ಯೋಹಾನ 5:12 · ಕನ್ನಡ ಬೈಬಲ್
ಅದಕ್ಕೆ ಅವರು ಅವನಿಗೆ--ನಿನ್ನ ಹಾಸಿಗೆಯನ್ನು ತೆಗೆದುಕೊಂಡು ನಡೆ ಎಂದು ನಿನಗೆ ಹೇಳಿದ ಮನುಷ್ಯನು ಯಾರು ಎಂದು ಕೇಳಿದರು.
Cross references
ನ್ಯಾಯಾಧಿಪತಿಗಳು 6:29
ಆಗ ಅವರು ಒಬ್ಬರಿಗೊ ಬ್ಬರು--ಈ ಕಾರ್ಯವನ್ನು ಮಾಡಿದವನಾರು ಅಂದರು. ಅವರು ವಿಚಾರಿಸಿ ಕೇಳಿದಾಗ ಅವರು--ಯೋವಾಷನ ಮಗನಾದ ಗಿದ್ಯೋನನು ಈ ಕಾರ್ಯ ಮಾಡಿದನು ಅಂದರು.
1 ಸಮುವೇಲ 14:38
ಆಗ ಸೌಲನು--ಜನರ ಎಲ್ಲಾ ಮುಖ್ಯಸ್ಥರೇ, ಇಲ್ಲಿ ಬನ್ನಿರಿ; ಈಹೊತ್ತು ಈ ಪಾಪ ಯಾವದರಿಂದ ಉಂಟಾಯಿತೆಂದು ತಿಳುಕೊಂಡು ನೋಡಿರಿ.
ಮತ್ತಾಯ 21:23
ಆತನು ದೇವಾಲಯಕ್ಕೆ ಬಂದು ಬೋಧಿಸು ತ್ತಿದ್ದಾಗ ಪ್ರಧಾನಯಾಜಕರೂ ಜನರ ಹಿರಿಯರೂ ಆತನ ಬಳಿಗೆ ಬಂದು--ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಮತ್ತು ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು ಎಂದು ಕೇಳಿದರು.
ರೋಮಾಪುರದವರಿಗೆ 10:2
ದೇವರಲ್ಲಿ ಆಸಕ್ತರಾಗಿದ್ದಾರೆಂದು ನಾನು ಅವರ ವಿಷಯದಲ್ಲಿ ಸಾಕ್ಷಿಕೊಡುತ್ತೇನೆ; ಆದರೂ ಅವರ ಆಸಕ್ತಿಯು ಜ್ಞಾನಾನುಸಾರವಾದದ್ದಲ್ಲ.