ಅದು ಯಾವದೆಂದರೆ--ಐಗು ಪ್ತಕ್ಕೆ ಎದುರಾದ ಶೀಹೋರಿನಿಂದ ಕಾನಾನ್ಯರಿಗೆ ಎಣಿಸಲ್ಪಟ್ಟದ್ದಾದ ಉತ್ತರಕ್ಕೆ ಎಕ್ರೋನಿನ ಮೇರೆಯ ವರೆಗೂ ಇರುವ ಫಿಲಿಷ್ಟಿಯರ ಮೇರೆಗಳೆಲ್ಲಾ ಗೆಷೂ ರ್ಯರ ದೇಶವೆಲ್ಲಾ,
Cross references
ಪತ್ರುಸ್ಯರೂ ಕಸ್ಲುಹ್ಯರೂ ಕಫ್ತೋರ್ಯರೂ ಹುಟ್ಟಿದರು. ಇವರಿಂದ ಫಿಲಿಷ್ಟಿಯರು ಹೊರಬಂದರು.
ಅಬ್ರಹಾಮನ ದಿನಗಳಲ್ಲಿ ಬಂದ ಮೊದಲನೆಯ ಬರವಲ್ಲದೆ ದೇಶದಲ್ಲಿ ಮತ್ತೊಂದು ಬರ ಬಂದಿತು. ಆಗ ಇಸಾಕನು ಗೆರಾರಿನಲ್ಲಿದ್ದ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಹೋದನು.
ಭೂಮಿಯು ಬರಿದಾಗದಂತೆಯೂ ಅಡವಿಯ ಮೃಗ ಗಳು ನಿಮ್ಮ ವಿರೋಧವಾಗಿ ಹೆಚ್ಚಾಗದ ಹಾಗೆಯೂ ಅವುಗಳನ್ನು ಒಂದೇ ವರುಷದಲ್ಲಿ ನಿಮ್ಮ ಎದುರಿನಿಂದ ಓಡಿಸದೆ
ಕರ್ತನು ಆ ಜನಾಂಗಗಳನ್ನೆಲ್ಲಾ ನಿಮ್ಮ ಮುಂದೆ ಹೊರಡಿಸುವನು; ನೀವು ನಿಮಗಿಂತ ಬಲವುಳ್ಳ ದೊಡ್ಡ ಜನಾಂಗಗಳನ್ನು ಸ್ವಾಧೀನ ಮಾಡಿಕೊಳ್ಳುವಿರಿ.
ಹೆರ್ಮೋನ್ ಬೆಟ್ಟವನ್ನೂ ಸಲ್ಕಾವನ್ನೂ ಗೆಷೂರ್ಯರ ಮಾಕತೀಯರ ಮೇರೆಯ ವರೆಗೂ ಹೆಷ್ಬೋನಿನ ಅರಸನಾದ ಸೀಹೋನನ ಮೇರೆಯಾಗಿದ್ದ ಗಿಲ್ಯಾದಿನ ಅರ್ಧದ ವರೆಗೂ ಇರುವ ಬಾಷಾನೆಲ್ಲಾ ಆಳಿಕೊಂಡಿದ್ದ ರಾಕ್ಷಸರಲ್ಲಿ ಮಿಕ್ಕ ಬಾಷಾನಿನ ಅರಸನಾದ ಓಗನೂ ಇವರೇ.
ಅಮ್ಮೋನಿನ ಮಕ್ಕಳ ಮೇರೆಯ ವರೆಗೂ ಇದ್ದ ಸಕಲ ಪಟ್ಟಣಗಳೂ ಗಿಲ್ಯಾದೂ ಗೆಷೂರ್ಯರ ಮಾಕತೀಯರ ಮೇರೆಯೂ ಹೆರ್ಮೋನ್ ಪರ್ವತವೆಲ್ಲವೂ
ಆದಾಗ್ಯೂ ಇಸ್ರಾಯೇಲ್ ಮಕ್ಕಳು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿ ಬಿಡಲಿಲ್ಲ; ಯಾಕಂದರೆ ಗೆಷೂರ್ಯರೂ ಮಾಕತೀಯರೂ ಈ ದಿನದ ವರೆಗೆ ಇಸ್ರಾಯೇಲಿನ ಮಧ್ಯದಲ್ಲಿ ವಾಸವಾಗಿದ್ದಾರೆ.
