ನಿರ್ಣಯದ ತಗ್ಗಿನಲ್ಲಿ ಗುಂಪುಗಳು, ಗುಂಪುಗಳು; ಕರ್ತನ ದಿನವು ನಿರ್ಣ ಯದ ತಗ್ಗಿನಲ್ಲಿ ಸವಿಾಪವಾಗಿದೆ.
Cross references
ಕರ್ತನು ಅವನ ದಿನ ಬರುತ್ತದೆಂದು ನೋಡಿ ನಗುತ್ತಾನೆ.
ಕರ್ತನು ಸಕಲ ಜನಾಂಗಗಳ ಮೇಲೆ ಕೋಪಮಾಡಿ ಅವುಗಳ ಎಲ್ಲಾ ಸೈನ್ಯಗಳ ಮೇಲೆ ರೋಷಗೊಂಡು ಅವರನ್ನು ಕೊಲೆಗೆ ಈಡುಮಾಡಿ ಸಂಪೂರ್ಣವಾಗಿ ನಾಶಮಾಡಿದ್ದಾನೆ.
ಎದೋಮಿನಿಂದಲೂ ರಕ್ತಾಂಬರ ಧರಿಸಿಕೊಂಡು ಬೊಚ್ರದಿಂದಲೂ ಬರುವ ಇವನ್ಯಾರು? ಪ್ರಭೆಯುಳ್ಳ ವಸ್ತ್ರಗಳನ್ನು ತೊಟ್ಟುಕೊಂಡ ವನಾಗಿ ತನ್ನ ಮಹಾಪರಾಕ್ರಮದಲ್ಲಿ ಸಂಚಾರ ಮಾಡುವ ಇವನ್ಯಾರು? ನೀತಿಯಲ್ಲಿ ಮಾತನಾಡು ವವನೂ ರಕ್ಷಿಸಲು ಬಲಿಷ್ಠನೂ ಆಗಿರುವ ನಾನೇ.
ಬಹಳ ದಿವಸಗಳಾದ ಮೇಲೆ ನಾನು ನಿನ್ನನ್ನು ಪರಿಶೀ ಲಿಸುತ್ತೇನೆ; ವರುಷಗಳ ಅಂತ್ಯದಲ್ಲಿ ನೀನು ಕತ್ತಿಯಿಂದ ಹಿಂತಿರುಗಿಸಲ್ಪಟ್ಟಂಥ ದೇಶಕ್ಕೂ ಯಾವಾಗಲೂ ಬೀಡಾ ಗಿದ್ದ ಇಸ್ರಾಯೇಲ್ ಪರ್ವತಗಳ ಮೇಲೆಯೂ ಜನಾಂಗಗಳೊಳಗಿಂದ ಮುಂದೆ ತರಲ್ಪಟ್ಟು ಎಲ್ಲರೂ ಭದ್ರವಾಗಿ ವಾಸಿಸುವವರ ಬಳಿಗೂ ಬರುವಿ.
ಇಗೋ, ಇದು ಬಂತು, ಮತ್ತು ಇದು ನೆರವೇರಿತು; ನಾನು ಮುಂತಿಳಿಸಿದ ದಿನವು ಇದೇ ಎಂದು ದೇವರಾದ ಕರ್ತನು ಹೇಳುತ್ತಾನೆ;
ಆ ದಿನಕ್ಕಾಗಿ ಅಯ್ಯೋ, ಯಾಕಂದರೆ ಕರ್ತನ ದಿನವು ಸವಿಾಪವಾಗಿದೆ; ಸರ್ವಶಕ್ತನ ಕಡೆಯಿಂದ ನಾಶದಂತೆ ಬರುತ್ತದೆ.
ನೀವು ಚೀಯೋನಿನಲ್ಲಿ ಕೊಂಬುಊದಿರಿ, ನನ್ನ ಪರಿಶುದ್ಧ ಪರ್ವತದಲ್ಲಿ ಆರ್ಭಟಿಸಿರಿ; ದೇಶದ ನಿವಾಸಿಗಳೆಲ್ಲರೂ ನಡುಗಲಿ; ಯಾಕಂದರೆ ಕರ್ತನ ದಿನವು ಬರುತ್ತದೆ; ಅದು ಸವಿಾಪ ವಾಗಿದೆ.
ಎಲ್ಲಾ ಜನಾಂಗಗಳನ್ನು ಕೂಡಿಸಿ ಯೆಹೋಷಾಫಾಟನ ತಗ್ಗಿಗೆ ಅವರನ್ನು ಇಳಿಸಿ ನನ್ನ ಜನರೂ ನನ್ನ ಬಾಧ್ಯತೆಯೂ ಆಗಿರುವ ಇಸ್ರಾಯೇಲಿನ ವಿಷಯ ಅವರ ಸಂಗಡ ವ್ಯಾಜ್ಯವಾಡುವೆನು; ಅವರು ಅವರನ್ನು ಜನಾಂಗಗಳಲ್ಲಿ ಚದರಿಸಿ ನನ್ನ ದೇಶವನ್ನು ಪಾಲಿಟ್ಟು
ನಾಯಿಗಳಿಗೆ ಎಚ್ಚರಿಕೆಯಾಗಿರ್ರಿ; ದುಷ್ಟ ಕೆಲಸದವರಿಗೆ ಎಚ್ಚರಿಕೆ ಯಾಗಿರ್ರಿ. ಅಂಗಚ್ಛೇದನೆಯ ವಿಷಯದಲ್ಲಿ ಎಚ್ಚರಿಕೆ ಯಾಗಿರ್ರಿ.
ಆದರೆ ಈಗಿನ ಆಕಾಶಗಳೂ ಭೂಮಿಯೂ ಅದೇ ವಾಕ್ಯದಿಂದ ಭದ್ರವಾಗಿ ಇಡಲ್ಪಟ್ಟಿದ್ದು ನ್ಯಾಯ ತೀರ್ವಿಕೆಯ ದಿನದವರೆಗೂ ಭಕ್ತಿಹೀನರ ನಾಶನಕ್ಕಾಗಿ ಬೆಂಕಿಯು ಕಾದಿಡಲ್ಪಟ್ಟಿದೆ ಎಂಬದು.
ಅವು ಮಹತ್ಕಾರ್ಯಗಳನ್ನು ಮಾಡುವ ದೆವ್ವಗಳ ಆತ್ಮಗಳೇ; ಸರ್ವಶಕ್ತನಾದ ದೇವರ ಮಹಾ ದಿನದಲ್ಲಾಗುವ ಯುದ್ಧಕ್ಕೆ ಭೂಲೋಕದ ಮತ್ತು ಪ್ರಪಂಚದ ಎಲ್ಲಾ ರಾಜರನ್ನು ಕೂಡಿಸುವದಕ್ಕಾಗಿ ಅವರ ಬಳಿಗೆ ಹೋಗುವವು.
ತರುವಾಯ ಆ ಮೃಗವೂ ಭೂರಾಜರೂ ಅವರ ಸೈನ್ಯಗಳೂ ಆ ಕುದುರೆಯ ಮೇಲೆ ಕೂತಿದ್ದಾತನ ಮೇಲೆಯೂ ಆತನ ಸೈನ್ಯದ ಮೇಲೆಯೂ ಯುದ್ಧ ಮಾಡುವದಕ್ಕಾಗಿ ಕೂಡಿಬಂದಿರುವದನ್ನು ನಾನು ಕಂಡೆನು.