ಯೇಸು ದೇವಾಲಯದಲ್ಲಿ ಬೋಧಿಸುತ್ತಿದ್ದಾಗ ಬೊಕ್ಕಸದ ಬಳಿಯಲ್ಲಿ ಈ ಮಾತುಗಳನ್ನು ಆಡಿದನು; ಆದರೆ ಆತನ ಗಳಿಗೆ ಇನ್ನೂ ಬಾರದೆ ಇದ್ದದರಿಂದ ಯಾರೂ ಆತನ ಮೇಲೆ ಕೈಹಾಕಲಿಲ್ಲ.
Cross references
ದ್ವಾರಪಾಲಕರಲ್ಲಿರುವ ನಾಲ್ಕುಮಂದಿ ಮುಖ್ಯಸ್ಥರಾದ ಈ ಲೇವಿಯರು ತಮ್ಮ ನೇಮಕವಾದ ಉದ್ಯೋಗದಲ್ಲಿ ಇದ್ದು ದೇವರ ಆಲಯ ಉಗ್ರಾಣ ಗಳ ಮೇಲೆಯೂ ಬೊಕ್ಕಸಗಳ ಮೇಲೆಯೂ ಇದ್ದರು.
ಆಗ ಪ್ರಧಾನ ಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು--ಇವುಗಳನ್ನು ಬೊಕ್ಕಸದಲ್ಲಿ ಹಾಕು ವದು ನ್ಯಾಯವಲ್ಲ; ಯಾಕಂದರೆ ಅದು ರಕ್ತದಕ್ರಯ ವಾಗಿದೆ ಅಂದರು.
ಯೇಸು ಬೊಕ್ಕಸದ ಎದುರಾಗಿ ಕೂತುಕೊಂಡು ಜನರು ಹೇಗೆ ಬೊಕ್ಕಸದಲ್ಲಿ ಹಣ ಹಾಕುತ್ತಿದ್ದಾ ರೆಂಬದನ್ನು ನೋಡುತ್ತಿದ್ದನು; ಅನೇಕ ಐಶ್ವರ್ಯವಂತರು ಹೆಚ್ಚೆಚ್ಚಾಗಿ ಹಾಕಿದರು.
ಆಗ ಆತನು ತನ್ನ ಶಿಷ್ಯರನ್ನು ಹತ್ತಿರಕ್ಕೆ ಕರೆದು ಅವರಿಗೆ-- ಈ ಬೊಕ್ಕಸದಲ್ಲಿ ಹಾಕಿದವರೆಲ್ಲರಿಗಿಂತ ಈ ಬಡ ವಿಧವೆಯು ಹೆಚ್ಚಾಗಿ ಹಾಕಿದ್ದಾಳೆ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.ಯಾಕಂದರೆ ಎಲ್ಲರೂ ತಮ್ಮ ಸಮೃದ್ಧಿಯಲ್ಲಿ ಹಾಕಿದರು; ಆದರೆ ಈಕೆಯು ತನ್ನ ಕೊರತೆಯಲ್ಲಿ ತನಗಿದ್ದದ್ದನ್ನೆಲ್ಲಾ ಅಂದರೆ ತನ್ನ ಜೀವನವನ್ನೆಲ್ಲಾ ಹಾಕಿದ್ದಾಳೆ ಅಂದನು.
ಅದೇ ದಿನದಲ್ಲಿ ಫರಿಸಾಯರಲ್ಲಿ ಕೆಲವರು ಆತನ ಬಳಿಗೆ ಬಂದು--ನೀನು ಇಲ್ಲಿಂದ ಹೊರಟುಹೋಗು; ಯಾಕಂದರೆ ಹೆರೋದನು ನಿನ್ನನ್ನು ಕೊಲ್ಲುವನು ಎಂದು ಆತನಿಗೆ ಹೇಳಿದರು.
ಅದೇ ಗಳಿಗೆಯಲ್ಲಿ ಪ್ರಧಾನಯಾಜಕರೂ ಶಾಸ್ತ್ರಿಗಳೂ ಆತನ ಮೇಲೆ ಕೈ ಹಾಕುವದಕ್ಕೆ ಹವಣಿ ಸಿದರು; ಯಾಕಂದರೆ ಅತನು ತಮಗೆ ವಿರೋಧ ವಾಗಿಯೇ ಈ ಸಾಮ್ಯವನ್ನು ಹೇಳಿದ್ದನೆಂದು ಅವರು ತಿಳಿದುಕೊಂಡಿದ್ದರು; ಆದರೆ ಅವರು ಜನರಿಗೆ ಭಯಪಟ್ಟರು.
ನೀವು ಈ ಹಬ್ಬಕ್ಕೆ ಹೋಗಿರಿ; ನಾನು ಈ ಹಬ್ಬಕ್ಕೆ ಈಗಲೇ ಹೋಗುವದಿಲ್ಲ, ಯಾಕಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ ಅಂದನು.
ಆಗ ಅವರು ಆತನನ್ನು ಹಿಡಿಯಲು ಹವಣಿಸಿದರು; ಆದರೆ ಆತನ ಗಳಿಗೆ ಇನ್ನೂ ಬಾರದೆ ಇದ್ದದರಿಂದ ಆತನ ಮೇಲೆ ಯಾರೂ ಕೈ ಹಾಕಲಿಲ್ಲ.
ಅವರಲ್ಲಿ ಕೆಲವರು ಆತನನ್ನು ಹಿಡಿಯಬೇಕೆಂದಿದ್ದರು; ಆದರೆ ಯಾರೂ ಆತನ ಮೇಲೆ ಕೈ ಹಾಕಲಿಲ್ಲ.
ಆಗ ಅವರು ಆತನ ಮೇಲೆ ಕಲ್ಲುಗಳನ್ನು ಎಸೆಯಲು ತಕ್ಕೊಂಡರು; ಆದರೆ ಯೇಸು ಅಡಗಿಕೊಂಡು ಅವರ ಮಧ್ಯದಿಂದ ದೇವಾಲಯದ ಹೊರಗೆ ಬಂದು ಅಲ್ಲಿಂದ ಹಾದು ಹೊರಟು ಹೋದನು.
ಆದದರಿಂದ ತಿರಿಗಿ ಅವರು ಆತನನ್ನು ಹಿಡಿಯುವದಕ್ಕೆ ಹುಡುಕಿದರು; ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು
ಯೇಸು--ಹಗಲಿಗೆ ಹನ್ನೆರಡು ತಾಸುಗಳು ಇವೆಯಲ್ಲವೇ? ಯಾವ ಮನುಷ್ಯನಾದರೂ ಹಗಲಿ ನಲ್ಲಿ ತಿರುಗಾಡಿದರೆ ಈ ಲೋಕದ ಬೆಳಕನ್ನು ನೋಡು ವದರಿಂದ ಅವನು ಎಡವುವದಿಲ್ಲ.