Home Bibles ಪರಮಗೀತ 8:7 · ಕನ್ನಡ ಬೈಬಲ್
ಪರಮಗೀತ 8:7 · ಕನ್ನಡ ಬೈಬಲ್

ಅನೇಕ ಜಲಗಳು ಪ್ರೀತಿಯನ್ನು ಆರಿ ಸಲಾರವು; ಪ್ರವಾಹಗಳು ಅದನ್ನು ಮುಣುಗಿಸ ಲಾರವು; ಮನುಷ್ಯನು ತನ್ನ ಮನೆಯ ಆಸ್ತಿಯನ್ನೆಲ್ಲಾ ಪ್ರೀತಿಗೋಸ್ಕರ ಕೊಟ್ಟರೆ ಅದು ಸಂಪೂರ್ಣವಾಗಿ ತಿರಸ್ಕರಿಸಲ್ಪಡುವದು.

Cross references

ಆದಿಕಾಂಡ 39:19

ನಿನ್ನ ಸೇವಕನು ಹೀಗೆ ನನಗೆ ಮಾಡಿದನೆಂಬದಾಗಿ ತನ್ನ ಹೆಂಡತಿ ಹೇಳಿದ್ದನ್ನು ಕೇಳಿ ಅವನ ಕೋಪವು ಉರಿಯಿತು.

ಸಾಮೇತಿಗಳು 6:31

ಅವನು ಸಿಕ್ಕಿಕೊಂಡರೆ ಏಳರಷ್ಟು ಹಿಂದಕ್ಕೆ ಕೊಡುವನು; ತನ್ನ ಮನೆಯ ಆಸ್ತಿಯನ್ನೆಲ್ಲಾ ಅವನು ಕೊಡುವನು.

ಸಾಮೇತಿಗಳು 6:35

ಅವನು ಯಾವ ಈಡನ್ನು ಲಕ್ಷಿಸುವದಿಲ್ಲ; ಇದ ಲ್ಲದೆ ನೀನು ಎಷ್ಟು ಲಂಚಕೊಟ್ಟರೂ ಅವನು ಒಪ್ಪುವದಿಲ್ಲ.

ಯೆಶಾಯ 43:2

ನೀನು ಜಲರಾಶಿಯನ್ನು ದಾಟಿ ಹೋಗುವಾಗ ನಾನು ನಿನ್ನೊಂದಿಗಿರುವೆನು; ನದಿಗಳನ್ನು ನೀನು ದಾಟುವಾಗ ಅವು ನಿನ್ನನ್ನು ಮುಳುಗಿಸುವದಿಲ್ಲ; ಬೆಂಕಿಯಲ್ಲಿ ನೀನು ನಡೆಯುವಾಗ ಸುಡಲ್ಪಡುವದಿಲ್ಲ; ಇಲ್ಲವೆ ಜ್ವಾಲೆಯು ನಿನ್ನನ್ನು ದಹಿಸದು.

ಮತ್ತಾಯ 7:24

ಆದದರಿಂದ ಯಾವನಾದರೂ ನಾನು ಹೇಳುವ ಈ ನನ್ನ ಮಾತುಗಳನ್ನು ಕೇಳಿ ಅವುಗಳಂತೆ ಮಾಡುವವನನ್ನು ಬಂಡೆಯ ಮೇಲೆ ತನ್ನ ಮನೆಯನ್ನು ಕಟ್ಟಿದ ಬುದ್ಧಿವಂತನಿಗೆ ಹೋಲಿಸುವೆನು.

ರೋಮಾಪುರದವರಿಗೆ 8:28

ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯ ಲ್ಪಟ್ಟು ಆತನನ್ನು ಪ್ರಿತಿಸುವವರ ಒಳ್ಳೇದಕ್ಕಾಗಿ ಎಲ್ಲವು ಗಳು ಒಟ್ಟಾಗಿ ಸಂಭವಿಸುತ್ತವೆಯೆಂದು ನಾವು ಬಲ್ಲೆವು.

ರೋಮಾಪುರದವರಿಗೆ 13:8

ಒಬ್ಬರನ್ನೊಬ್ಬರು ಪ್ರೀತಿಸಬೇಕೆಂಬ ಋಣವೇ ಹೊರತು ಬೇರೆ ಯಾವ ಸಾಲವೂ ನಿಮಗೆ ಇರ ಬಾರದು. ಮತ್ತೊಬ್ಬರನ್ನು ಪ್ರೀತಿಸುವವನು ನ್ಯಾಯಪ್ರಮಾಣವನ್ನೆಲ್ಲಾ ನೆರವೇರಿಸಿದ್ದಾನೆ.

Interlinear

Choose Theme