Home Bibles ಯೋಹಾನ 5:9 · ಕನ್ನಡ ಬೈಬಲ್
ಯೋಹಾನ 5:9 · ಕನ್ನಡ ಬೈಬಲ್

ಕೂಡಲೆ ಆ ಮನುಷ್ಯನು ಸ್ವಸ್ಥನಾಗಿ ತನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆದನು; ಆ ದಿನವು ಸಬ್ಬತ್ತಾಗಿತ್ತು.

Cross references

ಮತ್ತಾಯ 12:10

ಇಗೋ, ಅಲ್ಲಿ ಕೈ ಬತ್ತಿದ್ದ ಒಬ್ಬ ಮನುಷ್ಯನಿದ್ದನು. ಆಗ ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ-- ಸಬ್ಬತ್‌ ದಿನಗಳಲ್ಲಿ ಸ್ವಸ್ಥ ಮಾಡುವದು ನ್ಯಾಯವೋ ಎಂದು ಕೇಳಿದರು.

ಮಾರ್ಕ 1:31

ಆತನು ಬಂದು ಆಕೆಯ ಕೈಯನ್ನು ಹಿಡಿದು ಅವಳನ್ನು ಮೇಲಕ್ಕೆ ಎತ್ತಿದನು; ಕೂಡಲೆ ಜ್ವರವು ಆಕೆಯನ್ನು ಬಿಟ್ಟು ಹೋಯಿತು; ಆಕೆಯು ಅವರಿಗೆ ಉಪಚಾರ ಮಾಡಿದಳು.

ಮಾರ್ಕ 1:42

ಹೀಗೆ ಆತನು ಹೇಳಿದ ಕೂಡಲೆ ಆ ಕುಷ್ಠವು ತಕ್ಷಣವೇ ಅವನಿಂದ ಹೊರಟುಹೋಗಿ ಅವನು ಶುದ್ಧನಾದನು.

ಮಾರ್ಕ 3:2

ಅವರು ಆತನ ಮೇಲೆ ತಪ್ಪು ಹೊರಿಸಬೇಕೆಂದು ಸಬ್ಬತ್‌ ದಿನದಲ್ಲಿ ಆತನು ಅವನನ್ನು ಸ್ವಸ್ಥ ಮಾಡುವನೇನೋ ಎಂದು ಕಾಯು ತ್ತಿದ್ದರು.

ಮಾರ್ಕ 5:29

ಕೂಡಲೆ ಆಕೆಗೆ ರಕ್ತ ಹರಿಯುವದು ನಿಂತುಹೋಯಿತು; ಆಗ ಆ ಜಾಡ್ಯ ದಿಂದ ತನಗೆ ಗುಣವಾಯಿತೆಂದು ಆಕೆಯ ಶರೀರದಲ್ಲಿ ಆಕೆಗೆ ಅನ್ನಿಸಿತು.

ಮಾರ್ಕ 5:41

ಮತ್ತು ಆತನು ಆ ಹುಡುಗಿಯ ಕೈ ಹಿಡಿದು ಆಕೆಗೆ --ತಲಿಥಾ ಕೂಮ್‌ ಅಂದನು. ಹುಡುಗಿಯೇ, ಎದ್ದೇಳು ಎಂದು ನಾನು ನಿನಗೆ ಹೇಳುತ್ತೇನೆ ಎಂದರ್ಥ.

ಮಾರ್ಕ 10:52

ಅದಕ್ಕೆ ಯೇಸು ಅವನಿಗೆ--ಹೋಗು, ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಪಡಿಸಿದೆ ಅಂದನು. ಕೂಡಲೆ ಅವನು ತನ್ನ ದೃಷ್ಟಿಯನ್ನು ಹೊಂದಿ ಆ ಮಾರ್ಗದಲ್ಲಿ ಯೇಸು ವನ್ನು ಹಿಂಬಾಲಿಸಿದನು.

ಲೂಕ 13:10

ಆತನು ಸಬ್ಬತ್ತಿನಲ್ಲಿ ಸಭಾಮಂದಿರದಲ್ಲಿ ಬೋಧಿ ಸುತ್ತಾ ಇದ್ದನು.

ಯೋಹಾನ 5:10

ಆದದರಿಂದ ಯೆಹೂದ್ಯರು ಸ್ವಸ್ಥನಾದವನಿಗೆ--ಇದು ಸಬ್ಬತ್‌ ದಿನವಾಗಿದೆ; ನೀನು ಹಾಸಿಗೆಯನ್ನು ಹೊತ್ತುಕೊಳ್ಳುವದು ನ್ಯಾಯವಲ್ಲ ಅಂದರು.

ಯೋಹಾನ 5:14

ತರುವಾಯ ಯೇಸು ಅವನನ್ನು ದೇವಾಲಯದಲ್ಲಿ ಕಂಡುಕೊಂಡು ಅವ ನಿಗೆ--ಇಗೋ, ನಿನಗೆ ಸ್ವಸ್ಥವಾಯಿತಲ್ಲಾ; ನಿನ್ನ ಮೇಲೆ ಹೆಚ್ಚಿನ ಕೇಡು ಬಾರದಂತೆ ಇನ್ನು ಪಾಪಮಾಡಬೇಡ ಅಂದನು.

ಯೋಹಾನ 7:23

ಒಬ್ಬ ಮನುಷ್ಯನು ಮೋಶೆಯ ನ್ಯಾಯಪ್ರಮಾಣವನ್ನು ವಿಾರದ ಹಾಗೆ ಸಬ್ಬತ್‌ ದಿನ ದಲ್ಲಿ ಸುನ್ನತಿಯನ್ನು ಮಾಡಿಸಿಕೊಂಡರೆ ನಾನು ಒಬ್ಬ ಮನುಷ್ಯನನ್ನು ಸಬ್ಬತ್‌ದಿನದಲ್ಲಿ ಸಂಪೂರ್ಣವಾಗಿ ಸ್ವಸ್ಥ ಮಾಡಿದ್ದಕ್ಕೆ ನನ್ನ ಮೇಲೆ ನೀವು ಕೋಪಗೊಳ್ಳು ತ್ತೀರೋ?

ಯೋಹಾನ 9:14

ಯೇಸು ಕೆಸರುಮಾಡಿ ಅವನ ಕಣ್ಣುಗಳನ್ನು ತೆರೆದಾಗ ಅದು ಸಬ್ಬತ್‌ದಿನವಾಗಿತ್ತು.

ಅಪೋಸ್ತಲರ ಕೃತ್ಯಗಳು 3:7

ಪೇತ್ರನು ಅವನ ಬಲಗೈಯನ್ನು ಹಿಡಿದು ಎತ್ತಿದನು; ಕೂಡಲೆ ಅವನ ಪಾದಗಳೂ ಹರಡಿನ ಎಲುಬುಗಳೂ ಬಲವನ್ನು ಹೊಂದಿದವು.

Interlinear

Choose Theme