Home Bibles ಯೋಬ 26:8 · ಕನ್ನಡ ಬೈಬಲ್
ಯೋಬ 26:8 · ಕನ್ನಡ ಬೈಬಲ್

ನೀರನ್ನು ತನ್ನ ಮಂದವಾದ ಮೇಘಗಳಲ್ಲಿ ಕಟ್ಟುತ್ತಾನೆ. ಮೇಘವು ಅದರ ಕೆಳಗೆ ಸೀಳಿಹೋಗದು;

Cross references

ಆದಿಕಾಂಡ 1:6

ಇದಲ್ಲದೆ ದೇವರು--ನೀರುಗಳ ನಡುವೆ ವಿಶಾಲ ವಿರಲಿ ಮತ್ತು ಅದು ನೀರುಗಳಿಂದ ನೀರುಗಳನ್ನು ಬೇರೆ ಮಾಡಲಿ ಅಂದನು.

ಆದಿಕಾಂಡ 1:7

ದೇವರು ವಿಶಾಲವನ್ನು ಮಾಡಿ ವಿಶಾಲದ ಕೆಳಗಿದ್ದ ನೀರುಗಳನ್ನು ವಿಶಾಲದ ಮೇಲಿದ್ದ ನೀರುಗಳಿಂದ ಬೇರೆ ಮಾಡಿದನು. ಅದು ಹಾಗೆಯೇ ಆಯಿತು.

ಯೋಬ 36:29

ಮೋಡದ ವಿಸ್ತೀರ್ಣತೆಯನ್ನೂ ಆತನ ಗುಡಾರದ ಶಬ್ಧವನ್ನೂ ತಿಳುಕೊಳ್ಳುವವನಾರು?

ಯೋಬ 37:11

ನೀರು ಹೊಯ್ಯುವಿಕೆಯಿಂದ ಮೋಡವನ್ನು ಭಾರಮಾಡುತ್ತಾನೆ; ಆತನು ತನ್ನ ಬೆಳಕಿನ ಮೇಘವನ್ನು ಚದರಿಸುತ್ತಾನೆ.

ಯೋಬ 38:9

ನಾನು ಅದರ ವಸ್ತ್ರವಾಗಿ ಮೇಘವನ್ನೂ ಅದಕ್ಕೆ ಬಟ್ಟೆಯಾಗಿ ಅಂಧ ಕಾರವನ್ನೂ ಮಾಡಿದಾಗ

ಯೋಬ 38:37

ಯಾವನು ಮೋಡಗಳನ್ನು ಜ್ಞಾನ ದಿಂದ ಎಣಿಸುತ್ತಾನೆ;

ಕೀರ್ತನೆಗಳು 18:10

ಆತನು ಕೆರೂಬಿನ ಮೇಲೆ ಕೂತು ಹಾರಿದನು; ಹೌದು, ಗಾಳಿಯ ರೆಕ್ಕೆಗಳ ಮೇಲೆ ಹಾರಿದನು.

ಕೀರ್ತನೆಗಳು 135:7

ಭೂಮಿಯ ಅಂತ್ಯಗಳಿಂದ ಮೋಡಗಳನ್ನು ಏಳ ಮಾಡಿ, ಮಳೆಗೋಸ್ಕರ ಮಿಂಚು ಗಳನ್ನು ಮಾಡಿ, ಗಾಳಿಯನ್ನು ತನ್ನ ಉಗ್ರಾಣಗಳಿಂದ ಹೊರಗೆ ಬರಮಾಡುತ್ತಾನೆ.

ಸಾಮೇತಿಗಳು 8:28

ಮೇಲೆ ಮೇಘಗಳನ್ನು ಆತನು ಸ್ಥಾಪಿಸಿದಾಗ ಅಗಾಧದ ಬುಗ್ಗೆಗಳನ್ನು ಆತನು ಬಲಪಡಿಸಿದಾಗ

ಸಾಮೇತಿಗಳು 30:4

ಆಕಾಶಕ್ಕೆ ಏರಿದವನು ಇಲ್ಲವೆ ಇಳಿದವನು ಯಾರು? ತನ್ನ ಮುಷ್ಟಿಗಳಲ್ಲಿ ಗಾಳಿಯನ್ನು ಕೂಡಿಸಿದವನಾರು? ವಸ್ತ್ರದಲ್ಲಿ ನೀರನ್ನು ಕಟ್ಟಿದವ ನಾರು? ಭೂಮಿಯ ಕೊನೆಗಳನ್ನೆಲ್ಲಾ ಸ್ಥಾಪಿಸಿದವ ನಾರು? ನೀನು ಹೇಳುವದಾದರೆ ಆತನ ಹೆಸರೇನು? ಆತನ ಮಗನ ಹೆಸರೇನು?

ಯೆಶಾಯ 5:6

ಅದನ್ನು ನಾನು ಹಾಳಾಗಲು ಬಿಡುವೆನು: ಅದನ್ನು ಯಾರೂ ಕುಡಿ ಕತ್ತರಿಸುವದಿಲ್ಲ; ಅಗೆಯುವದೂ ಇಲ್ಲ. ಆದರೆ ಅಲ್ಲಿ ಮುಳ್ಳುಪೊದೆಗಳು ಬೆಳೆಯುವವು; ಅಲ್ಲದೆ ಅದರ ಮೇಲೆ ಮಳೆ ಸುರಿಸಬಾರದೆಂದು ಮೋಡಗಳಿಗೆ ಆಜ್ಞಾ ಪಿಸುವೆನು.

ಯೆರೆಮಿಯ 10:13

ಓ ಯೆಹೂದವೇ, ನಿನ್ನ ಪಟ್ಟಣಗಳಷ್ಟು ನಿನ್ನ ದೇವರುಗಳು ಇದ್ದವು; ಯೆರೂಸಲೇಮಿಗೆ ಎಷ್ಟು ಬೀದಿಗಳೋ ಅಷ್ಟು ಬಲಿಪೀಠಗಳನ್ನು ನಾಚಿಕೆಗೆ ಅಂದರೆ ಅಷ್ಟು ಬಲಿ ಪೀಠಗಳನ್ನು ಬಾಳನಿಗೆ ಧೂಪವನ್ನರ್ಪಿಸುವದಕ್ಕೆ ಇಟ್ಟಿ ದ್ದೀರಿ.

Interlinear

Choose Theme