ಆದದರಿಂದ ತಿಳುವಳಿಕೆಯುಳ್ಳ ಜನರೇ, ನಾನು ಹೇಳುವದನ್ನು ಕೇಳಿರಿ, ದೇವರಿಗೆ ದುಷ್ಟತ್ವವೂ ಸರ್ವ ಶಕ್ತನಿಗೆ ಅನ್ಯಾಯವೂ ದೂರವಾಗಿರಲಿ.
Cross references
ಆ ಪ್ರಕಾರ ಮಾಡಿ ನೀತಿವಂತರನ್ನು ದುಷ್ಟರ ಸಂಗಡ ಕೊಲ್ಲುವದು ನಿನಗೆ ದೂರವಾಗಿರಲಿ; ಹಾಗೆ ನೀತಿವಂತರನ್ನು ದುಷ್ಟರಿಗೆ ಸಮಾನಮಾಡುವದು ನಿನಗೆ ದೂರ ವಾಗಿರಲಿ; ಭೂಲೋಕಕ್ಕೆಲ್ಲಾ ನ್ಯಾಯಾಧಿಪತಿಯಾಗಿ ರುವಾತನು ನ್ಯಾಯವಾದದ್ದನ್ನು ಮಾಡದೆ ಇರುವನೇ ಅಂದನು.
ಆತನೇ ಬಂಡೆ. ಆತನ ಕಾರ್ಯವು ಸಂಪೂರ್ಣ ವಾದದ್ದು. ಆತನ ಮಾರ್ಗಗಳೆಲ್ಲಾ ನ್ಯಾಯವಾಗಿವೆ; ಆತನು ಸತ್ಯದ ಮತ್ತು ದೋಷರಹಿತನಾದ ದೇವರು, ಆತನು ನೀತಿವಂತನೂ ಯಥಾರ್ಥನೂ ಆಗಿದ್ದಾನೆ.
ದೇವರಾದರೋ, ಆತನ ಮಾರ್ಗವು ಸಂಪೂರ್ಣ ವಾದದ್ದು; ಕರ್ತನ ವಾಕ್ಯವು ಶೋಧಿಸಲ್ಪಟ್ಟದ್ದಾಗಿದೆ; ಆತನಲ್ಲಿ ಭರವಸವಿಡುವವರೆಲ್ಲರಿಗೆ ಗುರಾಣಿಯಾಗಿ ದ್ದಾನೆ.
ಆದಕಾರಣ ಕರ್ತನ ಭಯವು ನಿಮ್ಮ ಮೇಲೆ ಇರಲಿ. ನೀವು ಜಾಗ್ರತೆಯಾಗಿದ್ದು ನಡಿಸಿರಿ. ನಮ್ಮ ಕರ್ತನಾದ ದೇವರ ಬಳಿಯಲ್ಲಿ ಅನ್ಯಾಯವಾದರೂ ಮುಖದಾಕ್ಷಿಣ್ಯ ವಾದರೂ ಲಂಚ ತೆಗೆದುಕೊಳ್ಳುವದಾದರೂ ಇಲ್ಲ ಅಂದನು.
ದೇವರು ಅನ್ಯಾಯವಾದ ತೀರ್ಪುಮಾಡುತ್ತಾನೋ? ಸರ್ವಶಕ್ತನು ನೀತಿಗೆ ವಿರುದ್ಧವಾದದ್ದನ್ನು ಮಾಡು ವನೋ?
ಓ ಜ್ಞಾನಿಗಳೇ, ನನ್ನ ನುಡಿಗಳನ್ನು ಕೇಳಿರಿ; ತಿಳಿದವರೇ ನನಗೆ ಕಿವಿಗೊಡಿರಿ.
ತಿಳುವಳಿಕೆ ಯುಳ್ಳವರು ನನಗೆ ಹೇಳಲಿ, ಜ್ಞಾನಿಯು ನನ್ನ ಮಾತನ್ನು ಕೇಳಲಿ.
ಆತನ ಮಾರ್ಗವನ್ನು ಆತನಿಗೆ ನೇಮಿಸಿದವನಾರು? ನೀನು ಕೆಟ್ಟದ್ದು ಮಾಡಿದಿ ಎಂದು ಹೇಳುವವನಾರು?
ಸರ್ವ ಶಕ್ತನನ್ನು ನಾವು ಕಂಡುಕೊಳ್ಳುವದಿಲ್ಲ; ಆತನು ಶಕ್ತಿಯಲ್ಲಿಯೂ ನ್ಯಾಯತೀರ್ಪಿನಲ್ಲಿಯೂ ಬಹುನೀತಿಯಲ್ಲಿಯೂ ಉನ್ನ ತನಾಗಿದ್ದಾನೆ; ಆತನು ಶ್ರಮೆಪಡಿಸುವದಿಲ್ಲ.ಆದ ದರಿಂದ ಮನುಷ್ಯರು ಆತನಿಗೆ ಭಯಪಡುತ್ತಾರೆ; ಹೃದಯದಲ್ಲಿ ಜ್ಞಾನಿಗಳಾದವರೆಲ್ಲರನ್ನು ಆತನು ಲಕ್ಷಿಸುವದಿಲ್ಲ.
