂಬ ಮೈದಾನದ ವರೆಗೆ ಹಾದು ಹೋದನು. ಆಗ ಕಾನಾನ್ಯರು ದೇಶದಲ್ಲಿ ಇದ್ದರು.

ಆದಿಕಾಂಡ 15:18

ಅದೇ ದಿನದಲ್ಲಿ ಕರ್ತನು ಅಬ್ರಾಮನ ಸಂಗಡ ಒಡಂಬಡಿಕೆ ಮಾಡಿಕೊಂಡು--ಐಗುಪ್ತದ ನದಿಯಿಂದ ಮಹಾನದಿಯಾದ ಯೂಫ್ರೇಟೀಸ್‌ ನದಿಯ ವರೆಗೆ ವಾಸಿಸುವ

ಆದಿಕಾಂಡ 48:22

ಇದಲ್ಲದೆ ನಾನು ನನ್ನ ಕತ್ತಿ ಬಿಲ್ಲುಗಳಿಂದ ಅಮೋರಿಯರ ವಶದಿಂದ ತಕ್ಕೊಂಡ ಒಂದು ಪಾಲನ್ನು ನಿನ್ನ ಸಹೋದರರಿಗಿಂತ ಹೆಚ್ಚಾಗಿ ನಿನಗೆ ಕೊಟ್ಟಿದ್ದೇನೆ ಅಂದನು.

ನಿರ್ಗಮಕಾಂಡ 15:14

ಜನರು ಇದನ್ನು ಕೇಳಿ ಭಯಪಡುವರು; ದುಃಖವು ಫಿಲಿಷ್ಟಿಯದಲ್ಲಿ ವಾಸಿಸುವವರನ್ನು ಹಿಡಿಯುವದು.

ನಿರ್ಗಮಕಾಂಡ 23:28

ಹಿವ್ವಿಯರೂ ಕಾನಾನ್ಯರೂ ಹಿತ್ತಿಯರೂ ನಿಮ್ಮ ಎದುರಿನಿಂದ ಓಡಿಹೋಗುವಂತೆ ಕಡಜದ ಹುಳಗಳನ್ನು ನಿಮ್ಮ ಮುಂದೆ ಕಳುಹಿಸುವೆನು.

ಅಂಕೆಗಳ ಪುಸ್ತಕ 13:29

ಅಮಾಲೇಕ್ಯರು ದೇಶದ ದಕ್ಷಿಣದಲ್ಲಿ ವಾಸವಾಗಿದ್ದಾರೆ; ಹಿತ್ತಿಯರು ಯೆಬೂಸಿಯರು ಅಮೋ ರಿಯರು ಪರ್ವತಗಳಲ್ಲಿಯೂ ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸ ವಾಗಿದ್ದಾರೆ ಎಂದು ಹೇಳಿದರು.

ಯೆಹೋಶುವ 2:9

ಕರ್ತನು ನಿಮಗೆ ದೇಶವನ್ನು ಕೊಟ್ಟಿದ್ದಾನೆಂದೂ ನಿಮ್ಮ ನಿಮಿತ್ತ ನಮಗೆ ಮಹಾಭೀತಿ ಯಾಗಿದೆ ಎಂದೂ ನಿಮಗೋಸ್ಕರ ದೇಶದ ನಿವಾಸಿ ಗಳೆಲ್ಲರು ಕಂಗೆಟ್ಟು ಹೋಗಿದ್ದಾರೆಂದೂ ನಾನು ಬಲ್ಲೆನು.

ಯೆಹೋಶುವ 2:11

ಇವುಗಳನ್ನು ನಾವು ಕೇಳಿದಾಗಲೇ ನಮ್ಮ ಹೃದಯವು ಕರಗಿಹೋಯಿತು. ಇನ್ನು ನಿಮ್ಮ ನಿಮಿತ್ತ ಯಾವನಲ್ಲಿಯೂ ಧೈರ್ಯವಿಲ್ಲದೆ ಹೋಯಿತು. ಯಾಕಂದರೆ ನಿಮ್ಮ ದೇವರಾದ ಕರ್ತನೇ ಮೇಲಿರುವ ಆಕಾಶದಲ್ಲಿಯೂ ಕೆಳಗಿರುವ ಭೂಮಿಯ ಮೇಲೆಯೂ ದೇವರಾಗಿದ್ದಾನೆ.

