ಮಾರ್ಥಳು ಆತನಿಗೆ--ಕಡೇ ದಿನದಲ್ಲಿ ಪುನರುತ್ಥಾನವಾಗುವಾಗ ಅವನೂ ತಿರಿಗಿ ಎದ್ದೇಳುವನೆಂದು ನಾನು ಬಲ್ಲೆನು ಎಂದು ಹೇಳಿದಳು.
Cross references
ನಾನಾದರೋ ನೀತಿಯಲ್ಲಿ ನಿನ್ನ ಮುಖವನ್ನು ದೃಷ್ಟಿಸುವೆನು; ನಾನು ಎಚ್ಚರವಾದಾಗ ನಿನ್ನ ಹೋಲಿಕೆಯೊಂದಿಗೆ ತೃಪ್ತಿಹೊಂದುವೆನು.
ಅವರು ಕುರಿ ಗಳಂತೆ ಸಮಾಧಿಯಲ್ಲಿ ಹಾಕಲ್ಪಡುತ್ತಾರೆ; ಮರಣವು ಅವರನ್ನು ತಿನ್ನುತ್ತದೆ; ಯಥಾರ್ಥರು ಬೆಳಿಗ್ಗೆ ಅವರ ಮೇಲೆ ಆಳುವರು; ಅವರಿಗೆ ನಿವಾಸವಿರದ ಹಾಗೆ ಸಮಾಧಿಯಲ್ಲಿ ಅವರ ರೂಪವು ಕ್ಷಯಿಸುವದು.
ಆತನು ಮರಣವನ್ನು ಜಯದಲ್ಲಿ ನುಂಗಿಬಿಡುವನು. ಕರ್ತನಾದ ದೇವರು ಎಲ್ಲಾ ಮುಖ ಗಳಲ್ಲಿರುವ ಕಣ್ಣೀರನ್ನೂ ಒರಸಿಬಿಡುವನು. ತನ್ನ ಜನರ ನಿಂದೆಯನ್ನೂ ಭೂಮಂಡಲದಿಂದಲೇ ತೆಗೆದುಹಾಕು ವನು, ಕರ್ತನೇ ಇದನ್ನು ನುಡಿದಿದ್ದಾನೆ.
ಮೃತರಾದ ನಿನ್ನ ಜನರು ಬದುಕುವರು, ನನ್ನವರ ಹೆಣಗಳು ಏಳುವವು; ದೂಳಿನ ನಿವಾಸಿಗಳೇ; ಎಚ್ಚತ್ತು ಹರ್ಷ ಸ್ವರಗೈಯಿರಿ! ನೀನು ಸುರಿಯುವ ಇಬ್ಬನಿಯು ಇಬ್ಬನಿಯ ಸಸ್ಯಗಳಂತಿವೆ. ಭೂಮಿಯು ಸತ್ತವರನ್ನು ಹೊರಪಡಿಸುವದು.
ಕರ್ತನ ಕೈ ನನ್ನ ಮೇಲೆ ಇತ್ತು; ಅದು ಕರ್ತನ ಆತ್ಮದ ಮೂಲಕ ನನ್ನನ್ನು ಹೊರಗೆ ತಂದು ಪೂರ್ತಿಯಾಗಿ ಎಲುಬುಗಳು ತುಂಬಿರುವ ಕಣಿವೆಗಳ ಮಧ್ಯ ತಳದಲ್ಲಿ ನನ್ನನ್ನು ಬಿಟ್ಟಿತು.
ಭೂಮಿಯ ಧೂಳಿನೊಳಗೆ ನಿದ್ರೆಮಾಡುವವ ರಲ್ಲಿ ಅನೇಕರು ಎಚ್ಚತ್ತು ಕೆಲವರು ನಿತ್ಯಜೀವವನ್ನೂ ಕೆಲವರು ನಿತ್ಯ ನಾಚಿಕೆಗಳನ್ನೂ ಅನುಭವಿಸುವರು.
