Home Bibles ಯೋಬ 34:9 · ಕನ್ನಡ ಬೈಬಲ್
ಯೋಬ 34:9 · ಕನ್ನಡ ಬೈಬಲ್

ಅವನು--ದೇವರ ಸಂಗಡ ಆನಂದಿಸುವದು ಮನುಷ್ಯನಿಗೆ ಉಪಯೋಗ ವಿಲ್ಲವೆಂದು ಹೇಳುತ್ತಾನೆ.

Cross references

ಯೋಬ 9:22

ಇದೊಂದು ವಿಷಯ ಆದದರಿಂದ ನಾನು ಅದನ್ನು ಹೇಳಿದ್ದೇನೆ. ಪರಿಪೂರ್ಣರನ್ನೂ ಕೆಟ್ಟ ವರನ್ನೂ ಆತನು ನಾಶಮಾಡುತ್ತಾನೆ.

ಯೋಬ 9:30

ನಾನು ಹಿಮದ ನೀರಿನಲ್ಲಿ ತೊಳಕೊಂಡು ನನ್ನ ಕೈಗಳನ್ನು ಶುಚಿ ಮಾಡೇ ಮಾಡಿದಾಗ್ಯೂ

ಯೋಬ 21:14

ಅವರು ದೇವರಿಗೆ--ನಮ್ಮನ್ನು ಬಿಟ್ಟು ಹೋಗು; ನಿನ್ನ ಮಾರ್ಗಗಳ ತಿಳುವಳಿಕೆಯನ್ನು ನಾವು ಮೆಚ್ಚುವದಿಲ್ಲ.

ಯೋಬ 21:15

ನಾವು ಆತನನ್ನು ಸೇವಿಸುವ ಹಾಗೆ ಸರ್ವಶಕ್ತನು ಯಾರು? ನಾವು ಆತನಿಗೆ ಬಿನ್ನಹ ಮಾಡುವದರಲ್ಲಿ ನಮಗೆ ಪ್ರಯೋಜನವೇನು ಎಂದು ಹೇಳುತ್ತಾರೆ.

ಯೋಬ 21:30

ಆಪತ್ತಿನ ದಿವಸಕ್ಕೆ ಕೆಟ್ಟ ವನು ಇರಿಸಲ್ಪಟ್ಟಿದ್ದಾನೆ. ಉಗ್ರದ ದಿವಸಕ್ಕೆ ಹೊರಗೆ ತರಲ್ಪಡುವನು.

ಯೋಬ 22:3

ನೀನು ನೀತಿವಂತನಾಗಿದ್ದರೆ ಸರ್ವಶಕ್ತನು ಮೆಚ್ಚಬೇಕೋ? ನೀನು ನಿನ್ನ ಮಾರ್ಗಗಳನ್ನು ಸಂಪೂರ್ಣ ಮಾಡಿಕೊಂಡರೆ ಆತನಿಗೆ ಲಾಭ ಉಂಟೋ?

ಯೋಬ 22:17

ನಮ್ಮನ್ನು ಬಿಟ್ಟು ಹೋಗು ಎಂದೂ ಸರ್ವಶಕ್ತನು ನಮಗೆ ಏನು ಮಾಡುವನೆಂದೂ ದೇವರಿಗೆ ಹೇಳಿದವರು ಅವರೇ.

ಯೋಬ 27:10

ಇಲ್ಲವೆ ಸರ್ವಶಕ್ತನಲ್ಲಿ ಆನಂದವಾಗಿರುವನೋ? ಸರ್ವಕಾಲದಲ್ಲಿ ದೇವರನ್ನು ಕರೆಯುವನೋ?

ಯೋಬ 35:3

ನೀನು--ನನಗೆ ಏನು ಪ್ರಯೋಜನವಾಗುವದು? ನನ್ನ ಪಾಪವು ತೊಳೆ ಯಲ್ಪಟ್ಟರೆ ನನಗೆ ಲಾಭವೇನು ಎನ್ನುವಿ.

ಕೀರ್ತನೆಗಳು 37:4

ಕರ್ತನಲ್ಲಿ ಆನಂದವಾಗಿರು; ಆಗ ಆತನು ನಿನ್ನ ಹೃದಯದ ಅಪೇಕ್ಷೆಗಳನ್ನು ನಿನಗೆ ಕೊಡುವನು.

ಯೆಶಾಯ 58:3

ನಾವು ಉಪವಾಸ ಮಾಡಿದ್ದೇವೆ, ನೀನು ಯಾಕೆ ನೋಡುವದಿಲ್ಲ? ನಮ್ಮ ಪ್ರಾಣವನ್ನು ಕುಂದಿಸಲು ನೀನು ಗಮನಿಸದಿರುವದೇಕೆ ಎಂದು ಅವರು ಅಂದು ಕೊಳ್ಳುತ್ತಾರೆ; ಇಗೋ, ನಿಮ್ಮ ಉಪವಾಸದ ದಿನದಲ್ಲಿ ನಿಮ್ಮ ಇಷ್ಟವನ್ನು ತೀರಿಸುತ್ತೀರಿ ಮತ್ತು ನಿಮ್ಮ ಎಲ್ಲಾ ದುಡಿತವನ್ನು ನಿರ್ಬಂಧಿಸುತ್ತೀರಿ.

ಮಲಾಕಿ 3:14

ನೀವು--ದೇವರನ್ನು ಸೇವಿಸುವದು ವ್ಯರ್ಥವೆಂದೂ ನಾವು ಆತನ ನಿಯಮಗಳನ್ನು ಕೈಕೊಂಡು ಸೈನ್ಯಗಳ ಕರ್ತನ ಮುಂದೆ ದುಃಖವಾಗಿ ನಡೆದದ್ದರಿಂದ ಏನು ಪ್ರಯೋ ಜನವೆಂದೂ ಹೇಳಿದಿರಿ.

Interlinear

Choose Theme