ಆದದರಿಂದ ಯೇಸು ಪ್ರೀತಿಸಿದ ಆ ಶಿಷ್ಯನು ಪೇತ್ರನಿಗೆ--ಆತನು ಕರ್ತನು ಅಂದನು. ಆತನು ಕರ್ತನೆಂದು ಸೀಮೋನ ಪೇತ್ರನು ಕೇಳಿ ತನ್ನ ಬೆಸ್ತರ ಅಂಗಿಯನ್ನು ಸುತ್ತಿಕೊಂಡು ಸಮುದ್ರದೊಳಗೆ ದುಮುಕಿ ದನು (ಯಾಕಂದರೆ ಅವನು ಬೆತ್ತಲೆಯಾಗಿದ್ದನು).
Cross references
ಇದು ಕರ್ತನಿಂದುಂಟಾಗಿ ನಮ್ಮ ಕಣ್ಣುಗಳಿಗೆ ಆಶ್ಚರ್ಯವಾಗಿದೆ.
ಅನೇಕ ಜಲಗಳು ಪ್ರೀತಿಯನ್ನು ಆರಿ ಸಲಾರವು; ಪ್ರವಾಹಗಳು ಅದನ್ನು ಮುಣುಗಿಸ ಲಾರವು; ಮನುಷ್ಯನು ತನ್ನ ಮನೆಯ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೆ ಅದು ಸಂಪೂರ್ಣವಾಗಿ ತಿರಸ್ಕರಿಸಲ್ಪಡುವದು.
ಆಗ ಪೇತ್ರನು ಪ್ರತ್ಯುತ್ತರವಾಗಿ ಆತನಿಗೆ--ಕರ್ತನೇ, ನೀನೇ ಆಗಿದ್ದರೆ ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರಲು ನನಗೆ ಅಪ್ಪಣೆಕೊಡು ಅಂದನು.
ಯಾವ ನಾದರೂ ನಿಮಗೆ-- ನೀವು ಯಾಕೆ ಇದನ್ನು ಮಾಡು ತ್ತೀರಿ ಎಂದು ಕೇಳಿದರೆ ಇದು ಕರ್ತನಿಗೆ ಬೇಕಾಗಿದೆ ಎಂದು ಹೇಳಿರಿ; ಆಗ ಅವನು ಕೂಡಲೆ ಅದನ್ನು ಇಲ್ಲಿಗೆ ಕಳುಹಿಸುವನು ಎಂದು ಹೇಳಿದನು.
ಈ ದಿನ ದಾವೀದನ ಪಟ್ಟಣದಲ್ಲಿ ನಿಮಗೋಸ್ಕರ ಒಬ್ಬ ರಕ್ಷಕನು ಹುಟ್ಟಿದ್ದಾನೆ; ಆತನು ಕರ್ತನಾಗಿರುವ ಕ್ರಿಸ್ತನೇ.
ಆದದರಿಂದ ನಾನು ಹೇಳುವದೇ ನಂದರೆ--ಬಹಳವಾಗಿರುವ ಅವಳ ಪಾಪಗಳು ಕ್ಷಮಿಸ ಲ್ಪಟ್ಟಿವೆ. ಯಾಕಂದರೆ ಅವಳು ಬಹಳವಾಗಿ ಪ್ರೀತಿಸಿ ದಳು; ಆದರೆ ಯಾವನಿಗೆ ಸ್ವಲ್ಪವಾಗಿ ಕ್ಷಮಿಸಲ್ಪಡು ವದೋ ಅವನು ಸ್ವಲ್ಪವಾಗಿ ಪ್ರೀತಿಸುವನು.
ಶಿಷ್ಯ ರಲ್ಲಿ ಯೇಸು ಪ್ರೀತಿಸಿದ ಒಬ್ಬನು ಆತನ ಎದೆಯ ಮೇಲೆ ಒರಗಿಕೊಂಡಿದ್ದನು.
ತನ್ನ ತಾಯಿಯು ಮತ್ತು ತಾನು ಪ್ರೀತಿಸಿದ ಶಿಷ್ಯನು ಹತ್ತಿರದಲ್ಲಿ ನಿಂತಿರುವದನ್ನು ಯೇಸು ನೋಡಿ ತನ್ನ ತಾಯಿಗೆ--ಸ್ತ್ರೀಯೇ, ಇಗೋ, ನಿನ್ನ ಮಗನು ಅಂದನು.
ಆಗ ಆಕೆಯು ಸೀಮೋನ ಪೇತ್ರನ ಬಳಿಗೂ ಯೇಸು ಪ್ರೀತಿಸಿದ ಆ ಬೇರೆ ಶಿಷ್ಯನ ಬಳಿಗೂ ಓಡಿಬಂದು ಅವರಿಗೆ--ಕರ್ತನನ್ನು ಅವರು ಸಮಾಧಿ ಯೊಳಗಿಂದ ತೆಗೆದುಕೊಂಡು ಹೋಗಿದ್ದಾರೆ; ಅವರು ಆತನನ್ನು ಎಲ್ಲಿ ಇಟ್ಟಿದ್ದಾರೋ ನಮಗೆ ಗೊತ್ತಿಲ್ಲ ಅಂದಳು.
