Home Bibles 1 ಸಮುವೇಲ 27:8 · ಕನ್ನಡ ಬೈಬಲ್
1 ಸಮುವೇಲ 27:8 · ಕನ್ನಡ ಬೈಬಲ್

ದಾವೀ ದನೂ ಅವನ ಜನರೂ ಶೂರಿಗೆ ಹೋಗುವ ಮೇರೆ ಯಿಂದ ಐಗುಪ್ತದ ವರೆಗೂ ಇರುವ ಸೀಮೆಯಲ್ಲಿ ಪೂರ್ವದಿಂದ ವಾಸಿಸಿರುವವರಾದ ಗೆಷೂರ್ಯರ ಮೇಲೆಯೂ ಗಿಜ್ರೀಯರ ಮೇಲೆಯೂ ಅಮಾಲೇಕ್ಯರ ಮೇಲೆಯೂ ದಂಡೆತ್ತಿ ಹೋದರು.

Cross references

ನಿರ್ಗಮಕಾಂಡ 15:22

ಹೀಗೆ ಮೋಶೆಯು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದಿಂದ ಬರಮಾಡಿದನು; ಅವರು ಶೂರಿನ ಅರಣ್ಯದೊಳಗೆ ಹೋದರು; ಅವರು ಅರಣ್ಯದಲ್ಲಿ ಮೂರು ದಿನ ಪ್ರಯಾಣ ಮಾಡಿದಾಗ್ಯೂ ನೀರನ್ನು ಕಂಡುಕೊಳ್ಳಲಿಲ್ಲ.

ನಿರ್ಗಮಕಾಂಡ 17:8

ತರುವಾಯ ಅಮಾಲೇಕ್ಯರು ಬಂದು ರೆಫೀದೀಮಿ ನಲ್ಲಿ ಇಸ್ರಾಯೇಲ್ಯರ ಸಂಗಡ ಯುದ್ಧಮಾಡಿದರು.

ನಿರ್ಗಮಕಾಂಡ 17:14

ಆಗ ಕರ್ತನು ಮೋಶೆಗೆ--ಇದನ್ನು ಜ್ಞಾಪಕಾರ್ಥ ವಾಗಿ ಪುಸ್ತಕದಲ್ಲಿ ಬರೆ; ನಾನು ಅಮಾಲೇಕ್ಯರ ನೆನಪು ಆಕಾಶದ ಕೆಳಗೆ ಇರದಂತೆ ಸಂಪೂರ್ಣವಾಗಿ ಅಳಿಸಿ ಬಿಡುವೆನು. ಇದನ್ನು ತಿರಿಗಿ ಯೆಹೋಶುವನಿಗೆ ಹೇಳು ಅಂದನು.

ಅಂಕೆಗಳ ಪುಸ್ತಕ 13:29

ಅಮಾಲೇಕ್ಯರು ದೇಶದ ದಕ್ಷಿಣದಲ್ಲಿ ವಾಸವಾಗಿದ್ದಾರೆ; ಹಿತ್ತಿಯರು ಯೆಬೂಸಿಯರು ಅಮೋ ರಿಯರು ಪರ್ವತಗಳಲ್ಲಿಯೂ ಕಾನಾನ್ಯರು ಸಮುದ್ರದ ಬಳಿಯಲ್ಲಿಯೂ ಯೊರ್ದನಿನ ತೀರದಲ್ಲಿಯೂ ವಾಸ ವಾಗಿದ್ದಾರೆ ಎಂದು ಹೇಳಿದರು.

ಅಂಕೆಗಳ ಪುಸ್ತಕ 14:45

ಆಗ ಆ ಬೆಟ್ಟದಲ್ಲಿ ವಾಸವಾಗಿದ್ದ ಅಮಾಲೇಕ್ಯರೂ ಕಾನಾ ನ್ಯರೂ ಇಳಿದು ಅವರನ್ನು ಹೊಡೆದು ಹೊರ್ಮಾದ ವರೆಗೆ ಅಟ್ಟಿಬಿಟ್ಟರು.

ಯೆಹೋಶುವ 13:2

ಅದು ಯಾವದೆಂದರೆ--ಐಗು ಪ್ತಕ್ಕೆ ಎದುರಾದ ಶೀಹೋರಿನಿಂದ ಕಾನಾನ್ಯರಿಗೆ ಎಣಿಸಲ್ಪಟ್ಟದ್ದಾದ ಉತ್ತರಕ್ಕೆ ಎಕ್ರೋನಿನ ಮೇರೆಯ ವರೆಗೂ ಇರುವ ಫಿಲಿಷ್ಟಿಯರ ಮೇರೆಗಳೆಲ್ಲಾ ಗೆಷೂ ರ್ಯರ ದೇಶವೆಲ್ಲಾ,

ಯೆಹೋಶುವ 13:13

ಆದಾಗ್ಯೂ ಇಸ್ರಾಯೇಲ್‌ ಮಕ್ಕಳು ಗೆಷೂರ್ಯರನ್ನೂ ಮಾಕತೀಯರನ್ನೂ ಹೊರಡಿಸಿ ಬಿಡಲಿಲ್ಲ; ಯಾಕಂದರೆ ಗೆಷೂರ್ಯರೂ ಮಾಕತೀಯರೂ ಈ ದಿನದ ವರೆಗೆ ಇಸ್ರಾಯೇಲಿನ ಮಧ್ಯದಲ್ಲಿ ವಾಸವಾಗಿದ್ದಾರೆ.

ಯೆಹೋಶುವ 16:10

ಗೆಜೆರಿನಲ್ಲಿ ವಾಸ ವಾಗಿದ್ದ ಕಾನಾನ್ಯರನ್ನು ಅವರು ಹೊರಡಿಸಿ ಬಿಡದೆ ಹೋದದ್ದರಿಂದ ಕಾನಾನ್ಯರು ಈ ವರೆಗೂ ಅವರಲ್ಲಿ ವಾಸವಾಗಿದ್ದು ಕಪ್ಪಕೊಡುವ ಸೇವಕರಾಗಿದ್ದಾರೆ.

ನ್ಯಾಯಾಧಿಪತಿಗಳು 1:29

ಇದಲ್ಲದೆ ಎಫ್ರಾಯಾಮ್‌ ಗೆಜೆರಿನಲ್ಲಿ ವಾಸವಾಗಿದ್ದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಕಾನಾ ನ್ಯರು ಗೆಜೆರಿನಲ್ಲಿ ಅವರ ಸಂಗಡ ವಾಸಿಸಿದ್ದರು.

1 ಸಮುವೇಲ 15:7

ಆಗ ಸೌಲನು ಹವೀಲಾದಿಂದ ಐಗುಪ್ತಕ್ಕೆ ಎದುರಾಗಿರುವ ಶೂರಿಗೆ ಹೋಗುವ ಮೇರೆಯ ವರೆಗೂ ಇದ್ದ ಅಮಾಲೇಕ್ಯರನ್ನು ಹೊಡೆದು ಅಮಾಲೇಕ್ಯರ ಅರಸನಾದ ಅಗಾಗನನ್ನು ಜೀವಂತವಾಗಿ ಹಿಡಿದನು.

1 ಸಮುವೇಲ 30:1

ದಾವೀದನೂ ಅವನ ಜನರೂ ಮೂರನೇದಿವಸದಲ್ಲಿ ಚಿಕ್ಲಗಿಗೆ ಬಂದು ಸೇರುವಷ್ಟರಲ್ಲಿ ಏನಾಯಿತಂದರೆ, ಅಮಾಲೇಕ್ಯರು ದಕ್ಷಿಣ ಸೀಮೆಯ ಮೇಲೆಯೂ ಚಿಕ್ಲಗಿನ ಮೇಲೆಯೂ ಬಂದು ಬಿದ್ದು ಚಿಕ್ಲಗನ್ನು ಹೊಡೆದು ಅದನ್ನು ಬೆಂಕಿಯಿಂದ ಸುಟ್ಟುಬಿಟ್ಟು

2 ಸಮುವೇಲ 13:37

ಆದರೆ ಅಬ್ಷಾ ಲೋಮನು ಓಡಿಹೋಗಿ ಗೆಷೂರಿನ ಅರಸನಾಗಿರುವ ಅವ್ಮೆಾಹೂದನ ಮಗನಾದ ತಲ್ಮೈಯನ ಬಳಿಗೆ ಹೋದನು. ದಾವೀದನು ದಿನಂಪ್ರತಿ ತನ್ನ ಮಗನಿಗಾಗಿ ದುಃಖಪಡುತ್ತಿದ್ದನು.

2 ಸಮುವೇಲ 14:23

ಹಾಗೆಯೇ ಯೋವಾಬನು ಎದ್ದು ಗೆಷೂರಿಗೆ ಹೋಗಿ ಅಬ್ಷಾಲೋಮನನ್ನು ಯೆರೂಸಲೇಮಿಗೆ ಕರಕೊಂಡು ಬಂದನು.

2 ಸಮುವೇಲ 14:32

ಅಬ್ಷಾಲೋಮನು ಯೋವಾಬನಿಗೆ--ಇಗೋ, ನಾನು ಗೆಷೂರಿನಿಂದ ಯಾಕೆ ಬಂದೆನೆಂದು ಅರಸನಿಗೆ ಹೇಳುವದಕ್ಕೆ ನಿನ್ನನ್ನು ಕಳುಹಿಸುವ ಹಾಗೆ ಇಲ್ಲಿಗೆ ಬಾ ಎಂದು ನಿನ್ನನ್ನು ಕರೇಕಳುಹಿಸಿದೆನು. ನಾನು ಇನ್ನೂ ಅಲ್ಲಿಯೇ ಇದ್ದಿದ್ದರೆ ನನಗೆ ಉತ್ತಮವಾಗಿತ್ತು. ಈಗ ನಾನು ಅರಸನ ಮುಖವನ್ನು ನೋಡಬೇಕು; ನನ್ನಲ್ಲಿ ಅಕ್ರಮ ಇದ್ದರೆ ಅವನು ನನ್ನನ್ನು ಕೊಂದುಹಾಕಲಿ ಅಂದನು.ಹಾಗೆಯೇ ಯೋವಾಬನು ಅರಸನ ಬಳಿಗೆ ಹೋಗಿ ತಿಳಿಸಿದ್ದರಿಂದ ಅರಸನು ಅಬ್ಷಾ ಲೋಮನನ್ನು ಕರೆಸಿದನು. ಆಗ ಅವನು ಅರಸನ ಬಳಿಗೆ ಬಂದು ಸಾಷ್ಟಾಂಗನಮಸ್ಕಾರ ಮಾಡಿದನು. ಆಗ ಅರಸನು ಅಬ್ಷಾಲೋಮನನ್ನು ಮುದ್ದಿಟ್ಟನು.

2 ಸಮುವೇಲ 15:8

ಕರ್ತನು ನನ್ನನ್ನು ಯೆರೂಸಲೇಮಿಗೆ ತಿರಿಗಿ ನಿಜವಾಗಿಯೂ ಬರಮಾಡಿದರೆ ನಾನು ಕರ್ತನನ್ನು ಸೇವಿಸುವೆನೆಂದು ನಿನ್ನ ಸೇವಕನು ಅರಾಮ್ಯ ದೇಶದ ಗೆಷೂರಿನಲ್ಲಿ ವಾಸಿಸಿರುವಾಗ ಪ್ರಮಾಣಮಾಡಿಕೊಂಡಿದ್ದೆನು ಅಂದನು.

1 ಅರಸುಗಳು 9:15

ಅರಸನಾದ ಸೊಲೊಮೋನನು ಬಿಟ್ಟೀ ಆಳುಗ ಳನ್ನು ಕೂಡಿಸಿದ ಕಾರಣವೇನಂದರೆ, ಕರ್ತನ ಮಂದಿರ ವನ್ನೂ ತನ್ನ ಮನೆಯನ್ನೂ ಮಿಲ್ಲೋವನ್ನೂ ಯೆರೂಸ ಲೇಮಿನ ಗೋಡೆಯನ್ನೂ ಹಾಚೋರನ್ನೂ ಮೆಗಿದ್ದೋ ನನ್ನೂ ಗೆಜೆರನ್ನೂ ಕಟ್ಟುವದಕ್ಕೋಸ್ಕರವೇ.

1 ದಿನವೃತ್ತಾಂತ 2:23

ಇವನಿಗೆ ಗಿಲ್ಯಾದಿನ ದೇಶದಲ್ಲಿ ಇಪ್ಪತ್ತ ಮೂರು ಪಟ್ಟಣಗಳು ಉಂಟಾಗಿದ್ದವು. ಇದಲ್ಲದೆ ಅವನು ಗೆಷೂರ್ಯನ್ನೂ ಅರಾಮ್ಯನ್ನೂ ಯಾಯಾರನ ಪಟ್ಟಣಗಳನ್ನೂ ಕೆನತನ್ನೂ ಅದರ ಪಟ್ಟಣಗಳನ್ನೂಅಂದರೆ ಅರುವತ್ತು ಪಟ್ಟಣಗಳನ್ನು ತೆಗೆದುಕೊಂಡನು. ಇವುಗಳೆಲ್ಲಾ ಗಿಲ್ಯಾದನ ತಂದೆಯಾದ ಮಾಕೀರನ ಮಕ್ಕಳಿಗೆ ಇದ್ದವು.

Interlinear

Choose Theme