ಯೆಹೋಶುವ 3:16

ಮೇಲಿನಿಂದ ಇಳಿದು ಬರುವ ನೀರು ನಿಂತು ಬಹು ದೂರದಲ್ಲಿ ಚಾರೆತಾನಿಗೆ ಹೊಂದಿದ ಆದಾಮ್‌ ಪಟ್ಟಣದ ಹತ್ತಿರ ಬಂದು ರಾಶಿಯಾಗಿ ನಿಂತಿತು. ಕೆಳಗಣ ನೀರು ಉಪ್ಪು ಸಮುದ್ರವೆಂಬ ಸಮುದ್ರಕ್ಕೆ ಹರಿದು ಹೋಯಿತು.ಆಗ ಜನರೆಲ್ಲರು ಯೊರ್ದನನ್ನು ದಾಟುವ ವರೆಗೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ಒಣಗಿದ ಭೂಮಿಯ ಮಧ್ಯದಲ್ಲಿ ಧೃಡವಾಗಿ ನಿಂತಿದ್ದರು.

ಯೆಹೋಶುವ 3:17

ಆಗ ಜನರೆಲ್ಲರು ಯೊರ್ದನನ್ನು ದಾಟುವ ವರೆಗೆ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಯಾಜಕರು ಯೊರ್ದನಿನ ಒಣಗಿದ ಭೂಮಿಯ ಮಧ್ಯದಲ್ಲಿ ಧೃಡವಾಗಿ ನಿಂತಿದ್ದರು.

ಯೆಹೋಶುವ 12:9

ಯೆರಿಕೋವಿನ ಅರಸನು ಒಬ್ಬನು; ಬೇತೇಲ್‌ ಬಳಿಯಲ್ಲಿರುವ ಆಯಿಯ ಅರಸನು ಒಬ್ಬನು;

ಯೆಹೋಶುವ 17:12

ಆದರೆ ಮನಸ್ಸೆಯ ಮಕ್ಕಳು ಆ ಪಟ್ಟಣಗಳ ನಿವಾಸಿಗಳನ್ನು ಹೊರಡಿಸುವದಕ್ಕಾಗದೆ ಹೋಯಿತು. ಕಾನಾನ್ಯರು ಆ ಸೀಮೆಯಲ್ಲೇ ವಾಸವಾಗಿರಲು ಇಷ್ಟ ಪಟ್ಟರು.

ಯೆಹೋಶುವ 17:18

ಅದು ಅಡವಿಯಾಗಿದೆ; ಅದನ್ನು ನೀವು ಕಡಿಯ ಬೇಕು. ಅದರ ಅಂತ್ಯಗಳ ವರೆಗೂ ನಿಮ್ಮದಾಗಿರುವದು. ಕಬ್ಬಿಣದ ರಥಗಳಿದ್ದರೂ ಅವರು ಬಲಿಷ್ಠರಾಗಿದ್ದರೂ ನೀವು ಅವರನ್ನು ಹೊರಡಿಸಿ ಬಿಡುವಿರಿ ಅಂದನು.

ಯೆಹೋಶುವ 24:15

ಕರ್ತನನ್ನು ಸೇವಿಸುವದು ನಿಮಗೆ ಕೆಟ್ಟದ್ದಾಗಿ ಕಂಡರೆ ಈಹೊತ್ತು ನೀವು ಯಾರನ್ನು ಸೇವಿಸುವಿರಿ? ನಿಮ್ಮ ತಂದೆಗಳು ನದಿಯ ಆಚೆ ಸೇವಿ ಸಿದ ದೇವರುಗಳನ್ನೋ ಇಲ್ಲವೆ ನೀವು ವಾಸವಾಗಿರುವ ಅಮೋರಿಯರ ದೇವರುಗಳನ್ನೋ? ನೀವು ಆರಿಸಿ ಕೊಳ್ಳಿರಿ; ಆದರೆ ನಾನೂ ನನ್ನ ಮನೆಯವರೂ ಕರ್ತನನ್ನೇ ಸೇವಿಸುವೆವು ಅಂದನು.

ನ್ಯಾಯಾಧಿಪತಿಗಳು 1:1

ಯೆಹೋಶುವನು ಸತ್ತ ತರುವಾಯ ಆದದ್ದೇನಂದರೆ, ಇಸ್ರಾಯೇಲ್‌ ಮಕ್ಕಳು ಕರ್ತನಿಗೆ--ಕಾನಾನ್ಯರ ಮೇಲೆ ಮೊದಲು ನಮಗಾಗಿ ಯುದ್ಧಕ್ಕೆ ಹೋಗುವವರು ಯಾರು ಎಂದು ಕೇಳಿದರು.

ನ್ಯಾಯಾಧಿಪತಿಗಳು 3:3

ಐದುಮಂದಿ ಪಿಲಿಷ್ಟಿಯರ ಅಧಿಪತಿಗಳೂ ಸಮಸ್ತ ಕಾನಾನ್ಯರೂ ಚೀದೋನ್ಯರೂ ಬಾಳ್‌ಹೆರ್ಮೊನಿನಿಂದ ಹಮಾತಿನ ಪ್ರವೇಶದ ವರೆಗೂ ಲೆಬನೋನಿನ ಬೆಟ್ಟದಲ್ಲಿ ವಾಸವಾ ಗಿರುವ ಹಿವ್ವಿಯರೂ.

ನ್ಯಾಯಾಧಿಪತಿಗಳು 4:2

ಆದದರಿಂದ ಕರ್ತನು ಅವರನ್ನು ಹಾಚೋರಿನಲ್ಲಿ ಆಳುವ ಕಾನಾನಿನ ಅರಸನಾದ ಯಾಬೀನನ ಕೈಗೆ ಮಾರಿಬಿಟ್ಟನು. ಅವನ ಸೈನ್ಯಕ್ಕೆ ಜನಾಂಗಗಳ ಪಟ್ಟಣವಾದ ಹರೋಷೆತಿನಲ್ಲಿ ವಾಸವಾಗಿರುವ ಸೀಸೆರನು ಅಧಿಪತಿಯಾಗಿದ್ದನು.

ನ್ಯಾಯಾಧಿಪತಿಗಳು 11:23

ಈಗ ಇಸ್ರಾ ಯೇಲಿನ ದೇವರಾದ ಕರ್ತನು ಅಮೋರಿಯರನ್ನು ತನ್ನ ಜನವಾದ ಇಸ್ರಾಯೇಲಿನ ಮುಂದೆ ಹೊರಡಿಸಿ ರುವಾಗ ನೀನು ಆ ದೇಶವನ್ನು ಸ್ವಾಧೀನಮಾಡಿಕೊಳ್ಳು ವಿಯೋ?

1 ಸಮುವೇಲ 25:37

ಉದಯದಲ್ಲಿ ನಾಬಾಲನಿಗೆ ದ್ರಾಕ್ಷಾರಸದ ಅಮಲು ಇಳಿದಾಗ ಅವನ ಹೆಂಡತಿಯು ಈ ಮಾತುಗಳನ್ನು ಅವನಿಗೆ ತಿಳಿಸಲು ಏನಾಯಿತಂದರೆ, ಅವನ ಹೃದಯವು ಅವನಲ್ಲಿ ಸತ್ತು ಅವನು ಕಲ್ಲಿನ ಹಾಗಾದನು.