ಆತನು ಹೀಗೆ ಹೇಳಿದ ಮೇಲೆ ತನ್ನ ಕೈಗಳನ್ನೂ ಪಕ್ಕೆಯನ್ನೂ ಅವರಿಗೆ ತೋರಿಸಿದನು; ಆಗ ಶಿಷ್ಯರು ಕರ್ತನನ್ನು ನೋಡಿ ಸಂತೋಷಪಟ್ಟರು.
ತೋಮನು ಪ್ರತ್ಯುತ್ತರವಾಗಿ ಆತನಿಗೆ--ನನ್ನ ಕರ್ತನೇ, ನನ್ನ ದೇವರೇ ಅಂದನು.
ಊಟದಲ್ಲಿ ಆತನ ಎದೆಗೆ ಒರಗಿಕೊಂಡು-- ಕರ್ತನೇ, ನಿನ್ನನ್ನು ಹಿಡುಕೊಡುವವನು ಯಾರು ಎಂದು ಕೇಳಿದಂಥ ಮತ್ತು ಯೇಸು ಪ್ರೀತಿಸಿದಂಥ ಶಿಷ್ಯನು ಹಿಂದೆ ಬರುವದನ್ನು ಪೇತ್ರನು ಹಿಂತಿರುಗಿ ನೋಡಿ
ಇವುಗಳ ವಿಷಯವಾಗಿ ಸಾಕ್ಷಿ ಹೇಳಿ ಇವುಗಳನ್ನು ಬರೆದ ಶಿಷ್ಯನು ಇವನೇ; ಇವನ ಸಾಕ್ಷಿಯು ಸತ್ಯವೆಂದು ನಾವು ಬಲ್ಲೆವು.ಇದಲ್ಲದೆ ಯೇಸು ಮಾಡಿದವುಗಳು ಬಹಳ ಉಂಟು; ಅವುಗಳನ್ನು ಒಂದೊಂದಾಗಿ ಬರೆಯುವ ದಾದರೆ ಬರೆಯಬೇಕಾದ ಪುಸ್ತಕಗಳನ್ನು ಲೋಕವೇ ಹಿಡಿಸಲಾರದೆ ಹೋದೀತೆಂದು ನಾನು ನೆನಸುತ್ತೇನೆ. ಆಮೆನ್.
ಆದದರಿಂದ ನೀವು ಶಿಲುಬೆಗೆ ಹಾಕಿದ ಈ ಯೇಸುವನ್ನೇ ದೇವರು ಕರ್ತನನ್ನಾಗಿಯೂ ಕ್ರಿಸ್ತನನ್ನಾಗಿಯೂ ಮಾಡಿದ್ದಾನೆಂದು ಇಸ್ರಾಯೇಲ್ ಮನೆತನದವರೆಲ್ಲರಿಗೂ ನಿಶ್ಚಯವಾಗಿ ತಿಳಿದಿರಲಿ ಎಂದು ಹೇಳಿದನು.
ಯೇಸು ಕ್ರಿಸ್ತನ ಮೂಲಕ ದೇವರು ಸಮಾಧಾನವನ್ನು ಪ್ರಕಟಿಸುತ್ತಾ ಇಸ್ರಾಯೇಲ್ ಜನರಿಗೆ ವಾಕ್ಯವನ್ನು ಅನುಗ್ರಹಿಸಿದ್ದಾನೆ; (ಆತನು ಎಲ್ಲರಿಗೂ ಕರ್ತನಾಗಿದ್ದಾನೆ.)
ಮೊದಲನೆಯ ಮನುಷ್ಯನು ಮಣ್ಣಿನಿಂದ ಉಂಟಾಗಿ ಮಣ್ಣಿಗೆ ಸಂಬಂಧ ಪಟ್ಟವನು; ಎರಡನೆಯ ಮನುಷ್ಯನು ಪರಲೋಕದಿಂದ ಬಂದ ಕರ್ತನು.
ಕ್ರಿಸ್ತನ ಪ್ರೀತಿಯು ನಮ್ಮನ್ನು ಒತ್ತಾಯಮಾಡುತ್ತದೆ; ಹೀಗೆ ಎಲ್ಲರಿಗೋಸ್ಕರ ಒಬ್ಬನು ಸತ್ತದ್ದರಿಂದ ಎಲ್ಲರೂ ಸತ್ತಂತಾಯಿತೆಂದು ನಾವು ಹೀಗೆ ನಿಶ್ಚಯಿಸಿಕೊಳ್ಳುತ್ತೇವೆ.
ನನ್ನ ಸಹೋದರರೇ, ಮಹಿಮೆಯುಳ್ಳ ನಮ್ಮ ಕರ್ತನಾದ ಯೇಸು ಕ್ರಿಸ್ತನ ನಂಬಿ ಕೆಯ ವಿಷಯದಲ್ಲಿ ನೀವು ಪಕ್ಷಪಾತಿಗಳಾಗಿರಬಾರದು.