ನೀರು ಹೊಯ್ಯುವಿಕೆಯಿಂದ ಮೋಡವನ್ನು ಭಾರಮಾಡುತ್ತಾನೆ; ಆತನು ತನ್ನ ಬೆಳಕಿನ ಮೇಘವನ್ನು ಚದರಿಸುತ್ತಾನೆ.
Cross references
ಅಹಾಬನು ತಿಂದು ಕುಡಿಯು ವದಕ್ಕೆ ಹೋದನು; ಎಲೀಯನು ಕರ್ಮೆಲ್ ಬೆಟ್ಟಕ್ಕೆ ಏರಿ ನೆಲದ ಮೇಲೆ ಬಿದ್ದು ತನ್ನ ಮುಖವನ್ನು ತನ್ನ ಮೊಣಕಾಲುಗಳ ನಡುವೆ ಬೊಗ್ಗಿಸಿ
ನೀರನ್ನು ತನ್ನ ಮಂದವಾದ ಮೇಘಗಳಲ್ಲಿ ಕಟ್ಟುತ್ತಾನೆ. ಮೇಘವು ಅದರ ಕೆಳಗೆ ಸೀಳಿಹೋಗದು;
ಆತನು ನೀರಿನ ಹನಿಗಳನ್ನು ಕೂಡಿಸಿದಾಗ, ಅದರ ಮಂಜಿನ ಪ್ರಕಾರ ಮಳೆಯನ್ನು ಸುರಿಸುತ್ತವೆ.
ಮೇಘಗಳಿಂದ ಬೆಳಕನ್ನು ಮುಚ್ಚು ತ್ತಾನೆ;ಅದರ ಶಬ್ದವು ಅದರ ವಿಷಯ ತಿಳಿಸುತ್ತದೆ; ಅವುಗಳ ಮಧ್ಯದಲ್ಲಿ ಬರುವ ಮೋಡದಿಂದ ಪ್ರಕಾಶಿಸ ದಂತೆ ಅಪ್ಪಣೆಕೊಡುತ್ತಾನೆ. ಪಶುಗಳು ಸಹ ಮಂಜಿನ ವಿಷಯವಾಗಿ ತಿಳಿಸುತ್ತವೆ.
ಕರ್ತನು ನನಗೆ--ನಾನು ವಿಶ್ರಾಂತಿ ಯನ್ನು ತೆಗೆದುಕೊಳ್ಳುವೆನು. ಬಿಸಿಲಿನಲ್ಲಿ ಜಳಜಳಿಸುವ ಧಗೆಯಂತೆಯೂ ಸುಗ್ಗಿಯಲ್ಲಿನ ಮಂಜಿನ ಮೋಡದ ಹಾಗೂ ನಾನು ನನ್ನ ವಾಸಸ್ಥಾನದಲ್ಲಿ ಸುಮ್ಮನಿದ್ದು ದೃಷ್ಟಿಸುತ್ತಿರುವೆನು ಎಂದು ಹೇಳಿದನು.
ಅವನು ಇನ್ನೂ ಮಾತನಾಡುತ್ತಿರುವಾಗಲೇ ಇಗೋ, ಪ್ರಕಾಶಮಾನವಾದ ಮೇಘವು ಅವರ ಮೇಲೆ ಕವಿದುಕೊಂಡಿತು; ಆಗ ಇಗೋ--ನಾನು ಬಹಳವಾಗಿ ಮೆಚ್ಚಿಕೊಂಡಿರುವ ಪ್ರಿಯನಾದ ನನ್ನ ಮಗನು ಈತನೇ; ಈತನ ಮಾತನ್ನು ನೀವು ಕೇಳಿರಿ ಎಂದು ಹೇಳುವ ಧ್ವನಿಯು ಮೇಘದೊಳಗಿಂದ ಉಂಟಾಯಿತು.