2 ಸಮುವೇಲ 21:2

ಆಗ ಅರಸನು ಗಿಬ್ಯೋನ್ಯರನ್ನು ಕಳುಹಿಸಿದನು. (ಆದರೆ ಗಿಬ್ಯೋನ್ಯರು ಇಸ್ರಾಯೇಲ್‌ ಮಕ್ಕಳಾಗಿರದೆ ಅಮೋರಿಯರಲ್ಲಿ ಉಳಿದವರಾಗಿದ್ದರು. ಅವರಿಗೆ ಇಸ್ರಾಯೇಲ್‌ ಮಕ್ಕಳು ಆಣೆ ಇಟ್ಟಿದ್ದರು. ಸೌಲನು ಇಸ್ರಾಯೇಲ್‌ ಮಕ್ಕಳಿಗೋಸ್ಕರವಾಗಿಯೂ ಯೆಹೂದ ಕ್ಕೋಸ್ಕರವಾಗಿಯೂ ತೋರಿಸಿದ ಆಸಕ್ತಿಯಿಂದ ಅವ ರನ್ನು ಹೊಡೆಯಲು ಹುಡುಕಿದ್ದನು)

1 ಅರಸುಗಳು 10:5

ಅವನ ಮೇಜಿನ ಭೋಜನವನ್ನೂ ದಾಸರ ಕೂತಿರುವಿಕೆಯ ರೀತಿಯನ್ನೂ ಸೇವಕರು ನಿಂತಿರುವದನ್ನೂ ಅವರ ವಸ್ತ್ರಗಳನ್ನೂ ಅವನ ಪಾನ ದಾಯಕರನ್ನೂ ಅವನು ಕರ್ತನ ಮಂದಿರಕ್ಕೆ ಹೋಗುವ ಮಾರ್ಗವನ್ನೂ ನೋಡಿದಾಗ ಸ್ತಬ್ಧಳಾದಳು; ಅವಳು ಅರಸನಿಗೆ--

ಎಜ್ರಾ 9:1

ಇವುಗಳಾದ ತರುವಾಯ ಪ್ರಧಾನರು ನನ್ನ ಬಳಿಗೆ ಬಂದು--ಇಸ್ರಾಯೇಲ್‌ ಜನರೂ ಯಾಜಕರೂ ಲೇವಿಯರೂ ದೇಶಗಳ ಜನ ಗಳೊಳಗಿಂದ ತಮ್ಮನ್ನು ಪ್ರತ್ಯೇಕಿಸದೆ ಕಾನಾನ್ಯರು, ಹಿತ್ತಿಯರು, ಪೆರಿಜ್ಜೀಯರು, ಯೆಬೂಸ್ಯರು, ಅಮ್ಮೋ ನ್ಯರು, ಮೋವಾಬ್ಯರು, ಐಗುಪ್ತ್ಯರು, ಅಮೋರಿಯರು ಇವರ ಅಸಹ್ಯಗಳ ಪ್ರಕಾರ ಮಾಡುತ್ತಾ ಇದ್ದಾರೆ.

ಕೀರ್ತನೆಗಳು 48:4

ಇಗೋ, ಅರಸರುಗಳು ಕೂಡಿಕೊಂಡು ಒಟ್ಟಾಗಿ ಹಾದುಹೋದರು;

ಕೀರ್ತನೆಗಳು 135:11

ಅಮೋರಿ ಯರ ಅರಸನಾದ ಸೀಹೋನನನ್ನೂ ಬಾಷಾನಿನ ಅರಸನಾದ ಓಗನನ್ನೂ ಕಾನಾನಿನ ಎಲ್ಲಾ ರಾಜ್ಯ ಗಳನ್ನೂ ಹೊಡೆದನು.

ಯೆಶಾಯ 13:6

ನೀವು ಗೋಳಾ ಡಿರಿ, ಕರ್ತನ ದಿನವು ಸವಿಾಪವಾಯಿತು; ಅದು ಸರ್ವಶಕ್ತನಿಂದ ನಾಶನದಂತೆ ಬರುವದು.

