Home Bibles ಹೆಬ್ರಿಯರಿಗೆ 11:35 · ಕನ್ನಡ ಬೈಬಲ್
ಹೆಬ್ರಿಯರಿಗೆ 11:35 · ಕನ್ನಡ ಬೈಬಲ್

ಸ್ತ್ರೀಯರು ಸತ್ತುಹೋಗಿದ್ದ ತಮ್ಮವರನ್ನು ಜೀವದಿಂದ ತಿರಿಗಿ ಹೊಂದಿದರು; ಕೆಲವರು ತಾವು ಯಾತನೆ ಹೊಂದುತ್ತಿರುವಾಗ ಶ್ರೇಷ್ಠ ಪುನರುತ್ಥಾನವನ್ನು ಹೊಂದುವದಕ್ಕೋಸ್ಕರ ಬಿಡುಗಡೆ ಬೇಡವೆಂದು ಹೇಳಿದರು.

Cross references

1 ಅರಸುಗಳು 17:22

ಕರ್ತನು ಎಲೀಯನ ಸ್ವರವನ್ನು ಕೇಳಿದ್ದರಿಂದ ಹುಡುಗನು ಬದುಕುವ ಹಾಗೆ ಅವನ ಪ್ರಾಣವು ಅವನೊಳಗೆ ತಿರಿಗಿ ಬಂತು.

2 ಅರಸುಗಳು 4:27

ಅವಳು--ಕ್ಷೇಮವು ಅಂದಳು. ಅವಳು ಬೆಟ್ಟದ ಮೇಲಿದ್ದ, ದೇವರ ಮನು ಷ್ಯನ ಬಳಿಗೆ ಬಂದು ಅವನ ಪಾದಗಳನ್ನು ಹಿಡಿದಳು. ಆದರೆ ಅವಳನ್ನು ತಳ್ಳಲು ಗೇಹಜಿಯು ಹತ್ತಿರ ಬಂದ ದರಿಂದ ದೇವರ ಮನುಷ್ಯನು--ಅವಳನ್ನು ಬಿಡು; ಅವಳ ಹೃದಯದಲ್ಲಿ ದುಃಖವಿದೆ; ಕರ್ತನು ಅದನ್ನು ನನಗೆ ತಿಳಿಸದೆ ಮರೆಮಾಡಿದ್ದಾನೆ ಅಂದನು.

ಮತ್ತಾಯ 22:30

ಯಾಕಂದರೆ ಪುನರುತ್ಥಾನದಲ್ಲಿ ಅವರು ಮದುವೆಯಾಗುವದಿಲ್ಲ ಮತ್ತು ಮದುವೆ ಮಾಡಿಕೊಡುವದೂ ಇಲ್ಲ; ಆದರೆ ಅವರು ಪರಲೋಕ ದಲ್ಲಿರುವ ದೇವದೂತರಂತೆ ಇರುತ್ತಾರೆ.

ಮಾರ್ಕ 12:25

ಯಾಕಂ ದರೆ ಅವರು ಸತ್ತವರೊಳಗಿಂದ ಎದ್ದ ಮೇಲೆ ಮದುವೆ ಮಾಡಿಕೊಳ್ಳುವದೂ ಇಲ್ಲ, ಮದುವೆ ಮಾಡಿಕೊಡು ವದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೂತರಂತೆ ಇರುತ್ತಾರೆ.

ಲೂಕ 7:12

ಆತನು ಪಟ್ಟಣ ದ್ವಾರದ ಸವಿಾಪಕ್ಕೆ ಬಂದಾಗ ಇಗೋ, ಸತ್ತುಹೋಗಿದ್ದ ಒಬ್ಬ ಮನುಷ್ಯನನ್ನು ಹೊತ್ತುಕೊಂಡು ಹೋಗುತ್ತಿದ್ದರು. ಅವನು ತನ್ನ ತಾಯಿಗೆ ಒಬ್ಬನೇ ಮಗನು; ಆಕೆಯು ವಿಧವೆಯಾಗಿ ದ್ದಳು. ಪಟ್ಟಣದ ಬಹಳ ಜನರು ಆಕೆಯೊಂದಿಗೆ ಇದ್ದರು.

ಲೂಕ 14:14

ಆಗ ಅವರು ನಿನಗೆ ಪ್ರತ್ಯುಪಕಾರ ಮಾಡುವದಕ್ಕೆ ಆಗದಿರುವ ದರಿಂದ ನೀನು ಧನ್ಯನಾಗುವಿ. ಯಾಕಂದರೆ ನೀತಿವಂತರ ಪುನರುತ್ಥಾನದಲ್ಲಿ ನಿನಗೆ ಪ್ರತ್ಯುಪಕಾರವಾಗುವದು.

ಲೂಕ 20:36

ಇದಲ್ಲದೆ ಅವರು ಇನ್ನೆಂದಿಗೂ ಸಾಯುವದಿಲ್ಲ; ಯಾಕಂದರೆ ಅವರು ದೂತರಿಗೆ ಸರಿಸಮಾನರೂ ಪುನರುತ್ಥಾನದ ಮಕ್ಕಳೂ ಆಗಿರುವದ ರಿಂದ ಅವರು ದೇವರ ಮಕ್ಕಳಾಗಿದ್ದಾರೆ.

ಯೋಹಾನ 5:29

ಒಳ್ಳೇದನ್ನು ಮಾಡಿದವರು ಜೀವದ ಪುನರುತ್ಥಾನವನ್ನೂ ಕೆಟ್ಟದ್ದನ್ನು ಮಾಡಿದವರು ತೀರ್ಪಿನ ಪುನರುತ್ಥಾನವನ್ನೂ ಹೊಂದುವರು.

ಯೋಹಾನ 11:40

ಯೇಸು ಆಕೆಗೆ--ನೀನು ನಂಬುವದಾದರೆ ದೇವರ ಮಹಿಮೆಯನ್ನು ನೋಡುವಿ ಎಂದು ನಾನು ನಿನಗೆ ಹೇಳಲಿಲ್ಲವೇ ಅಂದನು.

ಅಪೋಸ್ತಲರ ಕೃತ್ಯಗಳು 4:19

ಅದಕ್ಕೆ ಪೇತ್ರ ಯೋಹಾನರು ಪ್ರತ್ಯುತ್ತರವಾಗಿ ಅವರಿಗೆ--ದೇವರ ಮಾತಿಗಿಂತ ನಿಮ್ಮ ಮಾತನ್ನು ಕೇಳು ವದು ದೇವರ ದೃಷ್ಟಿಯಲ್ಲಿ ಸರಿಯೋ ನೀವೇ ತೀರ್ಪು ಮಾಡಿರಿ.

ಅಪೋಸ್ತಲರ ಕೃತ್ಯಗಳು 9:41

ಅವನು ಆಕೆಯನ್ನು ಕೈಕೊಟ್ಟು ಎಬ್ಬಿಸಿ ಪರಿಶುದ್ಧರನ್ನೂ ವಿಧವೆಯರನ್ನೂ ಕರೆದು ಜೀವಿತಳಾದ ಆಕೆಯನ್ನು ಅವರಿಗೆ ಒಪ್ಪಿಸಿದನು.

ಅಪೋಸ್ತಲರ ಕೃತ್ಯಗಳು 22:24

ಯಾವದಕ್ಕಾಗಿ ಅವರು ಅವನಿಗೆ ವಿರೋಧವಾಗಿ ಕೂಗಿಕೊಂಡರೆಂಬದನ್ನು ಮುಖ್ಯ ನಾಯಕನು ತಿಳುಕೊಳ್ಳುವಂತೆ ಅವನನ್ನು ಕೋಟೆ ಯೊಳಕ್ಕೆ ತರಬೇಕೆಂದು ಆಜ್ಞಾಪಿಸಿ ಕೊರಡೆಗಳಿಂದ ಹೊಡೆದು ವಿಚಾರಿಸಬೇಕೆಂದು ಅಪ್ಪಣೆಕೊಟ್ಟನು;

