Home Bibles ಯೋಹಾನ 8:59 · ಕನ್ನಡ ಬೈಬಲ್
ಯೋಹಾನ 8:59 · ಕನ್ನಡ ಬೈಬಲ್

ಆಗ ಅವರು ಆತನ ಮೇಲೆ ಕಲ್ಲುಗಳನ್ನು ಎಸೆಯಲು ತಕ್ಕೊಂಡರು; ಆದರೆ ಯೇಸು ಅಡಗಿಕೊಂಡು ಅವರ ಮಧ್ಯದಿಂದ ದೇವಾಲಯದ ಹೊರಗೆ ಬಂದು ಅಲ್ಲಿಂದ ಹಾದು ಹೊರಟು ಹೋದನು.

Cross references

ಆದಿಕಾಂಡ 19:11

ಬಾಗಲಲ್ಲಿದ್ದ ಮನುಷ್ಯರನ್ನು ಕಿರಿಯರಿಂದ ಹಿರಿಯರ ವರೆಗೆ ಕುರುಡರನ್ನಾಗಿ ಮಾಡಿದರು. ಆಗ ಅವರು ಬಾಗಲನ್ನು ಕಂಡುಕೊಳ್ಳಲಾರದೆ ಬೇಸರಗೊಂಡರು.

ಲೇವ್ಯಕಾಂಡ 24:16

ಕರ್ತನ ನಾಮವನ್ನು ದೂಷಣೆ ಮಾಡುವವನಿಗೆ ನಿಶ್ಚಯವಾಗಿ ಮರಣವನ್ನು ವಿಧಿಸಬೇಕು ಮತ್ತು ಸಭೆಯವರೆಲ್ಲರು ನಿಶ್ಚಯವಾಗಿ ಅವನಿಗೆ ಕಲ್ಲೆಸೆಯಬೇಕು. ಇದಲ್ಲದೆ ದೇಶದೊಳಗೆ ಹುಟ್ಟಿದ ಪರಕೀಯನು ಕರ್ತನ ಹೆಸರನ್ನು ದೂಷಣೆ ಮಾಡಿದಾಗ ಅವನನ್ನು ಮರಣಕ್ಕೆ ಒಳಪಡಿಸಬೇಕು.

2 ಅರಸುಗಳು 6:18

ಅವರು ಇವನ ಬಳಿಗೆ ಇಳಿದು ಬಂದಾಗ ಎಲೀಷನು--ಕರ್ತನೇ, ನೀನು ದಯಮಾಡಿ ಈ ಜನರನ್ನು ಕುರುಡರನ್ನಾಗಿ ಮಾಡು ಎಂದು ಪ್ರಾರ್ಥಿ ಸಿದನು. ಆಗ ಎಲೀಷನ ಮಾತಿನ ಹಾಗೆಯೇ ಆತನು ಅವರನ್ನು ಕುರುಡರನ್ನಾಗಿ ಮಾಡಿದನು.

ಲೂಕ 4:29

ಅವರು ಮೇಲಕ್ಕೆದ್ದು ಆತನನ್ನು ಪಟ್ಟಣದ ಹೊರಗೆ ದೂಡಿ ಕೊಂಡು ಹೋಗಿ ತಲೆ ಕೆಳಗೆ ಮಾಡಿ ದೊಬ್ಬಬೇಕೆಂದು ತಮ್ಮ ಪಟ್ಟಣವು ಕಟ್ಟಲ್ಪಟ್ಟಿದ್ದ ಬೆಟ್ಟದ ಕಡಿದಾದ ಸ್ಥಳಕ್ಕೆ ಆತನನ್ನು ನಡಿಸಿಕೊಂಡು ಹೋದರು.

ಲೂಕ 24:31

ಆಗ ಅವರ ಕಣ್ಣುಗಳು ತೆರೆಯಲ್ಪಟ್ಟದ್ದರಿಂದ ಅವರು ಆತನ ಗುರುತು ಹಿಡಿದರು; ಆತನು ಅವರ ದೃಷ್ಟಿಗೆ ಅದೃಶ್ಯನಾದನು.

ಯೋಹಾನ 5:13

ಆದರೆ ಆತನು ಯಾರೆಂದು ಸ್ವಸ್ಥನಾದವನಿಗೆ ತಿಳಿದಿರಲಿಲ್ಲ; ಯಾಕಂದರೆ ಆ ಸ್ಥಳ ದಲ್ಲಿ ಜನಸಮೂಹವು ಇದ್ದದರಿಂದ ಯೇಸು ಅಲ್ಲಿಂದ ಸರಕೊಂಡು ಹೋಗಿದ್ದನು.

ಯೋಹಾನ 8:5

ಇಂಥವರು ಕಲ್ಲೆಸೆಯಲ್ಪಡಬೇಕೆಂದು ಮೋಶೆಯು ನ್ಯಾಯಪ್ರಮಾಣದಲ್ಲಿ ನಮಗೆ ಅಪ್ಪಣೆ ಕೊಟ್ಟಿದ್ದಾನೆ; ಆದರೆ ನೀನು ಏನು ಹೇಳುತ್ತೀ ಎಂದು ಕೇಳಿದರು.

