Home Bibles ಯೆಹೋಶುವ 23:4 · ಕನ್ನಡ ಬೈಬಲ್
ಯೆಹೋಶುವ 23:4 · ಕನ್ನಡ ಬೈಬಲ್

ಇಗೋ, ನಾನು ಯೊರ್ದನ್‌ ಮೊದಲುಗೊಂಡು ಪಶ್ಚಿಮಕ್ಕಿರುವ ದೊಡ್ಡ ಸಮುದ್ರದ ವರೆಗೂ ಜನಾಂಗಗಳನ್ನು ಕಡಿದು ಉಳಿದ ಸಕಲ ಜನಾಂಗಗಳ ದೇಶಗಳನ್ನು ನಿಮ್ಮ ಗೋತ್ರಗಳಿಗೆ ಚೀಟು ಹಾಕಿ ನಿಮಗೆ ಹಂಚಿಕೊಟ್ಟೆನು.

Cross references

ಯೆಹೋಶುವ 13:2

ಅದು ಯಾವದೆಂದರೆ--ಐಗು ಪ್ತಕ್ಕೆ ಎದುರಾದ ಶೀಹೋರಿನಿಂದ ಕಾನಾನ್ಯರಿಗೆ ಎಣಿಸಲ್ಪಟ್ಟದ್ದಾದ ಉತ್ತರಕ್ಕೆ ಎಕ್ರೋನಿನ ಮೇರೆಯ ವರೆಗೂ ಇರುವ ಫಿಲಿಷ್ಟಿಯರ ಮೇರೆಗಳೆಲ್ಲಾ ಗೆಷೂ ರ್ಯರ ದೇಶವೆಲ್ಲಾ,

ಯೆಹೋಶುವ 13:6

ಲೆಬನೋನಿನಿಂದ ಮಿಸ್ರೆಫೋತ್ಮಯಿಮಿನ ವರೆಗೂ ಬೆಟ್ಟದ ದೇಶದ ಎಲ್ಲಾ ನಿವಾಸಿಗಳನ್ನೂ ಎಲ್ಲಾ ಚೀದೋನ್ಯರನ್ನೂ ನಾನು ಇಸ್ರಾಯೇಲ್‌ ಮಕ್ಕಳ ಎದುರಿನಿಂದ ಹೊರಡಿಸಿ ಬಿಡುವೆನು. ಆದರೆ ನಾನು ನಿನಗೆ ಹೇಳಿದ ಹಾಗೆಯೇ ನೀನು ಚೀಟುಗಳನ್ನು ಹಾಕಿ ಇಸ್ರಾಯೇಲಿಗೆ ಬಾಧ್ಯತೆಯಾಗಿ ಪಾಲಿಡಬೇಕು.

ಯೆಹೋಶುವ 18:10

ಆಗ ಯೆಹೋಶುವನು ಶೀಲೋವಿನಲ್ಲಿ ಕರ್ತನ ಮುಂದೆ ಚೀಟುಗಳನ್ನು ಹಾಕಿ ಇಸ್ರಾಯೇಲ್‌ ಮಕ್ಕಳಿಗೆ ದೇಶವನ್ನು ಅವರ ಪಾಲುಗಳ ಪ್ರಕಾರ ಹಂಚಿಕೊಟ್ಟನು.

ಸೆಫನ್ಯ 3:6

ನಾನು ಜನಾಂಗಗಳನ್ನು ಕಡಿದು ಬಿಟ್ಟಿದ್ದೇನೆ; ಅವುಗಳ ಗೋಪುರಗಳು ಹಾಳಾಗಿವೆ; ಅವರ ಬೀದಿಗಳನ್ನು ಯಾರೂ ಹಾದು ಹೋಗದ ಹಾಗೆ ಹಾಳು ಮಾಡಿದ್ದೇನೆ; ಅವುಗಳ ಪಟ್ಟಣಗಳು ನಾಶವಾದವು, ಹೀಗೆ ಅಲ್ಲಿ ಯಾವನೂ ಇರುವದಿಲ್ಲ, ಯಾವ ಮನುಷ್ಯನು ಅಲ್ಲಿ ವಾಸಿಸುವದೂ ಇಲ್ಲ.

Interlinear

Choose Theme