Home Bibles ಯೋಹಾನ 4:20 · ಕನ್ನಡ ಬೈಬಲ್
ಯೋಹಾನ 4:20 · ಕನ್ನಡ ಬೈಬಲ್

ನಮ್ಮ ಪಿತೃಗಳು ಈ ಬೆಟ್ಟದಲ್ಲಿ ಆರಾಧಿಸಿದರು; ಆದರೆ ಜನರು ಆರಾಧಿಸತಕ್ಕ ಸ್ಥಳವು ಯೆರೂಸಲೇಮಿ ನಲ್ಲಿಯೇ ಎಂದು ನೀವು ಅನ್ನುತ್ತೀರಿ ಅಂದಳು.

Cross references

ಆದಿಕಾಂಡ 12:6

ಅಬ್ರಾಮನು ಆ ದೇಶದಲ್ಲಿ ಶೆಕೆಮ್‌ ಎಂಬ ಸ್ಥಳದ ಮೋರೆಯೆಂಬ ಮೈದಾನದ ವರೆಗೆ ಹಾದು ಹೋದನು. ಆಗ ಕಾನಾನ್ಯರು ದೇಶದಲ್ಲಿ ಇದ್ದರು.

ಆದಿಕಾಂಡ 33:18

ಯಾಕೋಬನು ಪದ್ದನ್‌ ಅರಾಮಿನಿಂದ ಬಂದು ಕಾನಾನ್‌ ದೇಶದ ಶೆಕೆಮಿನಲ್ಲಿರುವ ಸಾಲೆಮ್‌ ಪಟ್ಟಣಕ್ಕೆ ಬಂದು ಪಟ್ಟಣದ ಮುಂದೆ ತನ್ನ ಗುಡಾರಗಳನ್ನು ಹಾಕಿದನು.

ದ್ವಿತೀಯೋಪದೇಶಕಾಂಡ 11:29

ನೀನು ಸ್ವಾಧೀನಮಾಡಿಕೊಳ್ಳುವದಕ್ಕೆ ಪ್ರವೇಶಿ ಸುವ ದೇಶದಲ್ಲಿ ನಿನ್ನ ದೇವರಾದ ಕರ್ತನು ನಿನ್ನನ್ನು ಸೇರಿಸಿದಾಗ ನೀನು ಗೆರಿಜ್ಜೀಮ್‌ ಬೆಟ್ಟದ ಮೇಲೆ ಆಶೀರ್ವಾದವನ್ನೂ ಏಬಾಲ್‌ ಬೆಟ್ಟದ ಮೇಲೆ ಶಾಪ ವನ್ನೂ ಕೊಡಬೇಕು.

ದ್ವಿತೀಯೋಪದೇಶಕಾಂಡ 12:5

ಆದರೆ ನಿಮ್ಮ ದೇವರಾದ ಕರ್ತನು ತನ್ನ ಹೆಸರನ್ನು ಇಡುವದಕ್ಕೆ ನಿಮ್ಮ ಎಲ್ಲಾ ಗೋತ್ರಗಳೊ ಳಗಿಂದ ಆದುಕೊಂಡ ಸ್ಥಳದಲ್ಲಿ ಆತನ ನಿವಾಸವನ್ನು ನೀವು ಹುಡುಕಿ ಅಲ್ಲಿಗೆ ಬರಬೇಕು.

ದ್ವಿತೀಯೋಪದೇಶಕಾಂಡ 27:12

ನೀವು ಯೊರ್ದನನ್ನು ದಾಟಿದ ಮೇಲೆ ಜನ ರನ್ನು ಆಶೀರ್ವದಿಸುವದಕ್ಕೆ ಗೆರಿಜ್ಜೀಮ್‌ ಬೆಟ್ಟದಲ್ಲಿ ನಿಲ್ಲತಕ್ಕವರಾರಂದರೆ -- ಸಿಮೆಯೋನ್‌, ಲೇವಿ, ಯೆಹೂದ, ಇಸ್ಸಾಕಾರ್‌, ಯೋಸೇಫ್‌, ಬೆನ್ಯಾವಿಾನ್‌.