ಕರ್ತನು ಯಥಾರ್ಥನೂ ನನ್ನ ಬಂಡೆಯೂ ಆಗಿದ್ದಾನೆ; ಆತನಲ್ಲಿ ಅನೀತಿ ಇರುವದಿಲ್ಲ.
ಕರ್ತನು ತನ್ನ ಎಲ್ಲಾ ಮಾರ್ಗಗಳಲ್ಲಿ ನೀತಿವಂತನೂ ತನ್ನ ಎಲ್ಲಾ ಕೆಲಸಗಳಲ್ಲಿ ಪರಿಶುದ್ಧನೂ ಆಗಿದ್ದಾನೆ.
ಒಬ್ಬ ಸ್ತ್ರೀಯೊಂದಿಗೆ ವ್ಯಭಿಚಾರ ಮಾಡುವವನು ವಿವೇಕವಿಲ್ಲದವನಾಗಿದ್ದಾನೆ. ಅದನ್ನು ಮಾಡುವವನು ತನ್ನ ಪ್ರಾಣವನ್ನೇ ನಾಶಪಡಿಸಿಕೊಳ್ಳುವನು.
ಶಿಕ್ಷಣವನ್ನು ನಿರಾಕರಿಸುವವನು ತನ್ನ ಪ್ರಾಣವನ್ನೇ ತಿರಸ್ಕರಿಸುತ್ತಾನೆ; ಗದರಿಕೆಗೆ ಕಿವಿಗೊಡುವವನು ವಿವೇಕ ವನ್ನು ಪಡೆಯುತ್ತಾನೆ.ಕರ್ತನ ಭಯವು ಜ್ಞಾನೋ ಪದೇಶ; ಗೌರವಕ್ಕೆ ಮೊದಲು ವಿನಯ.
ಕರ್ತನು ನನಗೆ--ನೀನು ಹೋಗಿ ನಾರಿನ ದಟ್ಟಿಯನ್ನು ತೆಗೆದುಕೊಂಡು ನಿನ್ನ ನಡುವಿಗೆ ಕಟ್ಟು, ಆದರೆ ಅದನ್ನು ನೀರಿನಲ್ಲಿ ಹಾಕಬೇಡ ಅಂದನು;
ನೀತಿ ಯುಳ್ಳ ಕರ್ತನು ಅದರ ಮಧ್ಯದಲ್ಲಿ ಇದ್ದಾನೆ, ಆತನು ಅನ್ಯಾಯಮಾಡುವದಿಲ್ಲ; ಪ್ರತಿ ಬೆಳಿಗ್ಗೆ ತನ್ನ ನ್ಯಾಯ ತೀರ್ಪನ್ನು ಬೆಳಕಿಗೆ ತರುತ್ತಾನೆ; ಆತನು ತಪ್ಪುವಾತನಲ್ಲ, ಆದರೆ ಅನ್ಯಾಯವಂತನು ನಾಚಿಕೆ ಯನ್ನು ಅರಿಯನು.
ಹಾಗೆ ಎಂದಿಗೂ ಆಗು ವದಿಲ್ಲ; ಹೌದು, ಎಲ್ಲಾ ಮನುಷ್ಯರು ಸುಳ್ಳುಗಾರ ರಾದರೂ ದೇವರು ಸತ್ಯವಂತನೇ ಸರಿ;ಯಾಕಂದರೆ--ನೀನು ನಿನ್ನ ಮಾತುಗಳಲ್ಲಿ ನೀತಿವಂತನೆಂದು ನಿರ್ಣ ಯಿಸಲ್ಪಡಬೇಕೆಂತಲೂ ನಿನಗೆ ತೀರ್ಪಾದಾಗ ನೀನು ಗೆಲ್ಲಬೇಕೆಂತಲೂ ಬರೆದದೆ.
ಹಾಗಾದರೆ ನಾವು ಏನು ಹೇಳೋಣ? ದೇವರಲ್ಲಿ ಅನೀತಿ ಉಂಟೋ? ಹಾಗೆ ಎಂದಿಗೂ ಇಲ್ಲ.
ಯಾವನಾದರೂ ಶೋಧನೆಗೆ ಪ್ರೇರೇಪಿಸಲ್ಪಡುವಾಗ--ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ಯಾಕಂದರೆ ದೇವರು ಕೆಟ್ಟದ್ದರಿಂದ ಶೋಧಿಸಲಾರನು; ಆತನು ಯಾರನ್ನೂ ಶೋಧಿಸುವದೂ ಇಲ್ಲ.