ಯೋಹಾನ 10:30

ನಾನು ಮತ್ತು ನನ್ನ ತಂದೆಯು ಒಂದಾಗಿದ್ದೇವೆ ಎಂದು ಉತ್ತರಕೊಟ್ಟನು.

ಯೋಹಾನ 10:39

ಆದದರಿಂದ ತಿರಿಗಿ ಅವರು ಆತನನ್ನು ಹಿಡಿಯುವದಕ್ಕೆ ಹುಡುಕಿದರು; ಆದರೆ ಆತನು ಅವರ ಕೈಯಿಂದ ತಪ್ಪಿಸಿಕೊಂಡು

ಯೋಹಾನ 11:8

ಆತನ ಶಿಷ್ಯರು ಆತನಿಗೆ--ಬೋಧಕನೇ, ಆಗಲೇ ಯೆಹೂದ್ಯರು ನಿನ್ನ ಮೇಲೆ ಕಲ್ಲೆಸೆಯಬೇಕೆಂದು ಹುಡುಕುತ್ತಿ ದ್ದರಲ್ಲಾ; ತಿರಿಗಿ ನೀನು ಅಲ್ಲಿಗೆ ಹೋಗುತ್ತೀಯೋ? ಅಂದರು.

ಯೋಹಾನ 11:54

ಹೀಗಿರುವದರಿಂದ ಯೇಸು ಯೆಹೂದ್ಯರ ಮಧ್ಯದಲ್ಲಿ ಬಹಿರಂಗವಾಗಿ ತಿರುಗಾಡಲಿಲ್ಲ. ಆದರೆ ಅಲ್ಲಿಂದ ಅಡವಿಗೆ ಸವಿಾಪ ದಲ್ಲಿದ್ದ ಪ್ರದೇಶದ ಎಫ್ರಾಯಿಮ್‌ ಎಂಬ ಪಟ್ಟಣಕ್ಕೆ ಹೋಗಿ ಅಲ್ಲಿ ತನ್ನ ಶಿಷ್ಯರ ಸಂಗಡ ಇದ್ದನು.

ಯೋಹಾನ 12:36

ನೀವು ಬೆಳಕಿನ ಮಕ್ಕಳಾಗುವಂತೆ ನಿಮಗೆ ಬೆಳಕು ಇರುವಾಗಲೇ ಬೆಳಕನ್ನು ನಂಬಿರಿ ಅಂದನು. ಯೇಸು ಇವುಗಳನ್ನು ಹೇಳಿದ ಮೇಲೆ ಹೊರಟುಹೋಗಿ ಅವರಿಂದ ಅಡಗಿಕೊಂಡನು.

ಯೋಹಾನ 18:31

ಆಗ ಪಿಲಾತನು ಅವರಿಗೆ--ನೀವೇ ಆತನನ್ನು ತಕ್ಕೊಂಡು ನಿಮ್ಮ ನ್ಯಾಯಪ್ರಮಾಣದ ಪ್ರಕಾರ ಆತನಿಗೆ ನ್ಯಾಯತೀರಿಸಿರಿ ಅಂದನು. ಅದಕ್ಕೆ ಯೆಹೂದ್ಯರು ಅವನಿಗೆ--ನಾವು ಯಾವ ಮನುಷ್ಯ ನನ್ನೂ ಕೊಲ್ಲಿಸುವದಕ್ಕೆ ನಮಗೆ ನ್ಯಾಯವಲ್ಲ ಎಂದು ಹೇಳಿದರು.

ಅಪೋಸ್ತಲರ ಕೃತ್ಯಗಳು 7:57

ಆದರೆ ಅವರು ಮಹಾಶಬ್ದದಿಂದ ಕೂಗಿ ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಒಮ್ಮನಸ್ಸಿನಿಂದ ಅವನ ಮೇಲೆ ಬಿದ್ದು

ಅಪೋಸ್ತಲರ ಕೃತ್ಯಗಳು 8:39

ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದಾಗ ಕರ್ತನ ಆತ್ಮನು ಫಿಲಿಪ್ಪನನ್ನು ಎತ್ತಿಕೊಂಡು ಹೋಗಲಾಗಿ ಕಂಚುಕಿಯು ಅವನನ್ನು ಕಾಣಲೇಇಲ್ಲ. ಅವನು ತನ್ನ ದಾರಿ ಹಿಡಿದು ಸಂತೋಷವುಳ್ಳವನಾಗಿ ಹೋದನು.ತರುವಾಯ ಫಿಲಿಪ್ಪನು ಅಜೋತಿನಲ್ಲಿ ಕಾಣಿಸಿ ಕೊಂಡು ಅಲ್ಲಿಂದ ಕೈಸರೈಯಕ್ಕೆ ಬರುವ ತನಕ ಎಲ್ಲಾ ಪಟ್ಟಣಗಳಲ್ಲಿ ಸುವಾರ್ತೆಯನ್ನು ಸಾರುತ್ತಾ ಹೋದನು.

Interlinear

Choose Theme