ಯೆಹೋಶುವ 8:33

ಇಸ್ರಾಯೇಲ್ಯರೆಲ್ಲರೂ ಅವರ ಹಿರಿ ಯರೂ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಪರ ದೇಶಸ್ಥರೂ ದೇಶಸ್ಥರೂ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮುಂದೆ ಒಡಂಬಡಿಕೆಯ ಮಂಜೂಷಕ್ಕೆ ಈ ಕಡೆಯೂ ಆ ಕಡೆಯೂ ಅರ್ಧ ಗೆರಿಜ್ಜೀಮ್‌ ಪರ್ವತದ ಕಡೆಗೂ ಅರ್ಧ ಏಬಾಲ್‌ ಪರ್ವತದ ಕಡೆಗೂ ಜನರನ್ನು ಆಶೀರ್ವದಿಸುವದಕ್ಕೆ ಕರ್ತನ ಸೇವಕನಾದ ಮೋಶೆ ಮೊದಲು ಆಜ್ಞಾಪಿಸಿದ ಹಾಗೆ ನಿಂತರು.

ನ್ಯಾಯಾಧಿಪತಿಗಳು 9:6

ಶೆಕೆಮಿನ ಜನರೆಲ್ಲರೂ ಮಿಲ್ಲೋನಿನ ಮನೆಯವರೆಲ್ಲರೂ ಕೂಡಿಕೊಂಡು ಹೋಗಿ ಶೆಕೆಮಿನ ಬೈಲಲ್ಲಿ ಇರುವ ಸ್ತಂಭದ ಬಳಿಯಲ್ಲಿ ಅಬೀಮೆಲೆಕನನ್ನು ಅರಸನನ್ನಾಗಿ ನೇಮಿಸಿದರು.

1 ಅರಸುಗಳು 9:3

ಆಗ ಕರ್ತನು ಅವ ನಿಗೆ--ನೀನು ನನ್ನ ಮುಂದೆ ಮಾಡಿದ ನಿನ್ನ ಪ್ರಾರ್ಥನೆ ಯನ್ನೂ ವಿಜ್ಞಾಪನೆಯನ್ನೂ ನಾನು ಕೇಳಿ ಯುಗ ಯುಗಕ್ಕೂ ನನ್ನ ಹೆಸರು ಅಲ್ಲಿರುವ ಹಾಗೆ ನೀನು ಕಟ್ಟಿಸಿದ ಈ ಮಂದಿರವನ್ನು ಪರಿಶುದ್ಧ ಮಾಡಿದೆನು; ನನ್ನ ಕಣ್ಣುಗಳೂ ನನ್ನ ಹೃದಯವೂ ನಿತ್ಯವಾಗಿ ಅಲ್ಲಿ ರುವವು.

2 ಅರಸುಗಳು 17:26

ಆದಕಾರಣ ಅವರು ಅಶ್ಶೂರಿನ ಅರಸನಿಗೆ--ನೀನು ಸೇರಿಸಿ ಸಮಾರ್ಯದ ಪಟ್ಟಣಗಳಲ್ಲಿ ಇರಿಸಿದ ಜನಾಂಗಗಳು ಆ ದೇಶದ ದೇವರ ಕ್ರಮವನ್ನು ತಿಳಿಯದೆ ಇದ್ದಾರೆ. ಅವರು ಆ ದೇಶದ ದೇವರ ಕ್ರಮವನ್ನು ತಿಳಿಯದೆ ಇದ್ದದರಿಂದ ಆತನು ಅವರ ಮಧ್ಯದಲ್ಲಿ ಸಿಂಹಗಳನ್ನು ಕಳುಹಿಸಿದ್ದಾನೆ; ಇಗೋ, ಅವು ಅವರನ್ನು ಕೊಂದುಹಾಕುತ್ತವೆ ಅಂದರು.

