ನಾನು ನಾಶವಾಗುವದು ದೇವರಿಗೆ ಮೆಚ್ಚಿಕೆಯಾಗುವದಾದರೆ ತನ್ನ ಕೈಚಾಚಿ ನನ್ನನ್ನು ಸಾಯಿಸಿದರೆ ಒಳ್ಳೆದು.
Cross references
ಒಬ್ಬಂಟಿ ಗನಾಗಿ ಈ ಸಮಸ್ತ ಜನರನ್ನು ಹೊತ್ತುಕೊಳ್ಳುವದಕ್ಕೆ ನಾನು ಶಕ್ತನಲ್ಲ, ಅದು ನನಗೆ ಅತಿ ದೊಡ್ಡ ಭಾರ ವಾಗಿದೆ.
ಆದರೆ ಅವನು ಅರಣ್ಯದಲ್ಲಿ ಒಂದು ದಿವಸದ ಪ್ರಯಾಣ ಮಾಡಿ ಷಿಟ್ಟೀಮ್ ಮರದ ಕೆಳಗೆ ಕುಳಿತು ತಾನು ಸಾಯಬೇಕೆಂದು ಬೇಡಿ ಕೊಂಡು--ಕರ್ತನೇ, ಈಗ ಸಾಕು; ನನ್ನ ಪ್ರಾಣವನ್ನು ತೆಗೆದುಕೋ. ಯಾಕಂದರೆ ನನ್ನ ಪಿತೃಗಳಿಗಿಂತ ನಾನು ಉತ್ತಮನಲ್ಲ ಅಂದನು.
ಕಷ್ಟದಲ್ಲಿರುವವನಿಗೆ ಬೆಳಕೂ ಕಹಿಯಾದ ಪ್ರಾಣ ವುಳ್ಳವರಿಗೆ ಜೀವವೂ ಯಾಕೆ ಕೊಡಲ್ಪಟ್ಟಿವೆ?
ಬಾರ ದಿರುವ ಮರಣಕ್ಕೋಸ್ಕರ ಕಾದುಕೊಂಡವರಿಗೂ ಅಡ ಗಿಸಿದ ನಿಧಿಗಿಂತಲೂ ಹೆಚ್ಚಾಗಿ ಅದಕ್ಕಾಗಿ ಅಗೆಯುತ್ತಾರೆ.
ಆದದರಿಂದ ನನ್ನ ಪ್ರಾಣವು ಕೊರಳು ಹಿಸುಕುವದನ್ನೂ ನನ್ನ ಜೀವವು ಮರಣವನ್ನೂ ಆದು ಕೊಳ್ಳುತ್ತದೆ.
ನನ್ನ ಪ್ರಾಣವು ನನ್ನ ಜೀವನಕ್ಕಾಗಿ ಬೇಸರಗೊಂಡಿದೆ. ನನ್ನ ದೂರುಗಳನ್ನು ನನ್ನ ಮೇಲೆಯೇ ಬಿಡುವೆನು; ನನ್ನ ಮನೋವ್ಯಥೆ ಯಿಂದ ಮಾತನಾಡುವೆನು.
ನೀನು ನನ್ನನ್ನು ಸಮಾಧಿಯಲ್ಲಿ ಮರೆಮಾಡಿ, ನಿನ್ನ ಕೋಪವು ತಿರುಗುವ ವರೆಗೂ ನನ್ನನ್ನು ಅಡಗಿಸಿ ನನಗೆ ನೇಮಕವಾದ ಸಮಯವನ್ನು ನೇಮಿಸಿ ನನ್ನನ್ನು ಜ್ಞಾಪಕಮಾಡಿಕೊಂಡರೆ ಲೇಸು.
ನನ್ನ ಸ್ನೇಹಿತರಾದ ನೀವೇ ನನ್ನನ್ನು ಕನಿಕರಿಸಿರಿ, ನನ್ನನ್ನು ಕನಿಕರಿಸಿರಿ; ಯಾಕಂದರೆ ದೇವರ ಕೈ ನನ್ನನ್ನು ಮುಟ್ಟಿದೆ.
ರಾತ್ರಿ ಹಗಲು ನಿನ್ನ ಕೈ ನನ್ನ ಮೇಲೆ ಭಾರವಾಗಿತ್ತು; ಬೇಸಿಗೆಯ ಬರಗಾಲಕ್ಕೆ ನನ್ನ ಸಾರವು ತಿರುಗಿಕೊಂಡಿತು. ಸೆಲಾ.
ಇಗೋ, ನಾನು ನಿನ್ನನ್ನು ಶೋಧಿಸಿದ್ದೇನೆ; ಆದರೆ ಬೆಳ್ಳಿಯಂತೆ ಅಲ್ಲ; ಸಂಕಟದ ಕುಲುಮೆಯಿಂದ ನಿನ್ನನ್ನು ಆದು ಕೊಂಡಿದ್ದೇನೆ.
ಆದದರಿಂದ ಓ ಕರ್ತನೇ, ಈಗಲೇ ನನ್ನ ಪ್ರಾಣವನ್ನು ನನ್ನಿಂದ ತೆಗೆ; ನಾನು ಬದುಕುವ ದಕ್ಕಿಂತ ಸಾಯುವದು ಒಳ್ಳೇದು ಅಂದನು.
ಆದದ್ದೇನಂದರೆ, ಸೂರ್ಯೋದಯವಾದಾಗ ದೇವರು ಉಗ್ರವಾದ ಮೂಡಣ ಗಾಳಿಯನ್ನು ಸಿದ್ಧ ಮಾಡಿದನು; ಆಗ ಬಿಸಿಲು ಯೋನನ ತಲೆಯ ಮೇಲೆ ಬಡಿದದ್ದರಿಂದ ಅವನು ಮೂರ್ಛೆಹೋಗಿ ತನ್ನಲ್ಲಿ ಮರಣವನ್ನು ಕೇಳಿಕೊಂಡು--ನಾನು ಬದುಕುವದಕ್ಕಿಂತ ಸಾಯುವದು ಒಳ್ಳೇದು ಅಂದನು.
ಆ ದಿನಗಳಲ್ಲಿ ಮನುಷ್ಯರು ಮರಣವನ್ನು ಹುಡುಕಿ ಅದನ್ನು ಕಾಣದೆ ಇರುವರು; ಸಾಯಬೇಕೆಂದು ಕೋರು ವರು, ಆದರೆ ಮೃತ್ಯುವು ಅವರ ಬಳಿಯಿಂದ ಓಡಿ ಹೋಗುವದು