Home Bibles ಯೆಹೆಜ್ಕೇಲ 39:8 · ಕನ್ನಡ ಬೈಬಲ್
ಯೆಹೆಜ್ಕೇಲ 39:8 · ಕನ್ನಡ ಬೈಬಲ್

ಇಗೋ, ಇದು ಬಂತು, ಮತ್ತು ಇದು ನೆರವೇರಿತು; ನಾನು ಮುಂತಿಳಿಸಿದ ದಿನವು ಇದೇ ಎಂದು ದೇವರಾದ ಕರ್ತನು ಹೇಳುತ್ತಾನೆ;

Cross references

ಯೆಶಾಯ 33:10

ಕರ್ತನು ಹೀಗನ್ನುತ್ತಾನೆ--ನಾನು ಈಗ ಏಳುವೆನು, ಈಗಲೇ ನನ್ನನ್ನು ಉನ್ನತಪಡಿಸಿ ಕೊಳ್ಳುವೆನು, ಈಗ ಉನ್ನತೋನ್ನತನಾಗುವೆನು.

ಯೆಶಾಯ 46:10

ಆರಂಭದಲ್ಲಿಯೇ ಅಂತ್ಯವನ್ನೂ ಪೂರ್ವಕಾಲದಿಂದ ಇನ್ನೂ ನಡೆಯದ ಸಂಗತಿಗಳನ್ನೂ ಪ್ರಕಟಿಸಿದ್ದೇನೆ; ನನ್ನ ಆಲೋಚನೆಯು ನಿಲ್ಲುವ ದೆಂದೂ ನಾನು ಮೆಚ್ಚಿದ್ದನ್ನೆಲ್ಲಾ ಮಾಡುವೆನೆಂದೂ ಅರುಹಿದ್ದೇನೆ.

ಯೆಹೆಜ್ಕೇಲ 7:2

ಮನುಷ್ಯಪುತ್ರನೇ, ದೇವರಾದ ಕರ್ತನು ಇಸ್ರಾ ಯೇಲ್‌ ದೇಶಕ್ಕೆ ಹೀಗೆ ಹೇಳುತ್ತಾನೆ--ಅಂತ್ಯವು ಬಂದಿದೆ; ಈ ದೇಶದ ನಾಲ್ಕು ಮೂಲೆಗಳಲ್ಲೂ ಅಂತ್ಯವು ಬಂದಿದೆ.

ಯೆಹೆಜ್ಕೇಲ 33:33

ಯಾವಾಗ ಇದು ಬರುತ್ತದೋ ಆಗ ಅವರಿಗೆ ಪ್ರವಾದಿಯು ತಮ್ಮ ಸಂಗಡ ಇದ್ದಾನೆಂದು ತಿಳಿಯುವದು.

ಯೆಹೆಜ್ಕೇಲ 38:17

ದೇವರಾದ ಕರ್ತನು ಹೀಗೆ ಹೇಳುತ್ತಾನೆ--ನಾನು ಯಾವನ ವಿಷಯವಾಗಿ ನನ್ನ ಸೇವಕರಾದ ಇಸ್ರಾಯೇಲಿನ ಪ್ರವಾದಿಗಳಿಂದ ಪೂರ್ವಕಾಲದಲ್ಲಿ ಮಾತನಾಡಿದೆನೋ ಅವನು ನೀನೇ ಅಲ್ಲವೇ? ನಿನ್ನನ್ನು ಅವರಿಗೆ ವಿರೋಧವಾಗಿ ಬರ ಮಾಡುತ್ತೇನೆಂದು ಆ ದಿನಗಳಲ್ಲಿ ಅನೇಕ ವರ್ಷಗ ಳಿಗೆ ಮುಂಚೆ ಪ್ರವಾದಿಸಿದರಲ್ಲವೇ?

2 ಪೇತ್ರ 3:8

ಆದರೆ ಪ್ರಿಯರೇ, ಕರ್ತನ ಎಣಿಕೆಯಲ್ಲಿ ಒಂದು ದಿನವು ಸಾವಿರ ವರುಷಗಳಂತೆಯೂ ಸಾವಿರ ವರುಷಗಳು ಒಂದು ದಿನದಂತೆಯೂ ಅವೆ ಎಂಬದನ್ನು ಮಾತ್ರ ತಿಳಿಯದವರಾಗಿರಬೇಡಿರಿ.

ಪ್ರಕಟನೆ 16:17

ಏಳನೆಯ ದೂತನು ತನ್ನ ಪಾತ್ರೆಯಲ್ಲಿದ್ದದ್ದನ್ನು ವಾಯುಮಂಡಲದಲ್ಲಿ ಹೊಯ್ಯಲು ಪರಲೋಕದಲ್ಲಿದ್ದ ಆಲಯದೊಳಗಿಂದಲೂ ಸಿಂಹಾಸನದಿಂದಲೂ ಮಹಾಶಬ್ದವು ಬಂದು--ಮುಗಿಯಿತು ಎಂದು ಹೇಳಿತು.

ಪ್ರಕಟನೆ 21:6

ಇದಲ್ಲದೆ ಆತನು ನನಗೆ--ಎಲ್ಲಾ ಮುಗಿಯಿತು. ನಾನು ಅಲ್ಫಾವೂ ಓಮೆಗವೂ ಆದಿಯೂ ಅಂತ್ಯವೂ ಆಗಿದ್ದೇನೆ. ದಾಹವುಳ್ಳವನಿಗೆ ಜೀವದ ನೀರಿನ ಬುಗ್ಗೆಯಿಂದ ನಾನು ನೀರನ್ನು ಉಚಿತವಾಗಿ ಕೊಡುವೆನು.

Interlinear

Choose Theme