1 ದಿನವೃತ್ತಾಂತ 21:26

ದಾವೀದನು ಅಲ್ಲಿ ಕರ್ತನಿಗೆ ಬಲಿಪೀಠವನ್ನು ಕಟ್ಟಿಸಿ ಅದರ ಮೇಲೆ ದಹನ ಬಲಿಗಳನ್ನೂ ಸಮಾಧಾನದ ಬಲಿಗಳನ್ನೂ ಅರ್ಪಿಸಿ ಕರ್ತನನ್ನು ಬೇಡಿಕೊಂಡನು. ಆಗ ಆತನು ಆಕಾಶದಿಂದ ದಹನ ಬಲಿಪೀಠದ ಮೇಲೆ ಅಗ್ನಿಯಿಂದ ಅವ ನಿಗೆ ಪ್ರತ್ಯುತ್ತರಕೊಟ್ಟನು.

1 ದಿನವೃತ್ತಾಂತ 22:1

ಆಗ ದಾವೀದನು -- ಕರ್ತನಾದ ದೇವರ ಮನೆಯೂ ಇಸ್ರಾಯೇಲಿನ ದಹನಬಲಿ ಪೀಠವೂ ಇದೇ ಅಂದನು.

2 ದಿನವೃತ್ತಾಂತ 6:6

ಆದರೆ ನನ್ನ ಹೆಸರು ಅಲ್ಲಿ ಇರುವ ಹಾಗೆ ಯೆರೂಸಲೇಮನ್ನೂ ನನ್ನ ಜನ ರಾದ ಇಸ್ರಾಯೇಲ್ಯರ ಮೇಲೆ ಇರಲು ದಾವೀದನನ್ನೂ ಆದುಕೊಂಡಿದ್ದೇನೆ ಎಂದು ಹೇಳಿದ್ದಾನೆ.

2 ದಿನವೃತ್ತಾಂತ 7:12

ಕರ್ತನು ರಾತ್ರಿಯಲ್ಲಿ ಸೊಲೊಮೋನನಿಗೆ ಕಾಣಿಸಿ ಕೊಂಡು ಅವನಿಗೆ--ನಾನು ನಿನ್ನ ಪ್ರಾರ್ಥನೆಯನ್ನು ಕೇಳಿ ಬಲಿಯರ್ಪಿಸುವ ಆಲಯವಾಗಿ ನನಗೆ ಈ ಸ್ಥಳವನ್ನು ಆದುಕೊಂಡಿದ್ದೇನೆ.

2 ದಿನವೃತ್ತಾಂತ 7:16

ನನ್ನ ಹೆಸರು ಯುಗಯುಗಾಂತರಕ್ಕೂ ಅಲ್ಲಿ ಇರುವ ಹಾಗೆ ಈ ಮನೆಯನ್ನು ಆದುಕೊಂಡು ಪರಿಶುದ್ಧ ಮಾಡಿದ್ದೇನೆ; ನನ್ನ ಕಣ್ಣುಗಳೂ ನನ್ನ ಹೃದಯವೂ ಅಲ್ಲಿ ಯಾವಾಗಲೂ ಇರುವವು.

ಕೀರ್ತನೆಗಳು 78:68

ಯೆಹೂದನ ಕುಲವನ್ನೂ ತಾನು ಪ್ರೀತಿ ಮಾಡಿದ ಚೀಯೋನ್‌ ಪರ್ವತವನ್ನೂ ಆದುಕೊಂಡು,

ಕೀರ್ತನೆಗಳು 87:1

ಆತನ ಅಸ್ತಿವಾರವು ಪರಿಶುದ್ಧ ಪರ್ವತಗಳಲ್ಲಿ ಅದೆ.

ಕೀರ್ತನೆಗಳು 132:13

ಕರ್ತನು ಚೀಯೋನನ್ನು ಆದುಕೊಂಡು ಅದನ್ನು ತನ್ನ ವಾಸಕ್ಕಾಗಿ ಅಪೇಕ್ಷಿಸಿದ್ದಾನೆ.

ಲೂಕ 9:53

ಆದರೆ ಅವರು ಆತನನ್ನು ಅಂಗೀಕರಿಸಲಿಲ್ಲ. ಯಾಕಂದರೆ ಆತನು ಯೆರೂಸಲೇ ಮಿಗೆ ಹೋಗುವಾತನೋ ಎಂಬಂತೆ ಆತನ ಮುಖ ವಿತ್ತು.

Interlinear

Choose Theme