ಯೆಹೆಜ್ಕೇಲ 16:3

ದೇವರಾದ ಕರ್ತನು ಯೆರೂಸಲೇಮಿನವರಿಗೆ ಹೀಗೆ ಹೇಳುತ್ತಾನೆ--ನಿನ್ನ ಹುಟ್ಟುವಿಕೆಯೂ ನಿನ್ನ ಹುಟ್ಟಿದ ಸ್ಥಳವೂ ಕಾನಾನ್‌ ದೇಶದಿಂದಾದದ್ದೇ; ನಿನ್ನ ತಂದೆ ಅಮೋರಿಯನು, ನಿನ್ನ ತಾಯಿ ಹಿತ್ತಿಯಳು

ಯೆಹೆಜ್ಕೇಲ 21:7

ನೀನು ಯಾಕೆ ನಿಟ್ಟುಸಿರಿಡುತ್ತೀ ಎಂದು ಅವರು ನಿನಗೆ ಕೇಳಿದಾಗ ನೀನು ಹೇಳಬೇಕಾದದ್ದೇನಂದರೆ -- ಆ ಸುದ್ದಿಯ ನಿಮಿತ್ತವೇ ಅದು ಬರುವದು; ಯಾಕಂದರೆ ಆಗ ಹೃದಯಗಳೆಲ್ಲಾ ಕರಗುವವು; ಕೈಗಳೆಲ್ಲಾ ನಿತ್ರಾಣ ವಾಗುವವು, ಪ್ರತಿಯೊಂದು ಆತ್ಮವು ಕುಂದಿ ಹೋಗು ವದು, ಮತ್ತು ಎಲ್ಲಾ ಮೊಣಕಾಲುಗಳು ನೀರಿನ ಹಾಗೆ ನಿತ್ರಾಣಗೊಳ್ಳುವವು; ಇಗೋ, ಅದು ಬರುತ್ತದೆ, ತರಲ್ಪಡುತ್ತದೆ ಎಂದು ದೇವರಾದ ಕರ್ತನು ಹೇಳುತ್ತಾನೆ.

ದಾನಿಯೇಲ 5:6

ಆಗ ಅರಸನ ಮುಖವು ಕಳೆಗುಂದಿತು, ಅವನ ಆಲೋಚನೆಗಳು ಅವನನ್ನು ಕಳವಳಪಡಿಸಿದವು. ಅವನ ನಡುವಿನ ಕೀಲುಗಳು ಸಡಿಲವಾದವು. ಅವನ ಮೊಣಕಾಲುಗಳು ಒಂದಕ್ಕೊಂದು ಬಡಿದುಕೊಂಡವು.

ಆಮೋಸ 2:9

ಆದಾಗ್ಯೂ ನಾನು ಅಮೋರಿಯನನ್ನು ಅವರ ಮುಂದೆ ನಾಶಮಾಡಿದೆನು; ಅವನ ಎತ್ತರವು ದೇವದಾರುಗಳ ಎತ್ತರದಷ್ಟಿತ್ತು. ಅವನು ಓಕ್‌ ಮರದ ಹಾಗೆ ಬಲವಾಗಿದ್ದನು. ಆದರೂ ನಾನು ಅವನ ಮೇಲೆ ಫಲವನ್ನೂ ಕೆಳಗಿನ ಬೇರುಗಳನ್ನೂ ನಾಶ ಮಾಡಿದೆನು.

ಸೆಫನ್ಯ 2:4

ಗಾಜವು ಕೈಬಿಡಲ್ಪಡುವದು, ಅಷ್ಕೆಲೋನ್‌ ಹಾಳಾ ಗುವದು, ಅಷ್ಡೋದನ್ನು ಮಧ್ಯಾಹ್ನದಲ್ಲಿ ಹೊರಡಿಸು ವರು, ಎಕ್ರೋನ್‌ ಕೀಳಲ್ಪಡುವದು.

ಪ್ರಕಟನೆ 18:10

ಅವರು ದೂರದಲ್ಲಿ ನಿಂತು ಅವಳಿಗುಂಟಾದ ಯಾತ ನೆಯ ಭಯದಿಂದ--ಅಯ್ಯೋ, ಅಯ್ಯೋ, ಆ ಮಹಾಪಟ್ಟಣವಾದ ಬಾಬೆಲೇ, ಬಲಿಷ್ಠವಾದ ನಗ ರಿಯೇ, ಒಂದೇ ಗಳಿಗೆಯಲ್ಲಿ ನಿನಗೆ ತೀರ್ಪಾಯಿತಲ್ಲಾ ಎಂದು ಹೇಳುವರು.

Interlinear

Choose Theme