Home Bibles ದ್ವಿತೀಯೋಪದೇಶಕಾಂಡ 27:12 · ಕನ್ನಡ ಬೈಬಲ್
ದ್ವಿತೀಯೋಪದೇಶಕಾಂಡ 27:12 · ಕನ್ನಡ ಬೈಬಲ್

ನೀವು ಯೊರ್ದನನ್ನು ದಾಟಿದ ಮೇಲೆ ಜನ ರನ್ನು ಆಶೀರ್ವದಿಸುವದಕ್ಕೆ ಗೆರಿಜ್ಜೀಮ್‌ ಬೆಟ್ಟದಲ್ಲಿ ನಿಲ್ಲತಕ್ಕವರಾರಂದರೆ -- ಸಿಮೆಯೋನ್‌, ಲೇವಿ, ಯೆಹೂದ, ಇಸ್ಸಾಕಾರ್‌, ಯೋಸೇಫ್‌, ಬೆನ್ಯಾವಿಾನ್‌.

Cross references

ಆದಿಕಾಂಡ 29:33

ಮತ್ತೆ ಆಕೆಯು ಗರ್ಭಿಣಿಯಾಗಿ ಮಗನನ್ನು ಹೆತ್ತು--ನಾನು ತಾತ್ಸಾರ ಮಾಡಲ್ಪಟ್ಟೆನೆಂದು ಕರ್ತನು ಕೇಳಿ ಇವನನ್ನು ನನಗೆ ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಸಿಮೆಯೋನ ಎಂದು ಹೆಸರಿಟ್ಟಳು.

ಆದಿಕಾಂಡ 30:18

ಆಗ ಲೇಯಳು--ನಾನು ನನ್ನ ಗಂಡನಿಗೆ ನನ್ನ ದಾಸಿಯನ್ನು ಕೊಟ್ಟದ್ದರಿಂದ ದೇವರು ನನಗೆ ಕೂಲಿಯನ್ನು ಕೊಟ್ಟಿದ್ದಾನೆ ಎಂದು ಹೇಳಿ ಅವನಿಗೆ ಇಸ್ಸಾಕಾರ ಎಂದು ಹೆಸರಿಟ್ಟಳು.

ಆದಿಕಾಂಡ 30:24

ಆಕೆಯು--ಕರ್ತನು ನನಗೆ ಮತ್ತೊಬ್ಬ ಮಗನನ್ನು ಕೂಡಿಸುವನೆಂದು ಹೇಳಿ ಅವನಿಗೆ ಯೋಸೇಫ ಎಂದು ಹೆಸರಿಟ್ಟಳು.

ಆದಿಕಾಂಡ 35:18

(ಆದರೆ ಆಕೆಯು ಸತ್ತುಹೋದಳು). ಅವಳು ಪ್ರಾಣಬಿಡುವಾಗ ಅವನಿಗೆ ಬೆನೋನಿ ಎಂದು ಹೆಸರಿಟ್ಟಳು; ಆದರೆ ಅವನ ತಂದೆಯು ಅವನಿಗೆ ಬೆನ್ಯಾವಿಾನ್‌ ಎಂದು ಹೆಸರಿಟ್ಟನು.

ಆದಿಕಾಂಡ 35:22

ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ಹೋಗಿ ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳ ಸಂಗಡ ಮಲಗಿದನು. ಅದನ್ನು ಇಸ್ರಾಯೇಲನು ಕೇಳಿದನು. ಯಾಕೋಬನಿಗೆ ಹನ್ನೆರಡು ಮಂದಿ ಕುಮಾರರು ಇದ್ದರು.

ದ್ವಿತೀಯೋಪದೇಶಕಾಂಡ 11:26

ಇಗೋ, ನಾನು ಈಹೊತ್ತು ಆಶೀರ್ವಾದವನ್ನೂ ಶಾಪವನ್ನೂ ನಿಮ್ಮ ಮುಂದೆ ಇಡುತ್ತೇನೆ.

ಯೆಹೋಶುವ 8:33

ಇಸ್ರಾಯೇಲ್ಯರೆಲ್ಲರೂ ಅವರ ಹಿರಿ ಯರೂ ಅಧಿಕಾರಿಗಳೂ ನ್ಯಾಯಾಧಿಪತಿಗಳೂ ಪರ ದೇಶಸ್ಥರೂ ದೇಶಸ್ಥರೂ ಕರ್ತನ ಒಡಂಬಡಿಕೆಯ ಮಂಜೂಷವನ್ನು ಹೊರುವ ಲೇವಿಯರಾದ ಯಾಜಕರ ಮುಂದೆ ಒಡಂಬಡಿಕೆಯ ಮಂಜೂಷಕ್ಕೆ ಈ ಕಡೆಯೂ ಆ ಕಡೆಯೂ ಅರ್ಧ ಗೆರಿಜ್ಜೀಮ್‌ ಪರ್ವತದ ಕಡೆಗೂ ಅರ್ಧ ಏಬಾಲ್‌ ಪರ್ವತದ ಕಡೆಗೂ ಜನರನ್ನು ಆಶೀರ್ವದಿಸುವದಕ್ಕೆ ಕರ್ತನ ಸೇವಕನಾದ ಮೋಶೆ ಮೊದಲು ಆಜ್ಞಾಪಿಸಿದ ಹಾಗೆ ನಿಂತರು.

ನ್ಯಾಯಾಧಿಪತಿಗಳು 9:7

ಯೋತಾಮನಿಗೆ ಇದನ್ನು ತಿಳಿಸಿದಾಗ ಅವನು ಹೋಗಿ ಗೆರಿಜ್ಜೀಮ್‌ ಬೆಟ್ಟದ ತುದಿಯಲ್ಲಿ ಏರಿ ನಿಂತು ಗಟ್ಟಿಯಾಗಿ ಕೂಗಿ ಅವರಿಗೆ--ಶೆಕೆಮಿನ ಜನರೇ, ದೇವರು ನಿಮ್ಮ ಮೊರೆ ಕೇಳುವ ಹಾಗೆ ನನ್ನ ಮಾತನ್ನು ಕೇಳಿರಿ.

Interlinear

Choose Theme