ಕಾನಾನ್‌ದೇಶದ ಸಕಲ ಯುದ್ಧಗಳನ್ನು ಅರಿಯದೆ ಇದ್ದ ಇಸ್ರಾಯೇಲ್ಯರನ್ನು ಪರೀಕ್ಷಿ ಸುವದಕ್ಕೂ
ದಾವೀ ದನೂ ಅವನ ಜನರೂ ಶೂರಿಗೆ ಹೋಗುವ ಮೇರೆ ಯಿಂದ ಐಗುಪ್ತದ ವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.
ಕರ್ಮೆಲ್ಯನಾದ ನಾಬಾಲನ ಹೆಂಡತಿಯಾಗಿದ್ದ ಅಬೀಗೈಲಳಿಂದ ಹುಟ್ಟಿದ ಅವನ ಎರಡನೇ ಮಗನಾದ ಕಿಲಾಬನೂ ಗೆಷೂರಿನ ಅರಸನಾಗಿರುವ ತಲ್ಮೈಯನ ಮಗಳಾದ ಮಾಕಳಿಂದ ಹುಟ್ಟಿದ ಅವನ ಮೂರನೇ ಮಗನಾದ ಅಬ್ಷಾಲೋಮನೂ
ಆದರೆ ಅಬ್ಷಾ ಲೋಮನು ಓಡಿಹೋಗಿ ಗೆಷೂರಿನ ಅರಸನಾಗಿರುವ ಅವ್ಮೆಾಹೂದನ ಮಗನಾದ ತಲ್ಮೈಯನ ಬಳಿಗೆ ಹೋದನು. ದಾವೀದನು ದಿನಂಪ್ರತಿ ತನ್ನ ಮಗನಿಗಾಗಿ ದುಃಖಪಡುತ್ತಿದ್ದನು.
ಕರ್ತನು ನನ್ನನ್ನು ಯೆರೂಸಲೇಮಿಗೆ ತಿರಿಗಿ ನಿಜವಾಗಿಯೂ ಬರಮಾಡಿದರೆ ನಾನು ಕರ್ತನನ್ನು ಸೇವಿಸುವೆನೆಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಪ್ರಮಾಣಮಾಡಿಕೊಂಡಿದ್ದೆನು ಅಂದನು.
ಹೌದು, ಓ ತೂರೇ, ಚೀದೋನೇ, ಪಾಲೆಸ್ತಿನದ ಎಲ್ಲಾ ಪ್ರಾಂತ್ಯಗಳೇ, ನನ್ನ ಕೂಡ ನಿಮಗೇನು? ನನಗೆ ಮುಯ್ಯಿಗೆ ಮುಯ್ಯಿ ಸಲ್ಲಿಸುವಿರೋ? ನೀವು ನನಗೆ ಸಲ್ಲಿಸಿದರೆ ಜಾಗ್ರತೆಯಾಗಿಯೂ ತ್ವರೆಯಾಗಿಯೂ ನಿಮ್ಮ ತಲೆಯ ಮೇಲೆ ಮುಯ್ಯಿಗೆ ಮುಯ್ಯಿ ತರಿಸುವೆನು.
ಸಮುದ್ರತೀರದ ನಿವಾಸಿಗಳಾದ ಕೆರೇತ್ಯರ ಜನಾಂಗಕ್ಕೆ ಅಯ್ಯೋ! ಕರ್ತನ ವಾಕ್ಯವು ನಿಮಗೆ ವಿರೋಧವಾಗಿದೆ; ಓ ಕಾನಾನೇ, ಫಿಲಿಷ್ಟಿಯರ ದೇಶವೇ, ನಿವಾಸಿಯೇ ಇಲ್ಲದ ಹಾಗೆ ನಿನ್ನನ್ನು ನಾಶಮಾಡುವೆನು.