ಅಪೋಸ್ತಲರ ಕೃತ್ಯಗಳು 22:29

ಆಗ ಅವನನ್ನು ವಿಚಾರಿಸಬೇಕೆಂದಿದ್ದವರು ಕೂಡಲೆ ಅವನನ್ನು ಬಿಟ್ಟು ಹೋದರು; ಇದಲ್ಲದೆ ಆ ಮುಖ್ಯನಾಯಕನು ಸಹ ತಾನು ಬಂಧಿಸಿದವನು ರೋಮ್‌ನವನೆಂದು ತಿಳಿದು ಭಯಪಟ್ಟನು.ಅವನ ಮೇಲೆ ಯೆಹೂದ್ಯರು ತಪ್ಪು ಹೊರಿಸಿದ ನಿಜವಾದ ವಿಷಯವನ್ನು ತಿಳಿಯಬೇಕೆಂದು ಅಪೇಕ್ಷಿಸಿ ಮುಖ್ಯ ನಾಯಕನು ಮರುದಿನ ಅವನ ಬೇಡಿಗಳನ್ನು ಬಿಚ್ಚಿ ಪ್ರಧಾನಯಾಜಕರೂ ಆಲೋಚನಾ ಸಭೆಯವ ರೆಲ್ಲರೂ ಸೇರಿಬರಬೇಕೆಂದು ಅಪ್ಪಣೆ ಕೊಟ್ಟ ಪೌಲನನ್ನು ಕರೆದುಕೊಂಡು ಹೋಗಿ ಅವರ ಮುಂದೆ ನಿಲ್ಲಿಸಿದ

ಅಪೋಸ್ತಲರ ಕೃತ್ಯಗಳು 23:6

ಆದರೆ ಒಂದು ಭಾಗ ಸದ್ದುಕಾಯರೂ ಮತ್ತೊಂದು ಭಾಗ ಫರಿಸಾಯರೂ ಇರುವದನ್ನು ಪೌಲನು ಗ್ರಹಿಸಿದಾಗ--ಜನರೇ, ಸಹೋದರರೇ, ನಾನು ಫರಿಸಾಯನು, ಒಬ್ಬ ಫರಿಸಾಯನ ಮಗನು; ನಿರೀಕ್ಷೆಯ ವಿಷಯವಾಗಿಯೂ ಸತ್ತವರ ಪುನರುತ್ಥಾನದ ವಿಷಯವಾಗಿಯೂ ನಾನು ವಿಚಾರಣೆ ಮಾಡಲ್ಪಡುತ್ತಿದ್ದೇನೆ ಎಂದು ಆಲೆ

ಅಪೋಸ್ತಲರ ಕೃತ್ಯಗಳು 24:15

ಸತ್ತುಹೋದ ನೀತಿವಂತರಿಗೂ ಅನೀತಿವಂತರಿಗೂ ಪುನರುತ್ಥಾನವು ಇರುವದೆಂದು ನಾನು ದೇವರ ಕಡೆಗೆ ನಿರೀಕ್ಷೆ ಇಟ್ಟಿದ್ದೇನೆ. ಅದಕ್ಕೆ ಇವರು ಸಹ ಒಪ್ಪಿ ಕೊಳ್ಳುತ್ತಾರೆ.

1 ಕೊರಿಂಥದವರಿಗೆ 15:54

ಲಯವಾಗುವಂಥದ್ದು ನಿರ್ಲಯತ್ವವನ್ನು ಧರಿಸಿ ಕೊಳ್ಳುವದು, ಮರಣಾಧೀನವಾಗಿರುವಂಥದ್ದು ಅಮರ ತ್ವವನ್ನು ಧರಿಸಿಕೊಳ್ಳುವದು; ಆಗ ಬರೆದಿರುವ ಮಾತು ನೆರವೇರುವದು, ಆ ಮಾತು ಏನಂದರೆ--ಜಯವು ಮರಣವನ್ನು ನುಂಗಿತು ಎಂಬದೇ.

ಫಿಲಿಪ್ಪಿಯವರಿಗೆ 3:11

ಹೇಗಾದರೂ ಸತ್ತವರಿಗೆ ಆಗುವ ಪುನರುತ್ಥಾನವು ನನಗೆ ಆದೀತು.

Interlinear

Choose Theme