ಆತನು ಎರಡು ದಿನಗಳಾದ ಮೇಲೆ ನಮ್ಮನ್ನು ಪುನರ್ಜೀವಿಸ ಮಾಡುವನು; ಮೂರನೆಯ ದಿನದಲ್ಲಿ ಆತನೇ ನಮ್ಮನ್ನು ಎಬ್ಬಿಸುವನು; ನಾವು ಆತನ ದೃಷ್ಟಿಯಲ್ಲಿ ಜೀವಿಸುವೆವು.
ನಾನು ಸಮಾಧಿಯ ಶಕ್ತಿಯಿಂದ ಅವರನ್ನು ಈಡು ಕೊಟ್ಟು ವಿಮೋಚಿಸುವೆನು; ಮರಣದಿಂದ ಅವರನ್ನು ಬಿಡಿಸುವೆನು. ಓ ಮರಣವೇ, ನಾನು ನಿನ್ನ ಬಾಧೆಗ ಳಾಗಿರುವೆನು; ಓ ಸಮಾಧಿಯೇ, ನಾನು ನಿನ್ನ ನಾಶನ ವಾಗಿದ್ದೇನೆ; ಪಶ್ಚಾತ್ತಾಪವು ನನ್ನ ಕಣ್ಣುಗಳಿಂದ ಮರೆ ಯಾಗಿದೆ.
ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಆತನ ಬಳಿಗೆ ಬಂದು--
ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವದಕ್ಕೆ ಆಗದಿರುವ ದರಿಂದ ನೀನು ಧನ್ಯನಾಗುವಿ. ಯಾಕಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವದು.
ಇದಕ್ಕೆ ಆಶ್ಚರ್ಯಪಡ ಬೇಡಿರಿ; ಒಂದು ಕಾಲ ಬರುತ್ತದೆ; ಆಗ ಸಮಾಧಿಗಳಲ್ಲಿ ರುವವರೆಲ್ಲರೂ ಆತನ ಧ್ವನಿಯನ್ನು ಕೇಳಿ ಹೊರಗೆ ಬರುವರು,
ಯಾಕಂದರೆ ಆತನು ನಿಷ್ಕರ್ಷೆಮಾಡಿದ ಪುರುಷನ ಕೈಯಿಂದ ನೀತಿಗನುಸಾರವಾಗಿ ಭೂಲೋಕದ ನ್ಯಾಯವಿಚಾರಣೆ ಮಾಡುವದಕ್ಕೆ ಒಂದು ದಿವಸ ವನ್ನು ನೇಮಕ ಮಾಡಿದ್ದಾನೆ. ಆತನನ್ನು ಸತ್ತವರೊಳ ಗಿಂದ ಎಬ್ಬಿಸಿದ್ದರಿಂದ ಇದಕ್ಕೆ ಎಲ್ಲರಿಗೂ ಆಧಾರ ಕೊಟ್ಟಿದ್ದಾನೆ ಅಂದನು.
ಆದರೆ ಒಂದು ಭಾಗ ಸದ್ದುಕಾಯರೂ ಮತ್ತೊಂದು ಭಾಗ ಫರಿಸಾಯರೂ ಇರುವದನ್ನು ಪೌಲನು ಗ್ರಹಿಸಿದಾಗ--ಜನರೇ, ಸಹೋದರರೇ, ನಾನು ಫರಿಸಾಯನು, ಒಬ್ಬ ಫರಿಸಾಯನ ಮಗನು; ನಿರೀಕ್ಷೆಯ ವಿಷಯವಾಗಿಯೂ ಸತ್ತವರ ಪುನರುತ್ಥಾನದ ವಿಷಯವಾಗಿಯೂ ನಾನು ವಿಚಾರಣೆ ಮಾಡಲ್ಪಡುತ್ತಿದ್ದೇನೆ ಎಂದು ಆಲೆ
ಸತ್ತುಹೋದ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವು ಇರುವದೆಂದು ನಾನು ದೇವರ ಕಡೆಗೆ ನಿರೀಕ್ಷೆ ಇಟ್ಟಿದ್ದೇನೆ. ಅದಕ್ಕೆ ಇವರು ಸಹ ಒಪ್ಪಿ ಕೊಳ್ಳುತ್ತಾರೆ.
ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರಿಗಿ ಹೊಂದಿದರು; ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿದರು.